ಮ್ಹ|| ಶ್ರೀ ರಾಮೇಶ್ವರ ಮತ್ತು ಅಮ್ಮನವರ ಹಾಗೂ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ
ಸೇವಾ ಪಾವತಿಗಳು
೧. ರುದ್ರಾಭಿಷೇಕ
೨. ಏಕಾದಶ ರುದ್ರಾಭಿಷೇಕ
೩. ಶತರುದ್ರಾಭಿಷೇಕ ಪೂಜೆ
೪. ಪಂಚಾಮೃತ ಅಭಿಷೇಕ
೫. ಬಿಲ್ವಾರ್ಚನೆ
೬. ತಿಲಾರ್ಚನೆ
೭. ಭಸ್ಮಾರ್ಚನೆ
೮. ಮಂಗಳಾರತಿ
೯. ಶತರುದ್ರ ಹವನ
೧೦. ಮೃತ್ಯುಂಜಯ, ಸುಬ್ರಮಣ್ಯಾಜಪಾದಿ ಎಲ್ಲಾ(ಜಪಗಳು)
೧೧. ಕಲ್ಪೋಕ್ತ ಪೂಜೆ
೧೨. ಸರ್ವಾಲಂಕಾರ ಪೂಜೆ
೧೩. ಪಲ್ಲಕ್ಕಿ ಉತ್ಸವ
೧೪. ದೂರ್ವಾರ್ಚನೆ (ಗಣಪತಿಯ ಸನ್ನಿಧಿಯಲ್ಲಿ)
೧೫. ಸತ್ಯ ಗಣಪತಿ ವೃತ (ಗಣಪತಿಯ ಸನ್ನಿಧಿಯಲ್ಲಿ)
೧೬. ಗಣ ಹವನ (ಗಣಪತಿಯ ಸನ್ನಿಧಿಯಲ್ಲಿ)
೧೭. ಕುಂಕುಮಾರ್ಚನೆ
೧೮. ಕುಂಕುಮಾರ್ಚನೆ ಅಷ್ಟೋತ್ತರ ಸಹಿತ
೧೯. ಉಡಿ ಸೇವೆ (ಸಂಗ್ರಹ ಸಹಿತ)
೨೦. ಉಡಿ ಸೇವೆ (ಸಂಗ್ರಹ ರಹಿತ)
೨೧. ಸಪ್ತಶತಿ ಪಾರಾಯಣ (ದೇವಿ ಸನ್ನಿಧಿಯಲ್ಲಿ)
೨೨. ತುಳಸಿ ಅರ್ಚನೆ (ವಿಠ್ಠಲ ದೇವರಿಗೆ)
೨೩. ಸತ್ಯನರಾಯಣ ವೃತ ಪೂಜೆ
ವಿಷೇಶ ಸೂಚನೆ:
ಪೂಜಾ ಸಂಗ್ರಹ ಮತ್ತು ಅರ್ಚಕರ ಗೌರವ ಸಂಭಾವನೆ ಪ್ರತ್ಯೇಕವಾಗಿರುತ್ತದೆ.
ವಿಶೇಷ ಸೇವಾಪೂಜೆಗಳು ಮತ್ತು ಅದರ ಫಲ:
೧.ಪಲ್ಲಕ್ಕಿ ಉತ್ಸವ:ತ್ರಿಕಾಲದಲ್ಲಿಯೂ ನಡೆಯುವ ಬಲಿ ಉತ್ಸವದಲ್ಲಿ ದೇವರನ್ನು ಪಲ್ಲಕ್ಕಿಯಲ್ಲಿರುಸಿ ವಯಕ್ತಿಕ ಕಾರಣಗಳಿಗೆ ಸಂಕಲ್ಪಿಸಿ ದೇವರನ್ನು
ಹೊತ್ತು ಪ್ರಾಕಾರದಲ್ಲಿ ಪ್ರದಿಕ್ಷೆಯನ್ನು ಮಾಡುವುದರಿಂದ ಮಂಗಲಾದಿ ವಿಳಂಬ ಸಂಕಷ್ಟದಲ್ಲಿ(ಮದುವೆಗೆ ಸಂಬಂಧಿಸಿದ
ತೊಂದರೆಗಳಲ್ಲಿ) ಇರುವವರಿಗೆ ಪರಿಹಾರವಾಗುವುದು.
