ಶ್ರೀಕ್ಷೇತ್ರ ಇಟಗಿಯಲ್ಲಿ ಸಂಕಲ್ಪಸಿದ್ಧಿ ರಥೋತ್ಸವ

ಬಿಳಗಿ ಸೀಮಾಧೀಶ್ವರ ಇಷ್ಟಿಕಾಪುರ ನಿವಾಸಿ ಮಹತೋಬಾರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ಅಮವಾಸ್ಯೆಯಲ್ಲೂ ನೆರವೇರುವ ಸಂಕಲ್ಪಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನವು ನೆರವೇರಿತು. ಪರಾಭವ ಸಂವತ್ಸರದ ನಿಜ ಜ್ಯೇಷ್ಠಮಾಸವಾದ ಇಂದು ತತ್ವಧಿವಾಸ ಹೋಮ, ಶತರುದ್ರ ಪಾರಾಯಣ ಹವನವೂ ಜೊತೆಯಲ್ಲಿ ನೆರವೇರಿತು. ಶ್ರೀ ಉಮೇಶ ಸು ಹೆಗಡೆ ಸಿದ್ದಾಪುರ ಕ್ಷೇಮಾ ಡಿಸ್ಷ್ರಿಬ್ಯೂಟರ್ಸ್‌ ಶ್ರೀದೇವರ ಸಂಕಲ್ಪಸಿದ್ಧಿ ರಥೋತ್ಸವದ ಸೇವಕರ್ತರಾಗಿದ್ದರು. ಹಾಗೂ ಅನುದಿನವೂ ಅಷ್ಟಬಂಧದ ನಂತರ ಮಧ್ಯಾಹ್ನ ಪರ್ಯಾಪ್ತಿ ಅನ್ನಪ್ರಸಾದ ಭೋಜನವು ನೆರವೇರುತ್ತಾ ಇದ್ದು ಶ್ರೀ ರಾಜೇಶ ಚಂದ್ರಶೇಖರ ಹೆಗಡೆ ಕೊಡ್ತಗಣಿ ಸಿದ್ದಾಪುರ ಇವರು ಇಂದಿನ ದಿನದ ಸೇವಾಕರ್ತರಾಗಿದ್ದರು. ಶ್ರೀದೇವರ ದರ್ಶನ ಮತ್ತು ಪರ್ಯಾಪ್ತಿ ಪ್ರಸಾದ ಭೋಜನವನ್ನು ಭಕ್ತರು ಸವಿದು ಕೃಥಾರ್ಥರಾದರು.

Leave a Comment

Your email address will not be published. Required fields are marked *

Scroll to Top