itgi temple

ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರಾವಣದ ಸಂಭ್ರಮ

ಬಿಳಗಿ ಸೀಮಾ ಒಡೆಯ ಇಷ್ಟಿಕಾಧೀಶ್ವರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ವಿಶ್ವಾವಸುನಾಮ ಸಂವತ್ಸರದ ಶ್ರಾವಣ ಮಾಸವು ಪಾಡ್ಯ ಶುಕ್ರವಾರ ದಿನಾಂಕ 02-07-2025 ರಂದು ಆರಂಭವಾಗುವುದು. ಶ್ರೀದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಮತ್ತು ಪ್ರತಿ ಶ್ರಾವಣ ಸೋಮವಾರ ಶತರುದ್ರ ಪಾರಾಯಣ ಮತ್ತು ಹವನ ಹಾಗೂ ಇನ್ನಿತರ ‌ಧಾರ್ಮಿಕ ಕಾರ್ಯಗಳನ್ನು ಹಮ್ಮಿಕ್ಕೊಳ್ಳಲಾಗಿದ್ದು ಭಕ್ತರೆಲ್ಲರೂ ಸಹಕರಿಸ ಬೇಕಾಗಿ ವಿನಂತಿ.ರುದ್ರ ಪಾರಾಯಣದ ಸೇವಾ ಪಾವತಿ ರೂ […]

ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರಾವಣದ ಸಂಭ್ರಮ Read More »

ಶ್ರೀಕ್ಷೇತ್ರದಲ್ಲಿ ತಾಳಮದ್ದಲೆ.

ಹೆಸರಾಂತ ಭಾಗವತರು ರಾಘವೇಂದ್ರ ಆಚಾರಿ ಜನ್ಸಾಲೆ ಅವರ ರಾಗದಲ್ಲಿ “ಭೀಷ್ಮಾರ್ಜುನ” ಯಕ್ಷಗಾನ ತಾಳಮದ್ದಲೆ ನೆರವೇರಿತು. ದಿನಾಂಕ 26-06-2025 ಗುರುವಾರದಂದು ನೆಡೆದ ಈ ಕಾರ್ಯವನ್ನು ಕಲಾ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು.

ಶ್ರೀಕ್ಷೇತ್ರದಲ್ಲಿ ತಾಳಮದ್ದಲೆ. Read More »

ಶ್ರೀಕ್ಷೇತ್ರ ಇಟಗಿಯಲ್ಲಿ‌ ಪ್ರತಿ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ

ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ, ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿ,ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀ ಇಷ್ಟಿಕಾಧೀಶ್ವರನಿಗೆ ಪ್ರತಿ ಅಮವಾಸ್ಯೆಯಂದು ನೆಡೆಯುವ ಸಂಕಲ್ಪ ಸಿದ್ಧಿ ರಥೋತ್ಸವ ಹಾಗೂ ತತ್ವಾಧಿವಾಸ ಹೋಮ,‌ ಶತರುದ್ರ ಹೋಮ ಮತ್ತು ಮಹಾಬಲಿ‌ ಪ್ರಧಾನ ಈ ಎಲ್ಲಾ ಕಾರ್ಯಾಕ್ರಮಗಳು ಸಂಪನ್ನಗೊಂಡವು.ಜ್ಯೇಷ್ಠ ಮಾಸದ ಅಮವಾಸ್ಯೆಯಂದು ದಿನಾಂಕ 25-06-2025 ಬುಧವಾರ ವಾದ ಇಂದು ಶ್ರೀದೇವರಿಗೆ ಸಮರ್ಪಿಸಲಾಯಿತು.ಬಿಳಗಿಯ ಭಜನಾ ತಂಡವು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನ ಸೇವೆಯಲ್ಲಿ, ಹೊಸದೊಂದು ಮೆರಗನ್ನು ಮೂಡಿಸಿತು.ಅನುದಿನವೂ ನೆಡೆಯುವ “ಪರ್ಯಾಪ್ತಿ”

ಶ್ರೀಕ್ಷೇತ್ರ ಇಟಗಿಯಲ್ಲಿ‌ ಪ್ರತಿ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ Read More »

“ಪರ್ಯಾಪ್ತಿ ಪ್ರಸಾದ ಭೋಜನ”ದ‌ ಸೇವಾ ವಿವರಗಳು:

