ಶ್ರೀ ಕ್ಷೇತ್ರ ಇಟಗಿಯಲ್ಲಿ ಸಂಪನ್ನಗೊಂಡ ಮಹಾದೀಪೋತ್ಸವ

ದಿನಾಂಕ:01/12/2024 ಭಾನುವಾರ,
ಕಾರ್ತೀಕ ಮಾಸ ಪರ್ಯಂತರವಾಗಿ ನಡೆದ ನಿತ್ಯ ದೀಪೋತ್ಸವದ ಸಮರ್ಪಣೆ ಮತ್ತು ಮಹಾದೀಪೋತ್ಸವವು ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆಯಿತು.
ಪ್ರಾತಃ ಕಾಲದಲ್ಲಿ,
ಅಧಿವಾಸಹೋಮ,ದೀಪಾಕ್ಯ ಹೋಮ,ಹಾಗೆಯೇ ಮಧ್ಯಾಹ್ನದಲ್ಲಿ ಶತರುದ್ರ ಪಾರಾಯಣ ಮತ್ತು ಅನ್ನಸಂತರ್ಪಣೆ ನಡೆಯಿತು.
ಸಾಯಂಕಾಲ,
ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಶ್ರೀ ರಂಗಪೂಜೆ ನೆರವೇರಿಸಿ,ಶ್ರೀ ದೇವರ ಎದುರಲ್ಲಿ ಜಗನ್ ಜ್ಯೋತಿಯನ್ನು ಪೂಜಿಸಿ ಬೆಳಗಿಸಲಾಯಿತು.ನಂತರದಲ್ಲಿ ಮಹಾಬಲಿ ಮತ್ತು ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರ ರಜತ ಪಲ್ಲಕ್ಕಿಯ ಉತ್ಸವವು ವಿಜೃಂಭಣೆಯಿಂದ ನಡೆಯಿತು.
ನಂತರದಲ್ಲಿ ರಾಜೋಪಚಾರ ಸೇವೆ,ಮಹಾಮಂಗಳಾರತಿ,ಪ್ರಸಾದ ವಿತರಣೆ ಹಾಗೂ ವಿಶೇಷ ಖಾದ್ಯಗಳ ಪನಿವಾರ ವಿತರಣೆಯಾಯಿತು.
ಈ ಅಮಾವಾಸ್ಯೆಯ ಮಹಾದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರೀ ದೇವಸ್ಥಾನದ ತಾಂತ್ರಿಕರಾದ ರಾಜೇಂದ್ರ ಭಟ್ಟರು ಧಾರ್ಮಿಕ‌ಕಾರ್ಯಕ್ರಮಗಳ ತಾಂತ್ರಿಕ ಸ್ಥಾನವನ್ನು ವಹಿಸಿದರು.
ಹಾಗೆಯೇ ಶ್ರೀ ದೇವಸ್ಥಾನದ ತಾಂತ್ರಿಕರುಗಳಾದ,
ಲಕ್ಷ್ಮೀನಾರಾಯಣ ಭಟ್ಟರು, ಅನಂತ ಭಟ್ಟರು,ತ್ರಯಂಭಕ ಭಟ್ಟರು ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದರು.
ರಾಜೋಪಚಾರ ಸೇವೆಯ ನಂತರದಲ್ಲಿ ಮಾತನಾಡಿದ ಅನಂತ ಭಟ್ಟರು ದೀಪೋತ್ಸವದ ಪ್ರತಿಯೊಂದು ವಿಶೇಷತೆಯನ್ನು ಸವಿಸ್ತಾರವಾಗಿ ಭಜಕರಿಗೆ ತಿಳಿಸಿಕೊಟ್ಟರು,
ಹಾಗೆಯೇ ಮಾತನಾಡಿದ ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಹೆಗಡೆಯವರು ಪುರಾತನ ಕಾಲದಿಂದ ಮಾಡಿಕೊಂಡು ಬಂದ ಈ ಧಾರ್ಮಿಕ‌ ಕಾರ್ಯಕ್ರಮಗಳನ್ನು ಇನ್ನೂ ವಿಜೃಂಭಣೆಯಿಂದ ಮಾಡಲು ಎಲ್ಲ ಭಕ್ತರ ಸಹಕಾರ ಅಗತ್ಯ ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕೆಂದು ವಿನಂತಿಸಿಕೊಂಡರು.

ಬಿಳಗಿ ಸೀಮಾ ಪುರವರಾಧೀಶ್ವರನಾದ ಶ್ರೀ ರಾಮೇಶ್ವರನು ಸರ್ವಲಂಕಾರದಿಂದ ಕಂಗೊಳಿಸುವುದನ್ನು ಕಂಡು,ನೆರೆದಿರುವ ಭಕ್ತಸಮೂಹವು ಪುನೀತವಾಯಿತು.

Leave a Comment

Your email address will not be published. Required fields are marked *

Scroll to Top