ಐ.ಏ.ಎಸ್ ಪದವಿಧರರಿಗೆ ಸನ್ಮಾನ

ಶ್ರೀ ಕ್ಷೇತ್ರ ಇಟಗಿಯಲ್ಲಿ,
IAS ಪರೀಕ್ಷೆಯಲ್ಲಿ ದೇಶದಲ್ಲೇ 288ನೇ ರಾಂಕ್ ಪಡೆದು ತೇರ್ಗಡೆ ಹೊಂದಿದ ವಿಕಾಸ್ ಅವರಿಗೆ ಮೊಕ್ತೇಸರ ಮಂಡಳಿಯವರಿಂದ ಗೌರವ ಸಮ್ಮಾನ ಕಾರ್ಯಕ್ರಮ ನೆರವೇರಿತು.
ಮಂಗಳವಾರ ಸಂಜೆ 6 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆಡಳಿತ ಮೋಕ್ತೆಸರರಾದ ಚಂದ್ರಶೇಖರ ಹೆಗಡೆ ಕೊಡ್ತಗಣಿ ಅಧ್ಯಕ್ಷತೆ ವಹಿಸಿದ್ದರು.
ಪ್ರಸ್ತವಿಕ ನುಡಿಯನ್ನು ಆಡಿದ ಅವರು,
“ಎಲ್ಲಾ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದ ವಿಕಾಸ್ ಪ್ರತಿಷ್ಠಿತ IAS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಕ್ಷಣವನ್ನು ನಾವೆಲ್ಲರೂ ಕೂಡಿ ಸಂಭ್ರಮಿಸಲೇ ಬೇಕು.” ಎಂದರು.

ಉಪಸ್ಥಿತರಿದ್ದು ಮಾತನಾಡಿದ ನಾರಾಯಣಮೂರ್ತಿ ಹೆಗಡೆ ಹರಗಿ ಅವರು,
“ಇಂತಹ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಬಹಳ ಮುಖ್ಯವಾದದ್ದು.ಅಂತಹ ಕಾರ್ಯಕ್ರಮವನ್ನು ಆಡಳಿತ ಮಂಡಳಿ ಆಯೋಜಿಸಿದೆ.ದೇಶಕ್ಕೆ ಸೇವೆ ಮಾಡುವ ಮಗನನ್ನು ಕೊಟ್ಟಿದ್ದಕ್ಕಾಗಿ ತಂದೆ-ತಾಯಿಗೆ ನಮ್ಮೆಲ್ಲರ ನಮನಗಳು” ಎಂದರು.

ಇಟಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ ಹೆಗಡೆ ಕೊಡ್ತಗಣಿ ಮಾತನಾಡಿ,
“ನಮ್ಮ ದೇವಸ್ಥಾನದ ಯಾವತ್ತೂ ಭಕ್ತರಾಗಿರುವ ಈ ದಂಪತಿಗಳ ಮಗ ಇಷ್ಟು ದೊಡ್ಡ ಸಾಧನೆ ಮಾಡಿರುವುದು ನಮ್ಮ ಸೀಮೆ ಮತ್ತು ತಾಲ್ಲೂಕಿಗೆ ಹೆಮ್ಮೆಯ ವಿಷಯ.ಇವರನ್ನ ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ವಿಕಾಸ್ ಅವರ ತಾಯಿಯವರು,
“ನನ್ನ ತವರೂರಿನಲ್ಲಿ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ನನ್ನ ಮಗನಿಗೆ ಸನ್ಮಾನ ಮಾಡಿರುವುದು ನಿಜಕ್ಕೂ ನನಗೆ ಅತೀ ಸಂತಸದ ವಿಷಯ. ಈ ಸಂದರ್ಭ ನಮ್ಮ ಪುಣ್ಯ ಎಂದು ಭಾವಿಸುತ್ತೇವೆ. ನಾವು ನಂಬಿದ ದೇವರು ನಮ್ಮ ಕೈ ಬಿಟ್ಟಿಲ್ಲ” ಎಂದು ತಮ್ಮ ನುಡಿಯನ್ನಾಡಿದರು.

ಸಮ್ಮಾನಿತ ಐ.ಏ.ಎಸ್ ಪದವಿಧರ ವಿಕಾಸ್ ಅವರು,
“ದೈವಿ ಶಕ್ತಿಯನ್ನು ನೆನೆಯುತ್ತ ನಮ್ಮ ಪ್ರಯತ್ನ ಮಾಡಿದರೆ ಗುರಿಯ ಕಡೆಗಿನ ದಾರಿ ಸುಗಮವಾಗುತ್ತದೆ.ಈ ನನ್ನ ಪ್ರಯತ್ನಕ್ಕೆ ಬೆನ್ನೆಲುಭಾಗಿ ನಿಂತ ನನ್ನ ಕುಟುಂಬದ ಎಲ್ಲರಿಗೂ ನನ್ನ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ನನ್ನ ಅಜ್ಜನಮನೆಯ ಊರು ಇದು . ನಾನು ಆಡಿ ಬೆಳೆದ ಊರಲ್ಲಿ ಇವತ್ತು ನನ್ನ ಸನ್ಮಾನ ಎಂದರೆ ಪ್ರಯತ್ನ ಪಟ್ಟರೆ ಯಾವುದು ಬೇಕಾದರೂ ಸಾಧ್ಯವಾಗುತ್ತದೆ .” ಎಂದು ತಮ್ಮ ಅನಿಸಿಕೆಗಳನ್ನಾಡಿದರು.

ಈ ಸಂದರ್ಭದಲ್ಲಿ ಮೋಕ್ತೇಸರ ಮಂಡಳಿಯ ಸದಸ್ಯರು,ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Scroll to Top