೨.ಪ್ರಾರ್ಥನಾ ಪೂಜೆ :
ಆಗಮೋಕ್ತವಾಗಿ ನಡೆಯತಕ್ಕಂತಹ ಪೂಜೆಯಲ್ಲಿ ತಮ್ಮ ಸಂಕಲ್ಪವನ್ನು ಇರಿಸಿ ದೇವರಿಗೆ ವಿಧಿಪೂರ್ವಕವಾಗಿ ಪೂಜಿಸಿ
ನೈವೇದ್ಯಾದಿಗಳನ್ನು ಸಮರ್ಪಿಸಿ ಪ್ರಾರ್ಥಿಸಿ ಬೇಡಿಕೊಳ್ಳುವುದರಿಂದ ತಮ್ಮ ಪ್ರಾರ್ಥನೆಯು ಫಲಿಸುವುದು.
೩.ತುಲಾಭಾರ ಸೇವೆ:
ದೇವರಿಗೆ ಸುವಸ್ತುಗಳಿಂದ ವಯಕ್ತಿಗವಾಗಿ ತುಲಾಭಾರ ಸೇವೆಯನ್ನು ಮಾಡಿಸುವುದರಿಂದ ಸಂಕಲ್ಪ ಸಿದ್ಧಿಯಾಗುವುದು.
೪.ಶ್ರೀರಂಗ ಪೂಜೆ:
ದೇವರಿಗೆ ಷಡ್ರಸೋಪೇತವನ್ನು ಸಿದ್ದಪಡಿಸಿ ಪರಿವಾರ ಸಮೇತ ಶ್ರೀ ರಾಮೇಶ್ವರನಿಗೆ ಸಮರ್ಪಿಸಿ ವಿಧಿಪೂರ್ವಕವಾಗಿ
ಶ್ರೀರಂಗಪೂಜೆಯನ್ನು ಸಲ್ಲಿಸಿದಲ್ಲಿ,ಎಲ್ಲ ವಿಧವಾದ ವ್ಯವಹಾರಿಕ ವ್ಯಾಜ್ಯಗಳಲ್ಲಿ ಜಯಲಭಿಸುವುದು.ಅಲ್ಲದೇ ಕೌಟುಂಬಿಕ
ಸಮಸ್ಯೆಗಳು ಪರಿಹಾರ ಆಗುವುದು.
೫.ಶಿವ-ಪಾರ್ವತಿ ಕಲ್ಯಾಣೋತ್ಸವ:
ಸರ್ವಜನ ವಶೀಕರಣದೊಂದಿಗೆ ಕೀರ್ತಿ ಲಾಭ,ಯಶೋ ಲಾಭ,ಧನ ಲಾಭಾದಿಗಳು ಪ್ರಾಪ್ತಿಯಾಗುವುದು.
೬.ಶ್ರೀ ರುದ್ರ ಹೋಮ:
ಸಂಸಾರದ ಸರ್ವ ದುಃಖಗಳನ್ನು ನಾಶ ಮಾಡುವಂತಹ ಪರಮ ಪವಿತ್ರವಾದ ರುದ್ರಮಂತ್ರಗಳಿಂದ ಶ್ರೀದೇವರನ್ನ ಅರ್ಚಿಸಿ ಪೂಜಿಸಿ
ಹೋಮಿಸುವುದರಿಂದ ಪಾಪ ಪ್ರಾಯಶ್ಚಿತವಾಗುವುದಲ್ಲದೇ ಪುಣ್ಯ ಪ್ರಾಪ್ತಿಯಾಗುವುದು.
೭.ಅಸ್ತ್ರ ಪೂಜೆ:
ದೇವರಲ್ಲಿ ರಜತ ತ್ರಿಶೂಲವನ್ನು ಹರಕೆರೂಪದಲ್ಲಿ ಪ್ರಾರ್ಥಿಸಿ ಪೂಜಿಸಿ ಅಸ್ತ್ರ ಮಂತ್ರಗಳಿಂದ ಹೋಮಿಸಿ ಆ ಅಸ್ತ್ರವನ್ನು ದೇವರಿಗೆ
ಸಮರ್ಪಿಸುವುದರಿಂದ ಆಭಿಚಾರದ ತೊಂದರೆಗಳಿಂದ ಮುಕ್ತರಾಗಬಹುದು.
