ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ ದಿನಾಂಕ 01/12/2024 ಭಾನುವಾರದಂದು ಮಹಾದೀಪೋತ್ಸವ ನಡೆಯಲಿದೆ.
ಕಾರ್ತೀಕ ಮಾಸ ಪರ್ಯಂತ ನಡೆದ ನಿತ್ಯ ದೀಪೋತ್ಸವದ ಸಮರ್ಪಣೆಯು,ಸಹಸ್ರ ದೀಪೋತ್ಸವ ಮತ್ತು ಜಗನ್ ಜ್ಯೋತಿಪೂಜೆಯ ಮೂಲಕ ನೆರವೇರಲಿದೆ.ಅದೇ ದಿನ ಬೆಳಿಗ್ಗೆ ಅಧಿವಾಸ ಹೋಮ,ದೀಪಾಕ್ಯ ಹೋಮ ಮತ್ತು ಮಧ್ಯಾಹ್ನ ಶತರುದ್ರ ಪಾರಯಣ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಹಾಗೆಯೇ ಸಾಯಂಕಾಲ 7 ಗಂಟೆಯಿಂದ ಶ್ರೀ ರಂಗಪೂಜೆ,ಮಹಾಬಲಿ,ರಜತ ಪಲ್ಲಕ್ಕಿ ಉತ್ಸವ,ಜಗನ್ ಜ್ಯೋತಿ ಪೂಜೆ ಮತ್ತು ಸಹಸ್ರ ದೀಪೋತ್ಸವದೊಂದಿಗೆ ಮಹಾ ದೀಪೋತ್ಸವ ಸಮರ್ಪಣೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಮೊಕ್ತೇಸರ ಮಂಡಳಿ ತಿಳಿಸಿದೆ. ಮತ್ತು ಪ್ರತಿಯೊಬ್ಬ ಭಕ್ತರೂ ಕೂಡ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.