ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪ್ರಯುಕ್ತ ಆದಿವಾಸ ಹೋಮ, ಶತರುದ್ರ ಹವನ,ಕಲಶಾಭಿಷೇಕ,ಮಹಾಬಲಿ ಹಾಗೂ ಸಂಕಲ್ಪ ಸಿದ್ಧಿ ರಥೋತ್ಸವ

ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಮಾರ್ಗಶಿರ ಅಮವಾಸ್ಯೆ (19-12-2025 ಶುಕ್ರವಾರ) ದೇವಸ್ಥಾನದ ತ್ರಿದೇವತಾ ಭಜಕರ ಮತ್ತು ಸೀಮಾ ಹಾಗೂ ಸಮಸ್ತ ಭಕ್ತರ ಶ್ರೇಯೋಭಿವೃದ್ಧಿಯನ್ನು ನೆನದು ಪ್ರತಿ ಅಮವಾಸ್ಯೆಯಂದು ನೆಡೆಯಲ್ಪಡುವ ಸಂಕಲ್ಪ ಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನ, ಆದಿವಾಸ ಹೋಮ, ಶತರುದ್ರ ಹವನ,ಕಲಾಭಿಷೇಕಗಳಾದಿಗಳಿಂದ ದೇವರಲ್ಲಿ ನೆರವೇರಿಸಲಾಯಿತು. ಹಲವಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೀಕ್ತವಾಗಿ ನೆರವೇರಿತು, ನಂತರ ಭಕ್ತಾದಿಗಳು ಪರ್ಯಾಪ್ತಿ ಅನ್ನ ಪ್ರಸಾದ ಭೋಜನವನ್ನು ಸ್ವೀಕರಿಸಿ ಕೃತಾರ್ಥರಾದರು.

Leave a Comment

Your email address will not be published. Required fields are marked *

Scroll to Top