ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನದ ನೂತನ ವೆಬ್ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ ದಿನಾಂಕ 14-11-24ರಂದು ನೆಡೆಯಿತು. ಅಂಚೆ ಇಲಾಖೆಯ ಶಿರಸಿ ವಿಭಾಗಿಯ ಅಧಿಕಾರಿ ಹೂವಪ್ಪಾಜಿ ಅನಾವರಣ ಮಾಡಿದರು.
ಜನ ಸಂಪರ್ಕ ಸಾಧಿಸುವಲ್ಲಿ ಜಾಲತಾಣಗಳ ಪಾತ್ರ ಪ್ರಮೂಖವಾಗಿದೆ.
ಇಂದಿನ ತಂತ್ರಜ್ಞಾನವು ತುಂಬಾ ಮುಂದುವರೆದಿದ್ದು ಇದರ ಉಪಯೋಗವನ್ನು ದಿನನಿತ್ಯದ ವ್ಯವಹಾರದಲ್ಲಿ ಪಡೆಯುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲು ಜನರ ಮಧ್ಯೆ ಸಂಪರ್ಕ ಸಾಧಿಸಲು ಕಾರಣವಾಗಿದೆ. ಇದರ ಉಪಯೋಗವು ಎಲ್ಲಾ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ ಎಂದರು. ಶ್ರೀ ದೇವಸ್ಥಾನದ ಅರ್ಚಕರು ಅನಂತ ಭಟ್ ಹೊನ್ನಮ್ಮದೇವಸ್ಥಾನ ಮಾತನಾಡುತ್ತಾ ಧಾರ್ಮಿಕ ಕ್ಷೇತ್ರದಲ್ಲಿ ಭಕ್ತರು ಕ್ಷೇತ್ರದ ಬಗೆಗೆ ಮಾಹಿತಿ ಪಡೆಯಲು, ಅಲ್ಲಿಯ ಪೂಜಾ ವಿಧಿ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು ಜಾಲತಾಣಗಳು ಉಪಯೋಗವಾಗುತ್ತದೆ. ವಿಷೇಶವಾಗಿ ಹೊರಗಿನ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಉದಾಹರಣೆಯೊಂದಿಗೆ ವಿವರಿಸಿದರು.
ಶ್ರೀ ದೇವಸ್ಥಾನದ ಮೊಕ್ತೇಸರರಾದ ಚಂದ್ರಶೇಖರ ಮಂ ಹೆಗಡೆ ಕೊಡ್ತಗಣಿ ಅಧ್ಯಕ್ಷತೆ ವಹಿಸಿದ್ದರು. ಗಜಾನನ ಹೆಗಡೆ ಕೊಡ್ತಗಣಿ ಸ್ವಾಗತಿಸಿ ನಾರಾಯಣಮೂರ್ತಿ ಹೆಗಡೆ ಹರಗಿ ವಂದಿಸಿದರು. ವೆಬ್ ಸೈಟ್ ವಿನ್ಯಾಸ ಬರವಣಿಗೆ ಮಾಹಿತಿಯನ್ನು ನಾರಾಯಣ ಹೊನ್ನಮ್ಮ ದೇವಸ್ಥಾನ ಅಚ್ಚುಕಟ್ಟಾಗಿ ಕಲೆಹಾಕಿದರು.
ಇದೆ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ಮಾಹಿತಿಯುಳ್ಳ ಅಂಚೆ ಲಕೋಟೆಗಾಗಿ ಇಲಾಖೆ ಅವರಿಗೆ ಚೆಕ್ ನೀಡಲಾಯಿತು.