ಇಟಗಿ:
ತಾಲೂಕಿನ ಬಿಳಗಿ ಸೀಮೆಯ ಇಟಗಿ ರಾಮೇಶ್ವರ, ಅಮ್ಮನವರು ಹಾಗೂ ವಿಠ್ಠಲ ದೇವರ ಸನ್ನಿಧಾನದಲ್ಲಿ ನವೆಂಬರ್ 28 ಮತ್ತು 29ರಂದು ಗಾಯತ್ರಿ ಜಪಾನುಷ್ಠಾನ ಹಾಗೂ ಪುರುಷ್ಚರಣ ಹವನ ಹಮ್ಮಿಕೊಳ್ಳಲಾಗಿದೆ.
ಕ್ಷೇತ್ರ ಮತ್ತು ಸೀಮೆಯ ಅಭಿವೃದ್ದಿ ಹಾಗೂ ಪ್ರಜಾಪಾಲನ ಸಂರಕ್ಷಣೆಯ ಸಂಕಲ್ಪದೊಂದಿಗೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಗಾಯತ್ರಿ ಜಪ ಸಮರ್ಪಣೆ ನಡೆಯಲಿದೆ.
ನವೆಂಬರ್ 29ರ ಭಾನುವಾರ ಶ್ರೀಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬಿಳಗಿ ಸೀಮೆಯ ಉಪನೀತರ ಆಸ್ತಿಕ ಭಕ್ತರು ಜಪಾನುಷ್ಠಾನ ಸೇವೆ ಸಲ್ಲಿಸಲಿದ್ದು, ಅಂದು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00ರವರೆಗೆ ಮೊದಲ ಅವಧಿ ಹಾಗೂ ಅಪರಾಹ್ನ 4:00ರಿಂದ ಸಂಜೆ 6:00ರವರೆಗೆ ಎರಡನೇ ಅವಧಿಯ ಜಪ ನೆರವೇರಲಿದೆ.
ಕಾರ್ಯಕ್ರಮಕ್ಕೆ ಭಕ್ತರು ಶುಭ್ರವಸ್ತ್ರವಾಗಿ ಮೋದಿ ವಸ್ತ್ರ ಹಾಗೂ ತಟ್ಟೆ-ವಸ್ತ್ರದೊಂದಿಗೆ ಹಾಜರಾಗಬೇಕಿದೆ. ಸಂಕಲ್ಪ ಪತ್ರಿಯನ್ನು ಸ್ಥಳದಲ್ಲೇ ಒದಗಿಸಲಾಗುತ್ತದೆ.
ಮಹಿಳೆಯರಿಗೆ ರಾಮತಾರಕ ಜಪಾನುಷ್ಠಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಮಧ್ಯಾಹ್ನ ಭಕ್ತರಿಗೆ ಪ್ರಸಾದ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಸ್ವಾನದ ಮೋಕ್ತೇಸರ ಮಂಡಳಿ ಮತ್ತು ಭಕ್ತವೃಂದದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಗವಹಿಸುವ ಭಕ್ತರು ತಮ್ಮ ಉಪಸ್ಥಿತಿಯನ್ನು ಮುಂಚಿತವಾಗಿ ದೂರವಾಣಿ ಮೂಲಕ ವಿಜ್ಞಾಪನೆಗೊಳಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಚಂದ್ರಶೇಖರ ಮಂ. ಹೆಗಡೆ ಕೊಡಗಣಿ (9449192311), ಹೊನ್ನಮ್ಮ ದೇವಸ್ವಾನದ ಅನಂತ ರಾ. ಭಟ್ಟ (6361790343), ಶ್ರೀಕಾಂತ ಹೆಗಡೆ ಹೊನ್ನೆಮಜಕಿ (9482555116), ಹರಿಣ ಹೆಗಡೆ ಕೊಡಗಣಿ (9480525109) ಅವರನ್ನು ಸಂಪರ್ಕಿಸಬಹುದು.

