ಮ್ಹ|| ಶ್ರೀ ರಾಮೇಶ್ವರ ಮತ್ತು ಅಮ್ಮನವರ ಹಾಗೂ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ

ಶ್ರೀ ಕ್ಷೇತ್ರ ಇಟಗಿ ಅಷ್ಟಬಂಧ 2025

ಮಾನ್ಯರೇ,

ಬಿಳಗಿ ಸಿಮಾಧ್ಯಕ್ಷನಾದ ಶ್ರೀರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಅಷ್ಟಬಂಧ ಮಹೋತ್ಸವವು ದಿನಾಂಕ 02-04-2025 ರಿಂದ 13-04-2025 ರ ವರೆಗೆ ಗುರದ್ವಯರ ದಿವ್ಯಸಾನ್ನಿಧ್ಯದಲ್ಲಿ ಅತಿವಿಜೃಂಭಣೆಯಿಂದ ಜರುಗಿತು.

ಅದೆಷ್ಟೋ ಕಾರ್ಯಕರ್ತರ ಹಗಲಿರುಳಿನ ಶ್ರಮದಲ್ಲಿ, ಸಹಸ್ರಾಧಿಕ ಭಕ್ತರ ಭಾಗಿತ್ವದಲ್ಲಿ, ಅದೆಷ್ಟೋ ಮಹನೀಯರ ಸಹಕಾರದಲ್ಲಿ, ಬಿಳಗಿ ಸೀಮೆಯ ಅಚ್ಚಳಿಯದೇ ಉಳಿದಿರುವ ಕಾರ್ಯಕ್ರಮಗಳಲ್ಲಿ ಈ ದಿವ್ಯಾಷ್ಟಬಂಧ ಮಹೋತ್ಸವವು ಒಂದಾಯಿತು.

ಇಂತಹ ಅದ್ಭುತ ಮಹೋತ್ಸವದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ, ಸಹಕಾರ ಸಮಯ ಎಲ್ಲವನ್ನೂ ನೀಡಿದ ಸಮಸ್ತ ಶಿವ ಭಕ್ತರಿಗೆ ಅಷ್ಟಬಂಧ ಸಮಿತಿಯೂ ಹಾಗೂ ಆಡಳಿತ ಮಂಡಳಿಯೂ ತುಂಬು ಹೃದಯದ ಅಭಿವಂದನೆಗಳನ್ನು ಅರ್ಪಿಸುತ್ತದೆ.

ಸಹಕರಿದ ಸಮಸ್ತರಿಗೂ ಶ್ರೀದೇವರ ಕೃಪಾಶೀರ್ವಾದ ಸದಾ ಲಭ್ಯವಾಗಿ ಒಳಿತಾಗಲಿ ಎಂದೂ ಸಂಪ್ರಾರ್ಥಿಸುತ್ತೇವೆ.

ಈ ಅಷ್ಟಬಂಧದ ಸಮಯ, ಸೇವೆ, ಸಹಕಾರಗಳ ಕೊಡುವಿಕೆಗೆ ನಾಂದಿಯಾಯಿತು.

ಕ್ಷೇತ್ರಕ್ಕೆ ನಮ್ಮನಿಮ್ಮೆಲ್ಲರ ಸೇವೆ ಸಹಕಾರಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅವಶ್ಯವಾಗಿ ನೀಡೋಣ.

ಕ್ಷೇತ್ರದ ವೈಭವನ್ನು ಮೇರುಶಿಖರದತ್ತ ಒಯ್ಯಲೂ ನಾವೆಲ್ಲರೂ ಸದಾ ಶ್ರಮಿಸೋಣವೆಂದು ಸಮಸ್ತರಲ್ಲಿ ಕೇಳಿಕೊಳ್ಳುತ್ತಿದ್ದೇವೆ.

ಸಮಸ್ತರಿಗೂ ಮತ್ತೋಮ್ಮೆ ಅಭಿವಂದನಗೆಳು

||ವಂದೇ ಗೋ ಮಾತರಂ||

ಅಧ್ಯಕ್ಷರು
ಅಷ್ಟಬಂಧ ಮಹೋತ್ಸವ ಸಮಿತಿ ಶ್ರೀ ಕ್ಷೇತ್ರ ಇಟಗಿ
m: 9845548588

ಮೊಕ್ತೇಸರ ಮಂಡಳಿ
ಮ|| ಶ್ರೀ ರಾಮೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ
m: 9449192311

ಅಷ್ಟಬಂಧ ಮಹೋತ್ಸವದ ವಿಡಿಯೋಗಳು ನಮ್ಮ ಚಾನೆಲ್‌ ನಲ್ಲಿ ಲಭ್ಯ

Scroll to Top