ಭೋಜನದ ಸಮಯ-ಮಧ್ಯಾಹ್ನ 1.15 ರಿಂದ 2.30 ಶ್ರೀಕ್ಷೇತ್ರದಲ್ಲಿ ಅನುದಿನವೂ‌ ನೆಡೆಯುವ ಪರ್ಯಾಪ್ತಿ ಅನ್ನಪ್ರಸಾದ ಭೋಜನದ ಸೇವಾ ವಿವರಗಳು‌ ಹೀಗಿವೆ.ಒಂದು ದಿನದ ಅನ್ನದಾನ ಸೇವೆಯ ಪ್ರಾಯೋಜಕತ್ವ-3001 ರೂ10 ಜನ ಶಿವಭಕ್ತರಿಗೆ ಅನ್ನದಾನಸೇವೆ-501 ರೂ25 ಜನ ಶಿವಭಕ್ತರಿಗೆ ಅನ್ನದಾನಸೇವೆ-1251 ರೂಪ್ರಸಾದ ಭೋಜನಕ್ಕಾಗಿ ಅಕ್ಕಿ, ಕಾಯಿ, ತರಕಾರಿ ಮುಂತಾದ ಸುವಸ್ತುಗಳನ್ನು ಸಲ್ಲಿಸಬಹುದು. ಹುಟ್ಟಿದ ದಿನ, ಮದುವೆಯ ದಿನ, ಹಿರಿಯರ ನೆನಪಿಗಾಗಿ ಪ್ರಸಾದ ಭೋಜನ ಸೇವೆಗೆ ಆರ್ಥಿಕ ಸಹಕಾರ ನೀಡಿ ಆಚರಿಸಿಕೊಳ್ಳಬಹುದು.ಮೊಕ್ತೇಸರ ಮಂಡಳಿಶ್ರೀಕ್ಷೇತ್ರ ಇಟಗಿ

“ಪರ್ಯಾಪ್ತಿ ಪ್ರಸಾದ ಭೋಜನ”ದ‌ ಸೇವಾ ವಿವರಗಳು: Read More »

ಇಟಗಿಯಲ್ಲಿ ತಾಳಮದ್ದಲೆ.

ದಿನಾಂಕ 26-06-2025 ಗುರುವಾರ ಯಕ್ಷಗಾನ ತಾಳಮದ್ದಲೆ ಪ್ರಸಂಗ “ಭೀಷ್ಮಾರ್ಜುನ” (ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ)ಮಧ್ಯಾಹ್ನ 3 ಗಂಟೆ ಇಂದ. ಅತಿಥಿ‌ಭಾಗವತರಾಗಿ ಹೆಸರಾಂತ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೇಯೇ ಹಿಮ್ಮೇಳ ಮುಮ್ಮೇಳದಲ್ಲಿ ಉತ್ತಮ‌‌ ಕಲಾವಿದರ ಕೂಡುವಿಕೆಯಲ್ಲಿ ನೆರವೇರಲಿದೆ.ದೇವಸ್ಥಾನದ ಸಭಾಭವನದಲ್ಲಿ‌ ನೆಡೆಯುವ ಈ ಕಾರ್ಯಕ್ರಮಕ್ಕೆ ಶ್ರೀ‌ರಾಮೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತಿ ಭಜಕ ವೃಂದ ಹಾಗೂ ಯಕ್ಷಾಭಿಮಾನಿ ಬಳಗ ಇಟಗಿ, ಲಂಬಾಪುರ.(ಉಚಿತ ಪ್ರವೇಶ)

ಇಟಗಿಯಲ್ಲಿ ತಾಳಮದ್ದಲೆ. Read More »

ಶ್ರೀಕ್ಷೇತ್ರ ಇಟಗಿಯಲ್ಲಿ‌ ಈ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ

ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ, ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿ,ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀ ಇಷ್ಟಿಕಾಧೀಶ್ವರನಿಗೆ ಪ್ರತಿ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ ಹಾಗೂ ತತ್ವಾಧಿವಾಸ ಹೋಮ,‌ ಶತರುದ್ರ ಹೋಮ ಮತ್ತು ಮಹಾಬಲಿ‌ ಪ್ರಧಾನ ಈ ಎಲ್ಲಾ ಕಾರ್ಯಾಕ್ರಮಗಳು ನೆರವೇರಲಿದೆ.ಜ್ಯೇಷ್ಠ ಮಾಸದ ಅಮವಾಸ್ಯೆಯಂದು ದಿನಾಂಕ 25-06-2025 ಬುಧವಾರ ನೆಡೆಯುವ ಈ ಕಾರ್ಯಕ್ರಮಕ್ಕೆ ಭಕ್ತರೆಲ್ಲರೂ ಸಹಕಾರ ನೀಡಬೇಕಾಗಿ ವಿನಂತಿ.ಅನುದಿನವೂ ನೆಡೆಯುವ “ಪರ್ಯಾಪ್ತಿ” ಪ್ರಸಾದ ಭೋಜನ ಸೇವೆ ಇರುತ್ತದೆ, ಭಕ್ತರೆಲ್ಲರೂ ಸಹಕರಿಸ ಬೇಕಾಗಿ ವಿನಂತಿ.ಸರ್ವರಿಗೂ‌‌

