itgi temple

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ

ಶ್ರೀಕ್ಷೇತ್ರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ವಿಠ್ಠಲ ಸನ್ನಿಧಾನದಲ್ಲಿ ಶ್ರೀದೇವರಿಗೆ ಸತ್ಯನಾರಾಯಣ ಪೂಜೆ, ತುಳಸಿ ಅರ್ಚನೆ ಮತ್ತು ಸಾಯಂಕಾಲ ನವನೀತ ನೈವೇದ್ಯದೊಂದಿಗೆ ಪೂಜೆಯು ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಸೇವೆಯಲ್ಲಿ ಭಾಗಿಯಾಗಿ ಶ್ರೀದೇವರ ಕೃಪೆಗೆ ಪಾತ್ರರಾದರು.

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ Read More »

ಶಿವಭಕ್ತಿಯಿಂದ ಕಂಗೊಳಿಸಿದ ಶ್ರೀಕ್ಷೇತ್ರ ಇಟಗಿ

ಶ್ರಾವಣ ಮಾಸದ ಮೂರನೇ ಸೋಮವಾರವಾದ ಇಂದುಶ್ರೀ ದೇವರಲ್ಲಿ ಶತರುದ್ರ ಪಾರಾಯಣ,ಹವನ, ಮಹಾಪೂಜಾ ಹಾಗೂ ಬಲಿ ಉತ್ಸವವು ವಿಜೃಂಭಣೆಯಿಂದ, ಶ್ರದ್ಧಾ,ಭಕ್ತಿ ಪೂರ್ವಕವಾಗಿ ನೆರವೇರಿತು.ಮತ್ತು ತ್ರಿದೇವತಾ ಆರಾಧನಾ ಅಂಗವಾಗಿ ನಡೆದ ಸಂಕಷ್ಟಿ ಗಣಹವನ ಕಾರ್ಯಕ್ರಮವೂ ಜರುಗಿತು.ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪರ್ಯಾಪ್ತಿ ಭೋಜನದಲ್ಲಿ ಪಾಲ್ಗೊಂಡು ಕೃತಾರ್ಥರಾದರು.ಹರ ಹರ ಮಹಾದೇವ🔱

ಶಿವಭಕ್ತಿಯಿಂದ ಕಂಗೊಳಿಸಿದ ಶ್ರೀಕ್ಷೇತ್ರ ಇಟಗಿ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಶಿವಪವಿತ್ರಾರೋಪಣ

ಶ್ರೀ ಕ್ಷೇತ್ರದಲ್ಲಿ ಇಂದು ಶಿವ ಪವಿತ್ರಾರೋಪಣ ಅಂಗವಾಗಿ ಶ್ರೀ ರಾಮೇಶ್ವರನಿಗೆ ಧಾರ್ಮಿಕ ವಿಧಿ ವಿಧಾನದಂತೆ ಪವಿತ್ರಾರೋಪಣವನ್ನು ಶ್ರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಅನಂತ ಭಟ್ ಮತ್ತು ಶ್ರೀ ರಾಜೇಂದ್ರ ಭಟ್ ಇವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಗಮಿಸಿದ ಭಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರ್ಯಾಪ್ತಿ ಪ್ರಸಾದ ಭೋಜನ ಸ್ವೀಕರಿಸಿ ಪುನೀತರಾದರು. ಶಿವಪವಿತ್ರಾರೋಪಣ ಎಂದರೆ : “ದೇವಾಲಯದಲ್ಲಿ ನಡೆಯುವ ಧಾರ್ಮಿಕ ಪೂಜಾ ಕೈಂಕರ್ಯಗಳ ಲೋಪದೋಷಗಳನ್ನು ಪರಿಹರಿಸಿ, ದೇವರ ಸನ್ನಿಧಿಯ ಪಾವಿತ್ರ್ಯವನ್ನು ಪುನಃಸ್ಥಾಪಿಸಿ, ಲೋಕಕಲ್ಯಾಣಕ್ಕಾಗಿ ಶಿವನಿಗೆ

ಶ್ರೀಕ್ಷೇತ್ರ ಇಟಗಿಯಲ್ಲಿ ಶಿವಪವಿತ್ರಾರೋಪಣ Read More »

