itgi temple

ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪ್ರಯುಕ್ತ ಆದಿವಾಸ ಹೋಮ, ಶತರುದ್ರ ಹವನ,ಕಲಶಾಭಿಷೇಕ,ಮಹಾಬಲಿ ಹಾಗೂ ಸಂಕಲ್ಪ ಸಿದ್ಧಿ ರಥೋತ್ಸವ

ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಮಾರ್ಗಶಿರ ಅಮವಾಸ್ಯೆ (19-12-2025 ಶುಕ್ರವಾರ) ದೇವಸ್ಥಾನದ ತ್ರಿದೇವತಾ ಭಜಕರ ಮತ್ತು ಸೀಮಾ ಹಾಗೂ ಸಮಸ್ತ ಭಕ್ತರ ಶ್ರೇಯೋಭಿವೃದ್ಧಿಯನ್ನು ನೆನದು ಪ್ರತಿ ಅಮವಾಸ್ಯೆಯಂದು ನೆಡೆಯಲ್ಪಡುವ ಸಂಕಲ್ಪ ಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನ, ಆದಿವಾಸ ಹೋಮ, ಶತರುದ್ರ ಹವನ,ಕಲಾಭಿಷೇಕಗಳಾದಿಗಳಿಂದ ದೇವರಲ್ಲಿ ನೆರವೇರಿಸಲಾಯಿತು. ಹಲವಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೀಕ್ತವಾಗಿ ನೆರವೇರಿತು, ನಂತರ ಭಕ್ತಾದಿಗಳು ಪರ್ಯಾಪ್ತಿ ಅನ್ನ ಪ್ರಸಾದ ಭೋಜನವನ್ನು ಸ್ವೀಕರಿಸಿ ಕೃತಾರ್ಥರಾದರು.

ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪ್ರಯುಕ್ತ ಆದಿವಾಸ ಹೋಮ, ಶತರುದ್ರ ಹವನ,ಕಲಶಾಭಿಷೇಕ,ಮಹಾಬಲಿ ಹಾಗೂ ಸಂಕಲ್ಪ ಸಿದ್ಧಿ ರಥೋತ್ಸವ Read More »

ಇಟಗಿಯಲ್ಲಿ ʼದುರ್ಗಾದೀಪನಮಸ್ಕಾರʼ

ಶ್ರೀ ಕ್ಷೇತ್ರ ಇಟಗಿಯಲ್ಲಿ ಈಗಾಗಲೇ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ವಿಜೃಂಭಣೆಯಿಂದ ನಡೆಯುತ್ತಿದೆ. ಈ ವರ್ಷ ʼನವದೇವಿ ನವಾರಾಧನೆʼ ಹೆಸರಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಷ್ಟಮಿಯ ದಿನ ದಿನಾಂಕ:30-09-2025 ಮಂಗಳವಾರದಂದು ʼಪ್ರಸನ್ನ ದುರ್ಗಾದೀಪ ನಮಸ್ಕಾರʼ ಪೂಜೆಯು ನಡೆಯಲಿದ್ದು ಜ್ಯೋತಿ ಸ್ವರೂಪದಲ್ಲಿ ಮಹಾ ತಾಯಿಯನ್ನು ಆರಾಧಿಸುವ ಸುಸಂದರ್ಭ ಇದಾಗಿದೆ. ಈ ಪುಣ್ಯತಮ ಕಾರ್ಯಕ್ರಮದಲ್ಲಿ ಎಲ್ಲಾ ಭಜಕರು ಭಾಗಿಯಾಗಬೇಕೆಂದು ಮೊಕ್ತೇಸರ ಮಂಡಳಿ ವಿನಂತಿಸಿಕೊಂಡಿದೆ.

