ಶ್ರೀ ಇಷ್ಟಿಕಾಪುರಾಧೀಶ್ವರನಿಗೆ ಗಂಗಾಷ್ಟಮಿ ಪ್ರಯುಕ್ತ ಸೋಮನದಿ ಅಭಿಷೇಕ.

ಇಂದು ಗಂಗಾಷ್ಟಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ,….7….ಗಂಟೆಗೆ
ಶ್ರೀ ದೇವಸ್ಥಾನದಿಂದ ಶ್ರೀ ದೇವರ ಪಲ್ಲಕ್ಕಿಯು ಸೋಮನದಿಗೆ ತೆರಳಿ,,ಅಲ್ಲಿ ಗಂಗಾಪೂಜೆ, ರುದ್ರಾಭಿಷೇಕ,ರಾಜೋಪಚಾರ ಸೇವೆಯೊಂದಿಗೆ ಪೂಜಾ ವಿನಿಯೋಗಗಳನ್ನು ಮುಗಿಸಿಕೊಂಡು,, ಭಕ್ತರ ಮನೆ ಮನೆಯ ಪೂಜಾ ಸೇವೆಯನ್ನು ಪಡೆದು,,ಪಲ್ಲಕ್ಕಿಯು ಶ್ರೀ ದೇವಸ್ಥಾನಕ್ಕೆ ಆಗಮಿಸಿ, ದೀಪ ಬೆಳಗಿಸಿ,ಗಂಗಾಭಿಷೇಕ ಪೂರೈಸಿ ಮಹಾ ಮಂಗಳಾರತಿಯೊಂದಿಗೆ, ಗಂಗಾಷ್ಟಮಿ ಪೂಜೆ ಸಂಪನ್ನಗೊಂಡಿತು. ಭಕ್ತರು ಆಗಮಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ, ಕೃತಾರ್ಥರಾದರು.

     🚩ಹರ ಹರ ಮಹಾದೇವ🚩

Leave a Comment

Your email address will not be published. Required fields are marked *

Scroll to Top