ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ನಿತ್ಯ ಪ್ರಸಾದ ಭೋಜನವನ್ನು ಉಣಬಡಿಸುವ ಸದುದ್ಧೇಶದಿಂದ
ಖಾಯಂ ಪ್ರಸಾದ ಭೋಜನ ವ್ಯವಸ್ಥೆಯನ್ನು ಇಂದಿನಿಂದ ಶ್ರೀರಾಮೇಶ್ವರ ದೇವಸ್ಥಾನ ಇಟಗಿಯಲ್ಲಿ ಆರಂಭಿಸಲಾಯಿತು.
ಇಂತಹ ಒಂದು ಮಹತ್ಕಾರ್ಯಕ್ಕೆ ಒಂದು ಹೆಸರನ್ನು ಕರುಣಿಸಬೇಕೆಂದು ಶ್ರೀಸಂಸ್ಥಾನದವರಲ್ಲಿ ಭಿನ್ನವಿಸಿಕೊಂಡಾಗ ಪರ್ಯಾಪ್ತಿ ಎಂಬ ಅದ್ಭುತ ಹೆಸರನ್ನು ಅನುಗ್ರಹಿಸಿದ್ದಾರೆ.
ಪರ್ಯಾಪ್ತಿ ಭೋಜನ ಶಾಲೆಯಲ್ಲಿ ಇಂದಿನಿಂದ ಆರಂಭವಾದ ಪ್ರಸಾದ ಭೋಜನದಲ್ಲಿ
80 ಶಿವಭಕ್ತರು ಪ್ರಸಾದ ಭೋಜನವನ್ನು ಸ್ವೀಕರಿಸಿದರು.
ಭದ್ರಂ ಶುಭಂ ಮಂಗಳಂ