ಕಾರಣಿಕ ದೇವ ಶ್ರೀರಾಮೇಶ್ವರನ ಸನ್ನಿಧಾನದಲ್ಲಿ ಶ್ರಾವಣ ಸಂಭ್ರಮ

ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ, ಶ್ರೀಕ್ಷೇತ್ರ ಇಟಗಿ ಇಟಗಿ, 24 ಆಗಸ್ಟ್ 2026:ಶ್ರಾವಣ ಮಾಸದ ಪವಿತ್ರ ಎರಡನೇ ಸೋಮವಾರದ ಅಂಗವಾಗಿ ಶ್ರೀಕ್ಷೇತ್ರ ಇಟಗಿಯ ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ವಿಶೇಷ ಸೇವಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಶ್ರಾವಣ ಮಾಸದ ಪಾವಿತ್ರ್ಯಕ್ಕೆ ವಿಶೇಷ ಮಹತ್ವವಿರುವ ಹಿನ್ನೆಲೆಯಲ್ಲಿ, ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಹಾಗೂ ಸೇವಾ ಕಾರ್ಯಕ್ರಮಗಳು ನಡೆದವು.

ಕಾರಣಿಕ ದೇವ ಶ್ರೀರಾಮೇಶ್ವರನ ಸನ್ನಿಧಾನದಲ್ಲಿ ಶ್ರಾವಣ ಸಂಭ್ರಮ Read More »

ಇಷ್ಟಿಕಾಪುರಾಧೀಶ್ವರನ ಕ್ಷೇತ್ರದಲ್ಲಿ ಶ್ರಾವಣದ ಸಂಭ್ರಮ

  ಇಟಗಿ | ಆಗಸ್ಟ್ 17, 2026 ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರದ ಅಂಗವಾಗಿ ಐತಿಹಾಸಿಕ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಿಭಾವ ಹಾಗೂ ಸಡಗರದಿಂದ ನೆರವೇರಿದವು. ಶ್ರಾವಣ ಮಾಸದ ಮೊದಲ ಸೋಮವಾರದ ಪ್ರಯುಕ್ತ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣಗೊಂಡಿತ್ತು. ಶ್ರೀ ರಾಮೇಶ್ವರ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಅರ್ಚನೆ ಹಾಗೂ ವಿವಿಧ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿಯನ್ನು ನೆರವೇರಿಸಿ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು. ಶಿವಭಕ್ತಿಯಿಂದ

ಇಷ್ಟಿಕಾಪುರಾಧೀಶ್ವರನ ಕ್ಷೇತ್ರದಲ್ಲಿ ಶ್ರಾವಣದ ಸಂಭ್ರಮ Read More »

ಶ್ರೀಕ್ಷೇತ್ರದಲ್ಲಿ ಶಿವ ಶ್ರಾವಣೋತ್ಸವ

ಇಷ್ಟಿಕಾಪುರಾಧೀಶ್ವರ ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸಕ್ಕೆ ಈ ಮೂಲಕ ಎಲ್ಲಾ ಭಕ್ತರನ್ನು ಆಮಂತ್ರಿಸುತ್ತಿದ್ದೇವೆ. ಉತ್ಸವ ಪ್ರಿಯ ಶ್ರೀರಾಮೇಶ್ವರನ ಈ ಶಿವ ಶ್ರಾವಣೋತ್ಸವದಲ್ಲಿ ಎಲ್ಲಾ ಭಕ್ತರು ಪಾಲ್ಗೊಂಡು ಶ್ರೀದೇವರ ಪ್ರೀತಿಗೆ ಪಾತ್ರರಾಗೋಣ.

ಶ್ರೀಕ್ಷೇತ್ರದಲ್ಲಿ ಶಿವ ಶ್ರಾವಣೋತ್ಸವ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಗಣಹವನ

ಪರಾಭವನಾಮ ಸಂವತ್ಸರದ ಆಷಾಢ ಸಂಕಷ್ಠಿ ಚತುರ್ಥಿ ದಿನಾಂಕ 02-08-2026 ರವಿವಾರ ಬೆಳಿಗ್ಗೆ ಶ್ರೀಕ್ಷೇತ್ರ ಇಟಗಿಯಲ್ಲಿ ಇಷ್ಟಿಕಾಧೀಶ್ವರನ ಸಂಕಲ್ಪದೊಂದಿಗೆ ಚತುರ್ನಾಳಿಕೇರ ಗಣಹವನವು ಸಂಪನ್ನಗೊಂಡಿತು. ಪ್ರತಿ ಮಾಸದಲ್ಲಿಯೂ ನೆರವೇರುವಂತೆ ಈ ಮಾಸದಲ್ಲಿಯೂ ತ್ರಿದೇವತಾ ಆರಾಧನಾ ಸೇವಾಕರ್ತರು ಮತ್ತು ಸೀಮಾ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಗಣಹವನ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಗುರುಪೂರ್ಣಿಮೆ

