ಇಟಗಿಯಲ್ಲಿ ಸ್ಟಾರ್ ಸುವರ್ಣ ಸಂಕಲ್ಪದ ಶ್ರೀ ಗೋಪಾಲಕೃಷ್ಣ ಶರ್ಮರು

ದಿನಾಂಕ:20-21 ಡಿಸೆಂಬರ್ ಶುಕ್ರವಾರ ಮತ್ತು ಶನಿವಾರ,
ಪ್ರಸಿದ್ಧ ಸ್ಟಾರ್ ಸುವರ್ಣ ಸಂಕಲ್ಪ‌ ಕಾರ್ಯಕ್ರಮದ ವಿದ್ವಾನ್ ಗೋಪಾಲಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಎರಡೂ ದಿನಗಳ ಕಾಲ ಶ್ರೀ ಕ್ಷೇತ್ರ ಇಟಗಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ತಮ್ಮ ಕುಟುಂಬದಲ್ಲಿರುವ ಕೆಲವು ದೋಷ ನಿವಾರಣೆಗೋಸ್ಕರವಾಗಿ ಮತ್ತು ಕುಟುಂಬದಲ್ಲಿನ‌ ಉತ್ತರೋತ್ತರ ಅಭಿವೃದ್ಧಿಗಾಗಿ ,
ದೂರದ ರಬಕವಿಯ ಸದಾಶಿವ ನಾಯ್ಕರವರು ತಮ್ಮ ಸ್ನೇಹಿತರೊಂದಿಗೆ ಆಗಮಿಸಿ ಶಕ್ತಿ ಕೇಂದ್ರವಾದ ಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಶತರುದ್ರಹವನ,ಜಪ,ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಸಿದರು.

ಶ್ರೀ ರಾಮೇಶ್ವರ ಮತ್ತು ಮಾತೆ ಶ್ರೀ ಅಮ್ಮನವರಿಗೆ ಸರ್ವಾಲಂಕಾರ ಸೇವೆಯನ್ನು ಮಾಡಿಸಿ,ಕಂಗೊಳಿಸುವ ಶ್ರೀ ರಾಮೇಶ್ವರ ದರ್ಶನ ಮಾಡಿರಯವುದರಿಂದ ಶ್ರೀ ದೇವರು ತಮ್ಮ‌ಮನಸ್ಸಿಗೆ ಇನ್ನಷ್ಟು ಬಲವನ್ನು ತುಂಬಿರುವುದಾಗಿ ಭಾವನಾತ್ಮಕವಾಗಿ ತಿಳಿಸಿದರು.

ವಿದ್ವಾನ್ ಗೋಪಾಲಕೃಷ್ಣ ಶರ್ಮ‌ ಗುರೂಜಿಯವ ಮಾರ್ಗದರ್ಶನದಲ್ಲಿ ,
ವೇದಮೂರ್ತಿ ವಿಶ್ವಾನಥ ಭಟ್ಟ ನೀರಗಾನ ಇವರ ಮತ್ತು ಇನ್ನಿತರ 25 ಕ್ಕೂ ಹೆಚ್ಚಿನ ವೈದಿಕರ ಸಹಯೋಗದಲ್ಲಿ ಈ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಉಸ್ತುವಾರಿ ಮತ್ತು ಅದೇ ದಿನ‌ ರಾತ್ರಿ ನಡೆದ ‘ಚೂಡಾಮಣಿ’ ಯಕ್ಷಗಾನ ಪ್ರದರ್ಶನದ ವ್ಯವಸ್ಥೆಯನ್ನು ವಿದ್ವಾನ್ ಮನೋಜ ಭಟ್ಟ ಹೆಗ್ಗಾರಳ್ಳಿ ಅವರು ನಿರ್ವಹಿಸಿದರು.

ಕಾರ್ಯಕ್ರಮದ ಆಶೀರ್ವಚನದ ಸಂದರ್ಭದಲ್ಲಿ,
ಗುರೂಜಿಯವರು ಮಾತನಾಡಿ,
ಇಂತಹ ಧಾರ್ಮಿಕ ಪುರಾಣ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿಸುವುದೇ ಒಂದು ಪುಣ್ಯದ ಸಂಗತಿ ಹಾಗಾಗಿ ಈ ಒಂದು ರಾಮೇಶ್ವರನ ರಕ್ಷೆಯೂ ಕೂಡ ನಿಮಗೆ ವಿಶೇಷವಾಗಿ ಲಭಿಸಲಿದೆ ಎಂದರು.
ಹಾಗೇಯೇ ಶ್ರೀ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಂತಹ ತಾಂತ್ರಿಕರಾದ ಅನಂತ‌ ಭಟ್ಟರಿಗೆ ಮತ್ತು ಎಲ್ಲ ಆಡಳಿತ ಮಂಡಳಿಯವರಿಗೆ ಗೌರವ ಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪರವಾಗಿ ಮಾತನಾಡಿದ ಜಿ.ಬಿ.ಹೆಗಡೆ ಕೊಡ್ತಗಣಿ ಅವರು,ನಮ್ಮ ಕ್ಷೇತ್ರಕ್ಕೆ ಬಂದು ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿಸಿದ ಗೋಪಾಲಕೃಷ್ಣ ಗುರೂಜಿ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ಹೇಳಿದರು.

ಸ್ಟಾರ್ ಸುವರ್ಣ ಸಂಕಲ್ಪ ಎಂಬ ಪ್ರಸಿದ್ಧ ಕಾರ್ಯಕ್ರಮದ ನೇತಾರರಾದ ಗೋಪಾಲಕೃಷ್ಣ ಗುರೂಜಿಯವರನ್ನು ನೋಡಲು ಹಲವಾರು ಸಾರ್ವಜನಿಕರು ಆಗಮಿಸಿದ್ದರು.

Leave a Comment

Your email address will not be published. Required fields are marked *

Scroll to Top