|| ಶ್ರೀ ರಾಮೇಶ್ವರ ಪ್ರಸನ್ನ: ||
ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿ
ತಾ॥ ಸಿದ್ದಾಪುರ (ಉ. ಕ.)
ಶ್ರೀ ವಿಶ್ವಾವಸು ನಾಮ ಸಂ|ದ ಆಶ್ವಯುಜ ಶುಕ್ಲ ಪ್ರತಿಪದೆ ದಿನಾಂಕ 22-09-2025 ಸೋಮವಾರದಂದು ಪ್ರತಿ ವರ್ಷದಂತೆ “ಶರನ್ನವರಾತ್ರಿ ಉತ್ಸವ ‘ವು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಪ್ರಾರಂಭವಾಗಲಿದ್ದು ದಿನಾಂಕ 02-10-2025 ಗುರುವಾರ ವಿಜಯದಶಮೀ ಪರ್ಯಂತ ಶ್ರದ್ಧಾಭಕ್ತಿಪೂರ್ವಕ ವಿಜೃಂಭಣೆಯಿಂದ ನಡೆಯಲಿದೆ.
* ಶರತ್ಕಾಲೇ ಮಹಾಪೂಜಾ ಕ್ರೀಯತೆ ಯಾಚ ವಾರ್ಷಿಕೀ ” ಎಂಬಂತೆ ಶರಧ್ರುತುವಿನ ಪರ್ವಕಾಲದಲ್ಲಿ ಯಾರು ಜಪ, ಪಾರಾಯಣ, ಆರ್ಚನೆ, ಹೋಮ, ತರ್ಪಣ ನಾನಾವಿಧ ಸುಗಂಧ ದ್ರವ್ಯಗಳ ಅಲಂಕಾರಾದಿ ಸೇವೆಗಳನ್ನು ಮಾಡುತ್ತಾರೋ ಅವರನ್ನು ನಾನು ರಕ್ಷಿಸುತ್ತೇನೆ ಎಂದು ತಾಯಿಯೇ ಹೇಳಿರುವ ಹಾಗೆ ಈ ವರ್ಷವೂ ಶ್ರೀ ದೇವಿಯ ಸನ್ನಿಧಾನದಲ್ಲಿ ನಿತ್ಯವೂ ಅರ್ಚನೆ, ಪಾರಾಯಣ, ಗಂಧ, ಹರಿದ್ರ,ಕುಂಕುಮ,ಪುಷ್ಪ,ಫಲಗಳಿಂದ ಪೂಜಿಲ್ಪಡುತ್ತಾಳೆ.
” ಶರನ್ನವರಾತ್ರಿ ಉತ್ಸವವು “ದಿನಾಂಕ 22-09-2025 ಸೋಮವಾರದಿಂದ ಪ್ರಾರಂಭವಾಗಲಿದ್ದು.
1.) ದಿನಾಂಕ 26-09-2025 ಶುಕ್ರವಾರ ಲಲಿತಾ ಪಂಚಮೀಯಂದು ಬೆಳಿಗ್ಗೆ 9-00 ಘಂಟೆಯಿಂದ ಸಾಮೂಹಿಕವಾಗಿ ಮಹಿಳೆಯರಿಂದ ಕುಂಕುಮಾರ್ಚನೆ ಸೇವೆ ಕಾರ್ಯಕ್ರಮ ಇರುತ್ತದೆ.
2.) ದಿ.30-09-2025 ಮಂಗಳವಾರ ಸಾಯಂಕಾಲ ಪ್ರಸನ್ನ ದುರ್ಗಾದೀಪ ನಮಸ್ಕಾರ ಪೂಜೆ.
3.) ದಿ. 01-10-2025 ಗುರುವಾರ ” ಶ್ರೀ ಚಂಡಿಕಾ ಯಾಗ ” ಕೌಮಾರಿಕಾ ಪೂಜೆ ಮತ್ತು ದಂಪತಿ ಪೂಜೆ
4.) ದಿ. 02-10-2025 ವಿಜಯ ದಶಮೀ ” ಪ್ರಯುಕ್ತ ಶಮಿಪೂಜೆ ಮತ್ತು ಸಾಯಂಕಾಲ ಪಲ್ಲಕ್ಕಿ ಉತ್ಸವ ಇರುತ್ತದೆ.
ಹಾಗೂ ಪ್ರತಿದಿನ ಮಧ್ಯಾಹ್ನ 12-00ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಂತರ “ಪರ್ಯಾಪ್ತಿ ಪ್ರಸಾದ ಭೋಜನ ” ರುತ್ತದೆ. ಭಕ್ತಾಧಿಗಳಾದ ತಾವೆಲ್ಲರೂ ಆಗಮಿಸಸಿ, ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.
ಸೇವಾ ವಿವರ
1.) ಸರ್ವ ಸೇವೆ ರೂ.3,001-00
2.) ಅಷ್ಟೋತ್ತರ ಶತನಾಮ ಕುಂಕುಮಾರ್ಚನೆ 51-00
3.) ವೈಯಕ್ತಿಕ ”ಸಪ್ತಶತಿ ಪಾರಾಯಣ ” ಸೇವೆ 1201-00
4.) ಪಾರಾಯಣ ಸೇವೆ (ಸಾಮೂಹಿಕ) .251-00
6.) ಚಂಡಿಕಾಯಾಗ ಸಾಮೂಹಿಕ ಸೇವೆ ರೂ. 251-00
7.) ಪ್ರಸನ್ನ ದುರ್ಗಾದೀಪ ನಮಸ್ಕಾರ ಸೇವೆ ರೂ.201-00
ಮೊಕ್ತೇಸರ ಮಂಡಳಿ ಶ್ರೀ ಕ್ಷೇತ್ರ ಇಟಗಿ
: 9480525109, 9449192311, 9019509963



