ಇಟಗಿ ಶ್ರೀಕ್ಷೇತ್ರ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಅನಾವರಣ.

ರಾಮೇಶ್ವರ ಸ್ಮರಣ ಸಂಚಿಕೆಯನ್ನು ವಾಸುದೇವ ರಂಗಾ ಭಟ್ಟ ಅನಾವರಣ ಮಾಡಿದರು.
ಸಿದ್ದಾಪುರ; ನಾವು ಆರಾಧಿಸಿಕೊಂಡು ಬರುತ್ತಿರುವ ದೇವರ ಅಷ್ಟಬಂಧದAತಹ ಕಾರ್ಯಕ್ರಮಗಳಿಂದ ಭಕ್ತರಲ್ಲಿಯ ಶ್ರದ್ಧಾ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ದೇವರಿಗೆ ನಿಗದಿತ ಅವಧಿಯಲ್ಲಿ ಅಷ್ಟಬಂಧವನ್ನು ನೆರವೇರಿಸುವುದು ನಮ್ಮ ಆಚರಣೆ-ಸಂಪ್ರದಾಯ ಎಂದು ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಮಧೂರು ಹೇಳಿದ್ದಾರೆ. ಅವರು ತಾಲೂಕಿನ ಬಿಳಗಿ ಸೀಮೆಯ ಇಟಗಿ ಶ್ರೀಕ್ಷೇತ್ರದ “ಅಷ್ಟಬಂಧ ಮಹೋತ್ಸವ-೨೦೨೫”ರ ಸ್ಮರಣ ಸಂಚಿಕೆ “ರಾಮೇಶ್ವರ” ವನ್ನು ಶನಿವಾರ ಅನಾವರಣ ಮಾಡಿ ಮಾತನಾಡುತ್ತಿದ್ದರು. ಶ್ರೀರಾಮ ಹಾಗೂ ಈಶ್ವರ ದೇವರುಗಳ ಸಮನ್ವಯ ಈ ಕ್ಷೇತ್ರದಲ್ಲಿದ್ದು ಸ್ಮರಣ ಸಂಚಿಕೆಯು ಸಾಕಷ್ಟು ವಿಶೇಷ ಅಂಶಗಳನ್ನು ಒಳಗೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪಸ್ಥಿತರಿದ್ದ ಎಸ್‌ಎಸ್‌ಪಿ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ ಶ್ರೀ ರಾಮೇಶ್ವರ ದೇವರಿಗೆ ಅಷ್ಟಬಂಧ ನೆರವೇರಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಅಂದಿನಿAದ ಇಂದಿನವರೆಗೂ ಶ್ರೀ ಕ್ಷೇತ್ರದಲ್ಲಿ ಅನ್ನದಾಸೋಹ ನಡೆದುಕೊಂಡು ಬಂದಿದ್ದು ಹೊತ್ತಿಸಿದ ಒಲೆ ಆರಿಲ್ಲ. ಒಳ್ಳೆಯ ಮನಸ್ಸು ಹಾಗೂ ಭಕ್ತಿಯಿದ್ದರೆ ಎಲ್ಲಾ ಕಾರ್ಯಗಳೂ ಸಾಂಗವಾಗಿ ನೆರವೇರುತ್ತದೆ ಎನ್ನುವುದಕ್ಕೆ ಇಲ್ಲಿ ನಡೆದ ಕಾರ್ಯಕ್ರಮಗಳು ಸಾಕ್ಷಿಯಾಗಿವೆ. ಸ್ಮರಣ ಸಂಚಿಕೆಯನ್ನೂ ಹೊರತಂದಿರುವುದರಿAದ ಮುಂದೆ ಇಂತಹ ವ್ಯವಸ್ಥೆಯನ್ನು ನಡೆಸಿಕೊಂಡುಹೋಗುವವರಿಗೆ ಈ ಸಂಚಿಕೆ ದಾರಿದೀಪವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಭಾರತ ಸೇವಾದಳ ತಾಲೂಕಾ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಶ್ರೀಕ್ಷೇತ್ರ ಇಟಗಿಯ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ ವಿಜಯನಗರ ಅರಸರ ಮಾಂಡಳಿಕರಾಗಿ ಆಳುತ್ತಿದ್ದ ಬಿಳಗಿಯ ಅರಸರ ಕಾಲದಲ್ಲಿ ಇಟಗಿ ಶ್ರೀ ಕ್ಷೇತ್ರ ಹಿಂದೆAದಿಗಿAತಲೂ ಹೆಚ್ಚು ಪ್ರವರ್ಧಮಾನಕ್ಕೆ ಬಂದುದು ತಿಳಿದುಬರುತ್ತದೆ. ಬಿಳಗಿಯನ್ನು ಆಳಿದ ಅರಸರು ಇಟಗಿ ಹಾಗೂ ಭುವನಗಿರಿ ಕ್ಷೇತ್ರಗಳನ್ನು ತಮ್ಮ ಎರಡು ಕಣ್ಣುಗಳಂತೆ ರಕ್ಷಿಸಿಕೊಂಡು ಬಂದಿದ್ದು ಸಾಕಷ್ಟು ಅಭಿವೃದ್ಧಿ ಮಾಡಿ ಭೂಮಿ, ದತ್ತಿಗಳನ್ನು ನೀಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ಸ್ಮರಣ ಸಂಚಿಕೆಯ ಸಂಪಾದಕ ಸದಾನಂದ ಹೆಗಡೆ ಸಂಚಿಕೆಯಲ್ಲಿ ಅಳವಡಿಸಿರುವ ವಿಷಯಗಳನ್ನು ಸವಿಸ್ತಾರವಾಗಿ ಪ್ರಸ್ತಾವಿಸಿ ರಾಮೇಶ್ವರ ಸ್ಮರಣ ಸಂಚಿಕೆಯನ್ನು ಸಂಗ್ರಹಯೋಗ್ಯವಾಗಿ ತರುವಲ್ಲಿ ಸಾಕಷ್ಟು ಜನರ ಸಹಯೋಗವಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಇಟಗಿಯ ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಹೆಗಡೆ ಜಾತಿ, ಲಿಂಗ, ವಯಸ್ಸಿನ ಭೇದವಿಲ್ಲದೆ ಎಲ್ಲರ ಸಹಕಾರದಿಂದ ಅಷ್ಟಬಂಧ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಇದೀಗ ಸ್ಮರಣ ಸಂಚಿಕೆಯೂ ಹೊರಬಂದು ಭಕ್ತರ ಕೈಸೇರುತ್ತಿರುವುದು ಸಂತಸದಾಯಕ ಎಂದರು. ಸಂಪಾದಕ ಮಂಡಳಿಯ ಗಣೇಶ ಹೆಗಡೆ ಇಟಗಿ, ಮಹಾಬಲೇಶ್ವರ ಹೆಗಡೆ ಹೊನ್ನೇಮಡ್ಕೆ ಸೇರಿದಂತೆ ನಾನಾ ಭಾಗಗಳ ಭಕ್ತರು ಪಾಲ್ಗೊಂಡಿದ್ದರು. ಗಜಾನನ ಹೆಗಡೆ ಕೊಡ್ತಗಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಹೆಗಡೆ ನಿರ್ವಹಿಸಿ, ವಂದಿಸಿದರು. ರಾಮೇಶ್ವರ ಗೆಳೆಯರ ಬಳಗದವರ ಸಂಘಟನೆಯಲ್ಲಿ ದಕ್ಷಿಣೋತ್ತರಕನ್ನಡ ಕಲಾವಿದರ ಕೂಡುವಿಕೆಯಲ್ಲಿ “ರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಲೆ ಯಶಸ್ವಿಯಾಗಿ ನಡೆಯಿತು.

ವರದಿ: ಕೆಕ್ಕಾರ ನಾಗರಾಜ ಭಟ್ವ, ವರದಿಗಾರು, ಸಿದ್ದಾಪುರ, 9880043055

Leave a Comment

Your email address will not be published. Required fields are marked *

Scroll to Top