ಇಟಗಿಯಲ್ಲಿ ʼದುರ್ಗಾದೀಪನಮಸ್ಕಾರʼ Read More »

ಶ್ರೀಕ್ಷೇತ್ರ ಇಟಗಿಯಲ್ಲಿ “ಶರನ್ನವರಾತ್ರಿ ಉತ್ಸವ”

|| ಶ್ರೀ ರಾಮೇಶ್ವರ ಪ್ರಸನ್ನ: || ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿ ತಾ॥ ಸಿದ್ದಾಪುರ (ಉ. ಕ.)  ಶ್ರೀ ವಿಶ್ವಾವಸು ನಾಮ ಸಂ|ದ ಆಶ್ವಯುಜ ಶುಕ್ಲ ಪ್ರತಿಪದೆ ದಿನಾಂಕ 22-09-2025 ಸೋಮವಾರದಂದು ಪ್ರತಿ ವರ್ಷದಂತೆ “ಶರನ್ನವರಾತ್ರಿ ಉತ್ಸವ ‘ವು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಪ್ರಾರಂಭವಾಗಲಿದ್ದು ದಿನಾಂಕ 02-10-2025 ಗುರುವಾರ ವಿಜಯದಶಮೀ ಪರ್ಯಂತ ಶ್ರದ್ಧಾಭಕ್ತಿಪೂರ್ವಕ ವಿಜೃಂಭಣೆಯಿಂದ ನಡೆಯಲಿದೆ.       * ಶರತ್ಕಾಲೇ ಮಹಾಪೂಜಾ ಕ್ರೀಯತೆ

ಶ್ರೀಕ್ಷೇತ್ರ ಇಟಗಿಯಲ್ಲಿ “ಶರನ್ನವರಾತ್ರಿ ಉತ್ಸವ” Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಕುಟುಂಬ ಪ್ರಭೋಧನ ಸಿದ್ದಾಪುರ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಂಯೋಜನೆಯಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ನೆಡೆಯಿತು.

ದಿನಾಂಕ 04-09-2025 ಗುರುವಾರ ಶ್ರೀಕ್ಷೇತ್ರ ಇಟಗಿಯ ಆವಾರದಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ಜರುಗಿತು. ಮುಖ್ಯ ವಕ್ತಾರರಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರು ಶ್ರೀ ಶಾಂತಾರಾಮ ಸಿದ್ಧಿ ಮತ್ತು ಶ್ರೀ ನಾಗರಾಜ ನಾಯ್ಕಡ್ ಸಿದ್ದಾಪುರ, ನಿವೃತ್ತ ದಂಡಾಧಿಕಾರರು ಹಾಗೂ ಶ್ರೀದೇವಸ್ಥಾನದ ಮೊಕ್ತೇಸರರಾದ ಶ್ರೀ ಚಂದ್ರಶೇಖರ ಹೆಗಡೆ ಕೊಡ್ತಗಣಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಪ್ರಮೋದ ಹೆಗಡೆ ಅವರು ಪ್ರಾರ್ಥನೆ ಮಾಡಿದರು. ಶ್ರೀ ವೆಂಕಟ್ರಮಣ ಹೆಗಡೆ ಹೊನ್ನೆಮಡಿಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಶ್ರೀ ಗಜಾನನ ಹೆಗಡೆ ನಿರ್ವಹಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ

ಶ್ರೀಕ್ಷೇತ್ರ ಇಟಗಿಯಲ್ಲಿ ಕುಟುಂಬ ಪ್ರಭೋಧನ ಸಿದ್ದಾಪುರ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಂಯೋಜನೆಯಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ನೆಡೆಯಿತು. Read More »

ಶ್ರೀಕ್ಷೇತ್ರ ಇಟಗಿಯ ಸಭಾಭವನದಲ್ಲಿ ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ನೆರವೇರಿತು.

ಶ್ರೀಕ್ಷೇತ್ರ ಇಟಗಿಯಲ್ಲಿ 02-09-2025 ಮಂಗಳವಾರ ನೆಡೆದ ಈ ಸಭೆಯು ಶ್ರೀದೇವಸ್ಥಾನದ ಆವಾರವಾದ ಸಭಾಭವನದಲ್ಲಿ ನೆರವೇರಿತು. ಸುಮಾರು 350 ಸದಸ್ಯರಿಗಿಂತಲೂ ಮಿಗಿಲಾಗಿ ಖಾತಾದಾರರು ಸೇರಿದ್ದರು. ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘವು ಅಂದಿನ ದಿನದ ಪರ್ಯಾಪ್ತಿ ಪ್ರಸಾದ ಭೋಜನದ ಸೇವಾಕರ್ತರಾಗಿದ್ದರು.