ಶ್ರೀಕ್ಷೇತ್ರ ಇಟಗಿಯಲ್ಲಿ‌ ಈ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಯೋಗ ದಿನಾಚರಣೆ

ಆರೋಗ್ಯ ಭಾರತಿ ಕರ್ನಾಟಕ (ಉತ್ತರ ಪ್ರಾಂತ) ಮತ್ತು ರಾಮೇಶ್ವರ ವಿದ್ಯೋದಯ‌ ಪ್ರೌಢ ‌ಶಾಲೆ ಇಟಗಿಯ‌ ಸಹಯೋಗದಲ್ಲಿ ಶ್ರೀದೇವಸ್ಥಾನದ ಸಭಾಭವನದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಸಾಮೂಹಿಕ ಯೋಗದ ನಂತರ ವೇದಿಕೆಯಲ್ಲಿ‌ ಸಮಾರೋಪ ಸಮಾರಂಭವು ಆರೋಗ್ಯ ಭಾರತಿ ಕರ್ನಾಟಕ ಉತ್ತರ ಪ್ರಾಂತ್ಯದ ಸಿದ್ದಾಪುರ ಶಾಖೆಯ ಕಾರ್ಯದರ್ಶಿಗಳು ಶ್ರಿ ಮಾಬ್ಲೇಶ್ವರ ಭಟ್ಟರು‌(ಯಕ್ಷಗಾನ ಕಲಾವಿದರು) ಮತ್ತು ಅಧ್ಯಕ್ಷರಾಗಿ ರಾ.ವಿ. ಪ್ರೌಢ ಶಾಲೆಯ ಮುಖ್ಯಾದ್ಯಾಪಕರು ಡಿ.ಜಿ.ಪೂಜಾರ ಮತ್ತು ಮುಖ್ಯ ವಕ್ತಾರರಾಗಿ ಯೋಗದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಲು‌ ಶ್ರೀ ವೆಂಕಟ್ರಮಣ ಹೆಗಡೆ ಹೊನ್ನೆಮಡಿಕೆ

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಯೋಗ ದಿನಾಚರಣೆ Read More »

ಶ್ರೀಕ್ಷೇತ್ರ ಇಟಗಿಯ ಸಂಪ್ರೋಕ್ಷಣ

ದಿವ್ಯಾಷ್ಟಬಂಧಾಂಗ ಮಂಡಲೋತ್ಸವ ಸಂಪ್ರೋಕ್ಷಣವು ವಿಶ್ವಾವಸು ನಾಮ ಸಂವತ್ಸರದ ವೈಶಾಖ ಮಾಸ ಬಹುಳ ಸಪ್ತಮಿಯಂದು (ದಿನಾಂಕ 19-05-2025 ಸೋಮವಾರ ) ನೆಡೆಯಿತು.ಅಷ್ಷಬಂಧ ಮಹೋತ್ಸವವು ಸಂಪನ್ನಗೊಂಡು 45 ದಿನಗಳು ಕಳೆದಿರುವ ಪ್ರಯುಕ್ತ ಸಂಪ್ರೋಕ್ಷಣ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು. ವಾಸ್ತುಹೋಮ, ಕಲಶಾಭಿಷೇಕ, ಮಹಾಭಿಷೇಕ, ಶತರುಧ್ರ ಹವನ, ತತ್ವಾಧಿವಾಸ ಹೋಮ, ಮಹಾಬಲಿ, ಕಾರಣ ಸಿದ್ಧಿ ರಥೋತ್ಸವ ಮತ್ತು ಮಹಾಮಂಗಳಾರತಿ ಅನ್ನಸಂತರ್ಪಣೆ ಜರುಗಿತು. ನೆರದಿರುವ ಭಕ್ತರು ಶ್ರೀದೇವರ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು. ಹರ ಹರ ಮಹಾದೇವ🚩

ಶ್ರೀಕ್ಷೇತ್ರ ಇಟಗಿಯ ಸಂಪ್ರೋಕ್ಷಣ Read More »