೮.ಸ್ವಯಂವರ ಪಾರ್ವತಿ ಮತ್ತು ತ್ರೈಲೋಕ್ಯ ಸಮ್ಮೋಹಿನಿ ಗೌರಿ ಅನುಷ್ಠಾನ:
ಪಾರ್ವತಿಯ ಸನ್ನಿಧಾನದಲ್ಲಿ ಸ್ವಯಂವರ ಮತ್ತು ತ್ರೈಲೋಕ್ಯ ಸಮ್ಮೋಹಿನಿ ಗೌರಿ ಮಂತ್ರಗಳಿಂದ ಜಪ,ಹೋಮಾದಿಗಳನ್ನೊಳಗೊಂಡ
ಅನುಷ್ಠಾನ ಮಾಡುವುದರಿಂದ ಶ್ರೀಘ್ರದಲ್ಲಿ ಕನ್ಯೆಗೆ ವರ ಹಾಗೂ ವರನಿಗೆ ಕನ್ಯೆ ಕೂಡಿಬರುತ್ತದೆ.
೯.ವೀರಭದ್ರ ಜಪಹೋಮ:
ವೀರಭದ್ರ ಮೂಲ ಮಂತ್ರವನ್ನು ಜಪಿಸಿ ಹೋಮ ಮಾಡುವುದರಿಂದ ವಾಮಾಚಾರ ದೋಷಗಳು ಪರಿಹಾರವಾಗುತ್ತದೆ.
೧೦.ಅಥರ್ವಶೀರ್ಷ ಹೋಮ:
ಗಣಪತಿ ಉಪನಿಷತ್ ಮಂತ್ರದಿಂದ ಚತುರ್ದ್ರವ್ಯಗಳಿಂದ ಹವನ ಮಾಡುವುದರಿಂದ ವಿಘ್ನ ನಿವಾರಣೆಯಾಗುತ್ತದೆ.
೧೧.ಪುರುಷಸೂಕ್ತ ಹೋಮ:
ಪುರುಷಸೂಕ್ತ ಮಂತ್ರದಿಂದ ವಿಠ್ಠಲ ದೇವರ ಸನ್ನಿಧಾನದಲ್ಲಿ ಅನುಷ್ಠಾನ ಮಾಡುವುದರಿಂದ ಸಂತಾನಪ್ರಾಪ್ತಿಯಾಗುತ್ತದೆ.
೧೨:ಆಶ್ಲೇಷ ಬಲಿ ಮತ್ತು ತನುಪೂಜೆ:
ಈ ಸೇವೆಯನ್ನು ಸಲ್ಲಿಸುವುದರಿಂದ ನಾಗದೋಷವು ಪರಿಹಾರವಾಗುತ್ತದೆ.
೧೩.ದೀಪನಮಸ್ಕಾರ ಸೇವೆ:
ಈ ಸೇವೆಯನ್ನು ಜಗನ್ಮಾತೆ ಪಾರ್ವತಿಯ ಸನ್ನಿಧಾನದಲ್ಲಿ ಸಲ್ಲಿಸುವುದರಿಂದ ಸ್ರ್ರೀ ಸಂಬಂಧಿ ದೋಷಗಳು ಪರಿಹಾರವಾಗುತ್ತದೆ.
೧೪.ಮಹಾಮೃತ್ಯುಂಜಯ ಜಪ ಹೋಮ
ಮೃತ್ಯುಂಜಯ ಮಂತ್ರಗಳಿಂದ ಶ್ರೀ ದೇವರ ಸಾನಿಧ್ಯದಲ್ಲಿಯೇ ಮಾಡಿಸುವುದರಿಂದ ಅಪಮೃತ್ಯುವಾದಿ ಎಲ್ಲ ವಿಧವಾದ ಮೃತ್ಯು
ನಿವಾರಣೆಯಾಗುವುದಲ್ಲದೇ ಶೀಘ್ರ ಆರೋಗ್ಯಪ್ರದವಾಗುತ್ತದೆ.
೧೫.ಕಾರ್ತೀಕ ದೀಪೋತ್ಸವ ಸೇವೆ:
ಕಾರ್ತೀಕ ಮಾಸದಲ್ಲಿ ಈ ಸೆವೆಯನ್ನು ಮಾಡಿಸುವುದರಿಂದ ಬದುಕಿನಲ್ಲಿ ಇರತಕ್ಕಂತಹ ಅಂಧಕಾರವು ದೂರವಾಗಿ ಜ್ಞಾನತ್ವವು
ಪ್ರಾಪ್ತಿಯಾಗುತ್ತದೆ.