ಶ್ರೀಕ್ಷೇತ್ರ ಇಟಗಿಯ ಸಭಾಭವನದಲ್ಲಿ ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ನೆರವೇರಿತು. Read More »

ಬಿಳಗಿ ಸೀಮಾ ಒಡೆಯ ಶ್ರೀ ರಾಮೇಶ್ವರ ದೇವಸ್ಥಾನ ‌ಶ್ರೀಕ್ಷೇತ್ರ ಇಟಗಿಯಲ್ಲಿ ಚಂಡಿಕಾ ಹೋಮ ನೆರವೇರಿತು

ಸೇವಾಕರ್ತರು ಶ್ರೀಯುತ ಸೋಮೇಶ ಭಟ್ ಹಾವಿನಬೀಳು.

ಬಿಳಗಿ ಸೀಮಾ ಒಡೆಯ ಶ್ರೀ ರಾಮೇಶ್ವರ ದೇವಸ್ಥಾನ ‌ಶ್ರೀಕ್ಷೇತ್ರ ಇಟಗಿಯಲ್ಲಿ ಚಂಡಿಕಾ ಹೋಮ ನೆರವೇರಿತು Read More »

ಇಟಗಿಯಲ್ಲಿ ಅರ್ಥಪೂರ್ಣವಾಗಿ ನಡೆದ “ರಾಮನಿರ್ಯಾಣ” ತಾಳಮದ್ದಲೆ.

ಸಿದ್ದಾಪುರ; ತಾಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ನಡೆದ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಬಿಡುಗಡೆಯ ಸಮಾರಂಭದ ಸಂದರ್ಭದಲ್ಲಿ ಖ್ಯಾತ ಅರ್ಥಧಾರಿಗಳ ಕೂಡುವಿಕೆಯಲ್ಲಿ ಶನಿವಾರ ನಡೆದ “ರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಲೆ ತುಂಬಿದ ಸಭಾಂಗಣದಲ್ಲಿಯ ಪ್ರೇಕ್ಷಕರನ್ನು ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ರಾಮನಾಗಿ ಖ್ಯಾತ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಶ್ರೀ ರಾಮಚಂದ್ರನ ಮೇರು ವ್ಯಕ್ತಿತ್ವದ ಚಿತ್ರಣವನ್ನು ತಮ್ಮ ಅರ್ಥಗಾರಿಕೆಯಲ್ಲಿ ಸ್ಪಷ್ಟಪಡಿಸಿದರು. ಪ್ರೊ.ಪವನ ಕಿರಣಕೆರೆ ಲಕ್ಷö್ಮಣನಾಗಿ ಸಹೋದರ ಬಾಂಧವ್ಯವನ್ನು ವಿಷದಪಡಿಸಿದರು. ಕಾಲಪುರುಷನಾಗಿ ಪವನ ಕಿರಣಕೆರೆ ರಾಮನ ಅಂತ್ಯದ

ಇಟಗಿಯಲ್ಲಿ ಅರ್ಥಪೂರ್ಣವಾಗಿ ನಡೆದ “ರಾಮನಿರ್ಯಾಣ” ತಾಳಮದ್ದಲೆ. Read More »

ಇಟಗಿ ಶ್ರೀಕ್ಷೇತ್ರ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಅನಾವರಣ.

ರಾಮೇಶ್ವರ ಸ್ಮರಣ ಸಂಚಿಕೆಯನ್ನು ವಾಸುದೇವ ರಂಗಾ ಭಟ್ಟ ಅನಾವರಣ ಮಾಡಿದರು.ಸಿದ್ದಾಪುರ; ನಾವು ಆರಾಧಿಸಿಕೊಂಡು ಬರುತ್ತಿರುವ ದೇವರ ಅಷ್ಟಬಂಧದAತಹ ಕಾರ್ಯಕ್ರಮಗಳಿಂದ ಭಕ್ತರಲ್ಲಿಯ ಶ್ರದ್ಧಾ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ದೇವರಿಗೆ ನಿಗದಿತ ಅವಧಿಯಲ್ಲಿ ಅಷ್ಟಬಂಧವನ್ನು ನೆರವೇರಿಸುವುದು ನಮ್ಮ ಆಚರಣೆ-ಸಂಪ್ರದಾಯ ಎಂದು ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಮಧೂರು ಹೇಳಿದ್ದಾರೆ. ಅವರು ತಾಲೂಕಿನ ಬಿಳಗಿ ಸೀಮೆಯ ಇಟಗಿ ಶ್ರೀಕ್ಷೇತ್ರದ “ಅಷ್ಟಬಂಧ ಮಹೋತ್ಸವ-೨೦೨೫”ರ ಸ್ಮರಣ ಸಂಚಿಕೆ “ರಾಮೇಶ್ವರ” ವನ್ನು ಶನಿವಾರ ಅನಾವರಣ ಮಾಡಿ ಮಾತನಾಡುತ್ತಿದ್ದರು. ಶ್ರೀರಾಮ ಹಾಗೂ ಈಶ್ವರ