ಐ.ಏ.ಎಸ್ ಪದವಿಧರರಿಗೆ ಸನ್ಮಾನ

ಶ್ರೀ ಕ್ಷೇತ್ರ ಇಟಗಿಯಲ್ಲಿ,IAS ಪರೀಕ್ಷೆಯಲ್ಲಿ ದೇಶದಲ್ಲೇ 288ನೇ ರಾಂಕ್ ಪಡೆದು ತೇರ್ಗಡೆ ಹೊಂದಿದ ವಿಕಾಸ್ ಅವರಿಗೆ ಮೊಕ್ತೇಸರ ಮಂಡಳಿಯವರಿಂದ ಗೌರವ ಸಮ್ಮಾನ ಕಾರ್ಯಕ್ರಮ ನೆರವೇರಿತು.ಮಂಗಳವಾರ ಸಂಜೆ 6 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆಡಳಿತ ಮೋಕ್ತೆಸರರಾದ ಚಂದ್ರಶೇಖರ ಹೆಗಡೆ ಕೊಡ್ತಗಣಿ ಅಧ್ಯಕ್ಷತೆ ವಹಿಸಿದ್ದರು.ಪ್ರಸ್ತವಿಕ ನುಡಿಯನ್ನು ಆಡಿದ ಅವರು,“ಎಲ್ಲಾ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದ ವಿಕಾಸ್ ಪ್ರತಿಷ್ಠಿತ IAS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಕ್ಷಣವನ್ನು ನಾವೆಲ್ಲರೂ ಕೂಡಿ ಸಂಭ್ರಮಿಸಲೇ ಬೇಕು.” ಎಂದರು. ಉಪಸ್ಥಿತರಿದ್ದು ಮಾತನಾಡಿದ ನಾರಾಯಣಮೂರ್ತಿ ಹೆಗಡೆ ಹರಗಿ

ಐ.ಏ.ಎಸ್ ಪದವಿಧರರಿಗೆ ಸನ್ಮಾನ Read More »

ಸೀಮೆಯ ಜನರು ಬೆವರು ಕೇಳಿದರೆ ರಕ್ತ ನೀಡಿದ್ದಾರೆ- ಡಾ.ಶಶಿಭೂಷಣ್ ಹೆಗಡೆ

ದಿನಾಂಕ:27/04/2025 ಭಾನುವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ದಿವ್ಯಾಷ್ಟಬಂಧ ಮಹೋತ್ಸವದ ಅಭಿವಂದನಾ ಸಭೆಯನ್ನು ಏರ್ಪಡಿಸಲಾಗಿತ್ತು. ಶಂಖನಾದದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ನಾರಾಯಣಮೂರ್ತಿ ಹೆಗಡೆ ಹರಗಿ ಅವರುಆಗಮಿಸಿದ ಸರ್ವರಿಗೂ ಸ್ವಾಗತವನ್ನು ಕೋರಿದರು. ಆಡಳಿತ‌ ಮೊಕ್ತೇಸರರಾದ ಚಂದ್ರಶೇಖರ ಹೆಗಡೆಯವರು,“ನಮ್ಮ ಇಟಗಿಯ ಅಷ್ಟಬಂಧ ಮಹೋತ್ಸವವು ನ ಭೂತೋ ನಭವಿಷ್ಯತಿ ಎನ್ನುವ ಮಾತಿನಂತೇ ಇತಿಹಾಸ ಸೃಷ್ಟಿಸುವಂತಾಗಿದೆ.ಪ್ರತಿ ಹಂತದಲ್ಲೂ ಶ್ರೀ ರಾಮೇಶ್ವರನು ಪ್ರಸಾದವನ್ನು ಅನುಗ್ರಹಿಸಿ ಕಾರ್ಯಕ್ರಮದ ಯಶಸ್ಸಿನ ಸಂದೇಶವನ್ನು ನಮಗೆ ನೀಡಿದ್ದಾನೆ” ಎಂದು ಭಾವುಕರಾಗಿ ತಮ್ಮ ಪ್ರಾಸ್ತಾವಿಕ ನುಡಿಯನ್ನು ಪ್ರಸ್ತಾಪಿಸಿದರು. ಅಷ್ಟಬಂಧ ಸಮಿತಿಯ ಕಾರ್ಯದರ್ಶಿಯಾದ ವಿನಾಯಕ‌ ಹೆಗಡೆ ಹೊನ್ನೆಮಡಿಕೆ

ಸೀಮೆಯ ಜನರು ಬೆವರು ಕೇಳಿದರೆ ರಕ್ತ ನೀಡಿದ್ದಾರೆ- ಡಾ.ಶಶಿಭೂಷಣ್ ಹೆಗಡೆ Read More »

Scroll to Top