ಮ್ಹ|| ಶ್ರೀ ರಾಮೇಶ್ವರ ಮತ್ತು ಅಮ್ಮನವರ ಹಾಗೂ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ

ವಾರ್ಷಿಕ ಕಾರ್ಯಕ್ರಮಗಳು
೧) ಚೈತ್ರಮಾಸ:
- ಶುದ್ಧ ಪಾಢ್ಯ :ಯುಗಾಧಿ ಉತ್ಸವ
೨) ವೈಶಾಖ ಮಾಸ: - ಶುಧ್ದ ಸಪ್ತಮಿ : ವಿಠ್ಠಲ ದೇವರ ವಾರ್ಷಿಕೋತ್ಸವ
- ಶುದ್ಧ ಹುಣ್ಣಿಮೆ: ವಸಂತ ಪೂಜೆ(ಪಾನಕೋತ್ಸವ)
೩) ಶ್ರಾವಣಮಾಸ: - ಪ್ರತಿ ಸೋಮವಾರ ಮತ್ತು ಅಮಾವಾಸ್ಯೆ ದಿನ: ಶತರುದ್ರಾಭಿಷೇಕ ಮತ್ತು ಮಹಾಪೂಜೆ ಮತ್ತು ಪ್ರಸಾದಭೋಜನ
- ಶುದ್ಧ ಪಂಚಮಿ: ನಾಗರಪಂಚಮಿ ಪೂಜೆ
- ಬಹುಳ ಅಷ್ಟಮಿ:ಕೃಷ್ಣಾಷ್ಟಮಿ -ವಿಠ್ಠಲ ದೇವರಿಗೆ ತುಳಸಿ ಅರ್ಚನೆ
೪) ಭಾದ್ರಪದಮಾಸ:
- ಶುದ್ಧ ಮಹಾಚೌತಿ: ಗಣೇಶ ಚತುರ್ಥಿ ಮಹಾಪೂಜೆ
೫) ಆಶ್ವೀಜಮಾಸ:
- ಶುದ್ಧ ಪಾಢ್ಯದಿಂದ ನವಮಿಪರ್ಯಂತ – ಶರನ್ನವರಾತ್ರಿ ಉತ್ಸವ
- ಶುದ್ಧ ದಶಮಿಯಂದು- ಸೀಮೋಲಂಘನ,ಬನ್ನಿಪೂಜೆ ಉತ್ಸವ
- ಬಹುಳ ಅಷ್ಟಮಿ-ಗಂಗಾಷ್ಟಮಿ,ಸೋಮನದಿಯ ತೀರಕ್ಕೆ ದೇವರ ಉತ್ಸವ,ಶ್ರೀ ದೇವರಿಗೆ ಸೋಮನದಿಯಲ್ಲಿ ರುದ್ರಾಭಿಷೇಕ,ರಾಜೋಪಚಾರ ಸೇವೆ ಮತ್ತು ಉತ್ಸವ ಹಾಗೂ ದೇವರಿ ಗಂಗಾಭಿಷೇಕ ಮಹಾಪೂಜೆ
೬) ಕಾರ್ತೀಕ ಮಾಸ:
- ಶುದ್ಧ ಪಾಢ್ಯ-ಗೋಪೂಜೆ ಮತ್ತು ಗೋಕ್ರೀಢೆ
ಹಾಗೂ ಕಾರ್ತೀಕ ಮಾಸ ಪರ್ಯಂತ ಪ್ರತಿ ನಿತ್ಯವೂ ಪಲ್ಲಕ್ಕಿ ಉತ್ಸವದೊಂದಿಗೆ ಸಹಸ್ರ ದೀಪೋತ್ಸವ. - ಶುದ್ಧ ಹುಣ್ಣಿಮೆ:ಜಗನ್ ಜ್ಯೋತಿ ಪೂಜೆ,ಶ್ರೀ ರಂಗಪೂಜೆ ಮತ್ತು ಪ್ರಾಕಾರೋತ್ಸವ
