ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರ ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ





Slide 1Slide 1Slide 1Slide 1Slide 1














Slide 1Slide 1Slide 1Slide 1Slide 1









|| ಪ್ರಸಿದತು ಶ್ರೀರಾಮೇಶ್ವರಃ ||
ವೈದಿಕ ಸಂಸ್ಕ್ರತಿಯ ಬೆಳವಣಿಗೆಯಲ್ಲಿ ದೇವಾಲಯಗಳಿಗೆ ಅಪ್ರಥಿಮವಾದ ಮಹತ್ವವು ದೊರಕಿದೆ.ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾಗಿ, ಸಮಾಜ ವ್ಯವಸ್ಥೆಯ ನ್ಯಾಯ ಸಮ್ಮತ ಆರೋಗ್ಯದ ತಾಣಗಳಾಗಿ ದೇವಾಲಯಗಳು ಕ್ರಿಯಾಮುಖಿಯಾಗಿರುವ ಉದಾಹರಣೆಗಳು ಇವೆ.ಇದರಲ್ಲಿ ಇಷ್ಟಿಕಾಪುರಲದಲ್ಲಿ ನೆಲೆಸಿರುವಂತಹ ಶ್ರಿ ರಾಮೇಶ್ವರನ ದೇವಾಲಯವೂ ಒಂದು.
ಉತ್ತರಕನ್ನಡ ಜಿಲ್ಲೆಯ,ಸಿದ್ದಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಇಟಗಿಯಲ್ಲಿ ನೆಲೆಸಿರುವಂತಹ ಶ್ರೀ ರಾಮೇಶ್ವರನ ಇತಿಹಾಸವು ಬಹಳ ಪುರಾತನವಾದದ್ದು.
ಹಿಂದೆ ಈ ಕ್ಷೇತ್ರವು,ಇಷ್ಟಿಕಾಪುರ/ಗಂಗಾಪುರ ಎಂಬ ನಾಮದಿಂದ ಕರೆಯಲ್ಪಡುತ್ತಿತ್ತು ಎಂಬ ಉಲ್ಲೇಖವಿದೆ.
ಈ ಹೆಸರು ಯಜ್ಞಾರ್ಥಕವಾಗಿದ್ದು,ಇಲ್ಲಿ ಹಲವು ಶ್ರೌತ್ರ ಯಾಗಗಳು ಯಜ್ಞಗಳು ನಡೆದಿರುವುದರಿಂದ ಇದಕ್ಕೆ ಇಷ್ಟಿಕಾಪುರ ಎಂಬ ಹೆಸರು ಬಂದಿದೆ.ಕ್ರಿ.ಶ.ಸು.೬ ನೇ ಶತಮಾನದ ಬೃಹತ್ ಸಂಹಿತೆಯಲ್ಲಿ ಇಷ್ಟಿಕಾ ಎಂಬ ಹೆಸರನ್ನೂ ಹೇಳಿದ್ದಾರೆ
ದಕ್ಷಿಣಾಭಿಮುಖವಾಗಿ ಸೀತಾನ್ವೇಷಣೆಯನ್ನು ಮಾಡುತ್ತ ಹೊರಟ ಪ್ರಭು ಶ್ರೀರಾಮನು ತನ್ನ ಪ್ರದೋಷ ಪೂಜೆಗೆಂದು ಸ್ಥಾಪಿಸಿರುವ ಮೂರ್ತಿ ಇದಾಗಿದ್ದು, ಶ್ರೀರಾಮನಿಂದ ಸ್ಥಾಪಿಸಲ್ಪಟ್ಟ ಈ ಲಿಂಗವು ಶ್ರೀರಾಮೇಶ್ವರ ಎಂಬ ಅಭಿನಾಮವನ್ನು ಪಡೆಯಿತು.
ಮೊಕ್ತೇಸರ ಮಂಡಳಿ
ಮ|| ಶ್ರೀ ರಾಮೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ
m: 9449192311
