4 ಎಪ್ರಿಲ್ 2025 ರಂದು ಶ್ರೀ ಕ್ಷೆತ್ರದಲ್ಲಿ ನಡೆಯುವ ಅಷ್ಟಬಂಧ ಮಹೋತ್ಸವದ ಸಮೀತಿ ರಚಿಸಿ, ಮನವಿ ಪತ್ರವನ್ನು ಅನಾವರಣ ಮಾಡಲಾಯಿತು.
ಅಷ್ಟಬಂಧ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಶಶಿಭೂಷಣ ಹೆಗಡೆ,
ಕಾರ್ಯಾಧ್ಯಕ್ಷರಾಗಿ ಚಂದ್ರಶೇಖರ ಹೆಗಡೆ ಕೊಡ್ತಗಣಿ,
ಗೌರವ ಕಾರ್ಯದರ್ಶಿಯಾಗಿ ಮೂರ್ತಿ ಹೆಗಡೆ ಹರಗಿ.
ಕಾರ್ಯದರ್ಶಿಯಾಗಿ ವಿನಾಯಕ ಹೊನ್ನೆಮಡಿಕೆಯವರ ಹೆಸರುಗಳನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ, ಆರ್.ಎಸ್. ಹೆಗಡೆ ಹರಗಿ, ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಡನೆ, ಶ್ರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತ ಭಟ್ಟ ಹೊನ್ನಮ್ಮ ದೇವಸ್ಥಾನ,ನಾಟ್ಯ ವಿನಾಯಕ ದೇವಾಲಯದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ವೈದಿಕರಾದಂತಹ ರಾಮಚಂದ್ರ ಭಟ್ಟರು, ರಾಮಕೃಷ್ಣ ಹೆಗಡೆ ಕೆಳಗಿನಮನೆ, ನಾರಾಯಣಮೂರ್ತಿ ಹೆಗಡೆ, ಜಿ.ಕೆ. ಭಟ್ ಭಟ್ಟರಕೇರಿ,ಗಜಾನನ ಹೆಗಡೆ ಕೊಡ್ತಗಣಿ ವಿನಾಯಕ ಹೊನ್ನೆಮಡಿಕೆ,
ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಸೀಮೆಯ ಭಕ್ತರು ಉಪಸ್ಥಿತರಿದ್ದರು.
ಹರ ಹರ ಮಹಾದೇವ..