- ಬಹುಳ ಅಮಾವಾಸ್ಯೆ-ಮಹಾದೀಪೋತ್ಸವ,ಶ್ರೀ ರಂಗಪೂಜೆ,ಮಹಾಬಲಿ ಉತ್ಸವ, ಶ್ರೀ ದೇವರಿಗೆ ಸರ್ವಾಲಂಕಾರ ಮತ್ತು ಮಹಾಪೂಜೆ
೭) ಮಾರ್ಗಶಿರ ಮಾಸ:
- ಶುದ್ಧ ಷಷ್ಠಿ : ಸುಬ್ರಹ್ಮಣ್ಯ ಪೂಜೆ ಹಾಗೂ ಉತ್ಸವ
೮) ಮಾಘಮಾಸ:
- ಶುದ್ಧ ಸಪ್ತಮಿ-ರಥ ಸಪ್ತಮಿ ಪೂಜೆ
- ಬಹುಳ ಚತುರ್ದಶಿ-ಶ್ರೀ ದೇವರಿಗೆ ಶತರುದ್ರಾಭಿಷೇಕ ಹಾಗೂ ಮಹಾಶಿವರಾತ್ರಿ ಉತ್ಸವ
೯) ಫಾಲ್ಗುಣ:
- ಶುದ್ಧ ದ್ವಿತೀಯ-ವಾರ್ಷಿಕ ರಥೋತ್ಸವ ಕಾರ್ಯಕ್ರಮಗಳು ಪ್ರಾರಂಭ
- ಶುದ್ಧ ಅಷ್ಟಮಿ-ಪುಷ್ಪ ರಥೋತ್ಸವ/ಬ್ರಹ್ಮಕಲಷಾಭಿಷೇಕ
- ಶುದ್ಧ ನವಮಿ-ಆರಿದ್ರಾ ನಕ್ಷತ್ರ ಯುಕ್ತ ದಿನ, ಮಹಾರಥೋತ್ಸವ ಮತ್ತು ಸರ್ವಾಲಂಕಾರ ಮಹಾಪೂಜೆ
- ಶುದ್ಧ ದಶಮಿ-ಆವಭ್ರತೋತ್ಸವ
- ಶುದ್ಧ ಏಕಾದಶಿ-ಶತರುದ್ರ ಹವನ,ನವಚಂಡಿಕಾ ಹೋಮ
- ಪ್ರತಿ ನಿತ್ಯವೂ ಶ್ರೀ ದೇವರಲ್ಲಿ ತ್ರಿಕಾಲವೂ ಪೂಜೆ ನೈವೇದ್ಯ ಹಾಗೂ ಆಗಮೋಕ್ತ ಬಲಿ ಉತ್ಸವ ನಡೆಯುತ್ತದೆ.ಮತ್ತು ಮಧ್ಯಾಹ್ನ ದೇವರಿಗೆ ಫಲಪಂಚಾಮೃತ ಅಭಿಷೇಕ ,ಕಲ್ಪೋಕ್ತ ಪೂಜೆಗಳು ನಡೆಯುತ್ತದೆ.
- ಪ್ರತಿ ಮಾಸದ ಹುಣ್ಣಿಮೆಯಂದು ದುರ್ಗಾಹೋಮನಡೆಯುತ್ತದೆ.
- ಪ್ರತಿ ಮಾಸದ ಸಂಕಷ್ಟ ಚತುರ್ಥಿಯಂದು ಗಣಹೋಮ ನಡೆಯುತ್ತದೆ.
- ಪ್ರತಿ ಮಾಸದ ಅಮಾವಾಸ್ಯೆಯಂದು ಶತರುದ್ರಾಭಿಷೇಕ ಮಹಾಪೂಜೆ ಮತ್ತು ಪ್ರಸಾದ ಭೋಜನ ಇರುತ್ತದೆ.