ತ್ರಿದೇವತಾ ವಿಶೇಷ ಆರಾಧನೆ ಅಂಗವಾಗಿ ಹುಣ್ಣಿಮೆ ದಿನವಾದ ಇಂದು ಶ್ರೀ ಕ್ಷೇತ್ರದಲ್ಲಿ ದುರ್ಗಾಹವನ ದುರ್ಗಾಸಪ್ತಶತಿ ಪಾರಾಯಣ ಹಾಗೂ ಗುರುಪೂರ್ಣಿಮೆ ನಿಮಿತ್ತ ಗುರುಪೂಜೆಯು ನೆರವೇರಿತು.🔱🚩

ಶ್ರೀಕ್ಷೇತ್ರ ಇಟಗಿಯಲ್ಲಿ ಗುರುಪೂರ್ಣಿಮೆ Read More »

ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸದ ಆಮಂತ್ರಣ

ಬಿಳಗಿ ಸೀಮಾ ಆರಾಧ್ಯ ದೈವ ಮಹತೋಬಾರ ಶ್ರೀರಾಮೇಶ್ವರ , ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ನೆರವೇರುವ ಸಕಲ ಪೂಜಾ ವಿನಿಯೋಗಗಳು ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಲಿದ್ದು. ಪ್ರಿಯ ಭಕ್ತಾದಿಗಳಿಗೆ ಈ ಮೂಲಕ ಶ್ರೀದೇವಸ್ಥಾನವು ಆಮಂತ್ರಿಸುತ್ತದೆ. ಪರಾಭವನಾಮ ಸಂ| ಶ್ರಾವಣ ಮಾಸವು ಪಾಡ್ಯ 13-08-2026 ರಿಂದ ಆರಂಭವಾಗುವುದು, ಈ ಶ್ರಾವಣ ಮಾಸದಲ್ಲಿ 4 ಸೋಮವಾರಗಳಿದ್ದು, ಪ್ರತಿ ಸೋಮವಾರದಂದು ಶತರುದ್ರ ಪಾರಾಯಣ ಮತ್ತು ಹವನವು ನೆರವೇರಲಿದ್ದು, ಮಾಸದುದ್ದಕ್ಕೂ ಅರ್ಚನೆ ಮತ್ತು

ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸದ ಆಮಂತ್ರಣ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಸಂಕಲ್ಪಸಿದ್ಧಿ ರಥೋತ್ಸವ

ಬಿಳಗಿ ಸೀಮಾಧೀಶ್ವರ ಇಷ್ಟಿಕಾಪುರ ನಿವಾಸಿ ಮಹತೋಬಾರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ಅಮವಾಸ್ಯೆಯಲ್ಲೂ ನೆರವೇರುವ ಸಂಕಲ್ಪಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನವು ನೆರವೇರಿತು. ಪರಾಭವ ಸಂವತ್ಸರದ ನಿಜ ಜ್ಯೇಷ್ಠಮಾಸವಾದ ಇಂದು ತತ್ವಧಿವಾಸ ಹೋಮ, ಶತರುದ್ರ ಪಾರಾಯಣ ಹವನವೂ ಜೊತೆಯಲ್ಲಿ ನೆರವೇರಿತು. ಶ್ರೀ ಉಮೇಶ ಸು ಹೆಗಡೆ ಸಿದ್ದಾಪುರ ಕ್ಷೇಮಾ ಡಿಸ್ಷ್ರಿಬ್ಯೂಟರ್ಸ್‌ ಶ್ರೀದೇವರ ಸಂಕಲ್ಪಸಿದ್ಧಿ ರಥೋತ್ಸವದ ಸೇವಕರ್ತರಾಗಿದ್ದರು. ಹಾಗೂ ಅನುದಿನವೂ ಅಷ್ಟಬಂಧದ ನಂತರ ಮಧ್ಯಾಹ್ನ ಪರ್ಯಾಪ್ತಿ ಅನ್ನಪ್ರಸಾದ

ಶ್ರೀಕ್ಷೇತ್ರ ಇಟಗಿಯಲ್ಲಿ ಸಂಕಲ್ಪಸಿದ್ಧಿ ರಥೋತ್ಸವ Read More »

Scroll to Top