ದಿನಾಂಕ 5/12/2024 ಗುರುವಾರದಂದು ಫ್ರಾನ್ಸ್ ನಿಂದ ಬಂದ ಇಬ್ಬರು ವಿದೇಶಿ ಪ್ರವಾಸಿಗರು ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ಇಲ್ಲಿಯ ಶಿಲಾಮಯ ದೇವಸ್ಥಾನ ನೋಡಿ ಅತೀವ ಸಂತೋಷ ಪಟ್ಟರು.ಸಂಪೂರ್ಣವಾಗಿ ಕಲ್ಲಿನಲ್ಲಿಯೇ ದೇವಲಾಯದ ಕೆತ್ತನೇ ಎಷ್ಟೋ ಶತಮಾನಗಳ ಹಿಂದೇ ಮಾಡಲ್ಪಟ್ಟಿತ್ತು ಎಂಬ ವಿಷಯ ಕೇಳಿ ಆಶ್ಚರ್ಯಚಕಿತರಾದರು.ದೇವಾಲಯದಲ್ಲಿನ ಎಲ್ಲ ದೇವರ ದರ್ಶನ ಮಾಡಿ ಭಾರತೀಯ ಶೈಲಿಯಲ್ಲಿಯೇ ನಮಸ್ಕರಿಸಿ,ಪ್ರಸಾದ ಸ್ವೀಕರಿಸಿ ‘ಹರ ಹರ ಮಹಾದೇವ’ ಎಂಬ ನಾಮದ ಉಚ್ಛಾರ ಮಾಡಿ ಇಟಗಿ ಕ್ಷೇತ್ರದ ಜನರ ಗಮನ ಸೆಳೆದರು.