ಇಟಗಿ ಶ್ರೀಕ್ಷೇತ್ರ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಅನಾವರಣ. Read More »

ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮ.

ಬಿಳಗಿ ಸೀಮಾ ಒಡೆಯ ಶ್ರೀರಾಮೇಶ್ವರನ ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮವನ್ನು ದಿನಾಂಕ 23-08-2025 ಶನಿವಾರ ಸಮಯ ಮಧ್ಯಾಹ್ನ 2 ಘಂಟೆಗೆ ಹಮ್ಮಿಕ್ಕೊಂಡಿದ್ದು, ಸರ್ವರಿಗೂ ಸ್ವಾಗತ ಕೋರುವವರು ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ಮತ್ತು ಮೊಕ್ತೇಸರ ಮಂಡಳಿ ಶ್ರಿಕ್ಷೇತ್ರ ಇಟಗಿ.

ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮ. Read More »

ಪ್ರಸಿಧ್ದ ಕಲಾವಿದರ ಕೂಡುವಿಕೆಯಲ್ಲಿ “ಶ್ರೀ ರಾಮ ನಿರ್ಯಾಣ” ಎಂಬ ಪೌರಾಣಿಕ “ಯಕ್ಷಗಾನ ತಾಳಮದ್ದಳೆ” ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗ ಇಟಗಿ ಇವರ ಸಂಯೋಜನೆಯಲ್ಲಿ….

|| ಪ್ರಸೀದತು ಶ್ರೀ ರಾಮೇಶ್ವರಃ||ಶ್ರಾವಣ ಅಮವಾಸ್ಯೆ ಹಾಗೂ ಸಂಕಲ್ಪ ಸಿದ್ದಿ ರಥೋತ್ಸವದ ಪ್ರಯುಕ್ತ ಶ್ರೀ ರಾಮೇಶ್ವರ ಗೆಳೆಯರ ಬಳಗದ ಸಂಯೋಜನೆಯಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದ ಕೂಡುವಿಕೆಯಲ್ಲಿ “ಯಕ್ಷಗಾನ ತಾಳಮದ್ದಳೆ”̤“ಶ್ರೀ ರಾಮ ನಿರ್ಯಾಣ” ಎಂಬ ಪೌರಾಣಿಕ ಕಥಾನಕವನ್ನು ಆಡಿತೋರಿಸಲಿದ್ದಾರೆದಿನಾಂಕ 23-08-2025ರ ಮದ್ಯಾಹ್ನ 3 ರಿಂದ ರಾತ್ರಿ 8 ಗಂಟೆಯ ವರೆಗೆಸ್ಥಳ : ಶ್ರೀ ರಾಮೇಶ್ವರ ದೇವಸ್ಥಾನ ಇಟಗಿರಂಗದಲ್ಲಿ ರಂಜಿಸಲಿರುವ ಹೆಮ್ಮೆಯ ಕಲಾವಿದರುಹಿಮ್ಮೇಳ :ಭಾಗವತರು : ಪ್ರಸನ್ನ ಭಟ್ ( ಬಾಳ್ಳಲ್)ಮದ್ದಳೆ : ರಾಘವೇಂದ್ರ ಹೆಗಡೆ (ಯಲ್ಲಾಪುರ)ಚಂಡೆ

ಪ್ರಸಿಧ್ದ ಕಲಾವಿದರ ಕೂಡುವಿಕೆಯಲ್ಲಿ “ಶ್ರೀ ರಾಮ ನಿರ್ಯಾಣ” ಎಂಬ ಪೌರಾಣಿಕ “ಯಕ್ಷಗಾನ ತಾಳಮದ್ದಳೆ” ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗ ಇಟಗಿ ಇವರ ಸಂಯೋಜನೆಯಲ್ಲಿ…. Read More »

Scroll to Top