ಸಿದ್ದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಆಚರಣೆಯನ್ನು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಈಶ್ವರನಿಗೆ ಶ್ರೇಷ್ಠವಾದ ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ, ಜಪ, ವೃತಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದೇ ರೀತಿಯಾಗಿ ಪುರಾಣ ಪ್ರಸಿದ್ಧ ಕ್ಷೇತ್ರ ಇಟಗಿಯಲ್ಲಿ
ಪ್ರತಿ ಸೋಮವಾರ ಮತ್ತು ಅಮಾವಾಸ್ಯೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ವಿಶ್ವಾವಸು ಸಂವತ್ಸರದ ಶ್ರಾವಣ ಮಾಸದಲ್ಲಿ ನಾಲ್ಕು ಸೋಮವಾರಗಳಿದ್ದು,
28/07/2025 ಸೋಮವಾರ
04/08/2025 ಸೋಮವಾರ
11/08/2025 ಸೋಮವಾರ
18/08/2025 ಸೋಮವಾರ
23/08/2025 ಶನಿವಾರ ಅಮಾವಾಸ್ಯೆ
(ಸಂಕಲ್ಪ ಸಿದ್ಧಿ ರಥೋತ್ಸವ)
ಪ್ರತಿ ಸೋಮವಾರ ಮತ್ತು ಅಮಾವಾಸ್ಯೆ ದಿನ ಬೆಳಿಗ್ಗೆ 9 ಗಂಟೆಯಿಂದ ಶತರುದ್ರ ಪಾರಾಯಣ ಮತ್ತು ಉಳಿದೆಲ್ಲ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ.
ಮತ್ತು ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಮತ್ತು ಪರ್ಯಾಪ್ತಿ ಪ್ರಸಾದ ಭೋಜನ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು:
1)ಶತರುದ್ರ ಪಾರಾಯಣ ಮತ್ತು ಹವನ
2)ಪಂಚಾಮೃತ ಅಭಿಷೇಕ
3)ಕ್ಷೀರಾಭಿಷೇಕ
4)ತಿಲಾರ್ಚನೆ
5)ಕುಂಕುಮಾರ್ಚನೆ (ಅಮ್ಮನವರ ಸನ್ನಿಧಿಯಲ್ಲಿ)
6)ಅಭಿಷೇಕ
7)ಭಸ್ಮಾರ್ಚನೆ
8)ಪ್ರಾರ್ಥನಾ ಪೂಜೆ
ಶ್ರಾವಣ ಬಹುಳ ಅಷ್ಠಮಿ 16-08-2025 ಶನಿವಾರ ಶ್ರೀಕೃಷ್ಣ ಜನ್ಮಾಷ್ಠಮಿಯಂದು ಬೆಳಿಗ್ಗೆ 9.00 ರಿಂದ ಸಾಮೂಹಿತ ಸತ್ಯನಾರಾಯಣ ಪೂಜೆ ಇರುತ್ತದೆ.(ಸಂಕಲ್ಪ ಸಹಿತ) ಸೇವಾ ಪಾವತಿ ರೂ.501-/
ಈ ಎಲ್ಲ ಕಾರ್ಯಕ್ರಮಗಳನ್ನು ಸೇವಾರೂಪದಲ್ಲಿ ನೇರವೇರಿಸಲು ಅವಕಾಶವಿದೆ.ಇದರ ಹೊರತಾಗಿ ಪ್ರತಿ ನಿತ್ಯವೂ ಭಕ್ತರು ತಮ್ಮ ಐಚ್ಛಿಕ ಕಾರ್ಯಕ್ರಮಗಳನ್ನು ಮಾಡಿಸಿಕೊಳ್ಳಬಹುದು ಮತ್ತು ಪ್ರತಿ ನಿತ್ಯ ನಡೆಯುವ ‘ಪರ್ಯಾಪ್ತಿ’ ಪ್ರಸಾದ ಭೋಜನದ ಸೇವೆಯನ್ನೂ ಮಾಡಬಹುದು. ಯಾವುದೇ ಮಾಹಿತಿಗಾಗಿ ದೇವಸ್ಥಾನದ ಕಾರ್ಯಲಯವನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ ಎಂದು ವಿನಂತಿಸಿದ್ದಾರೆ.
ಕಾರ್ಯಾಲಯ: 9480525109



