ಶಿರಸಿಯ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾರ್ ಅವರು ಶ್ರೀಕ್ಷೇತ್ರ ಇಟಗಿಯ ಅಷ್ಟಬಂಧ ಮಹೋತ್ಸವಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದರು.ಹಾಗೆಯೇ ಹಾಸನದ ಶ್ರೀ ರಾಮಾವಧೂತರ ಆಶೀರ್ವಾದ ಪಡೆದರು.
ಹಾಗೆಯೇ ಇಟಗಿಯಲ್ಲಿ ನಡೆಯುವ ಈ ವಿಜೃಂಭಣೆಯ ಕಾರ್ಯಕ್ರಮಕ್ಕೆ ಬೇಕಾಗುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಅವರೇ ಮಾಡಿದ್ದಾರೆ. ಅದಕ್ಕೆ ಬೇಕಾಗುವ ಟ್ಯಾಂಕ್ ,ಟ್ಯಾಂಕರ್ ಗಾಡಿ ಎಲ್ಲ ವ್ಯವಸ್ಥೆಯನ್ನು ತಮ್ಮ ಸಂಸ್ಥೆಯಿಂದಲೇ ಪೂರೈಸಿರುವುದು ಸಂತಸದ ವಿಷಯ.
ಅವರಿಗೆ ಶ್ರೀ ರಾಮಾವಧೂತರ ಅಮೃತ ಹಸ್ತದಿಂದ ಮಂತ್ರಾಕ್ಷತೆ ದೊರಕಿತು.ಇವೆಲ್ಲ ಕ್ಷಣಗಳನ್ನು ಆನಂದಿಸಿದ ಅವರು ಇಟಗಿಯ ವೈಭವೀಕರಣದ ಬಗ್ಗೆ ಅತೀವ ಸಂತಸಪಟ್ಟರು.
ಈ ಸಂದರ್ಭದಲ್ಲಿ ಅಷ್ಟಬಂಧ ಸಮಿತಿಯ ಅಧ್ಯಕ್ಷರಾದ ಡಾ.ಶಶಿಭೂಷಣ್ ಹೆಗಡೆ ,ಉಮೇಶ ಹೆಗಡೆ ಕೊಡ್ತಗಣಿ,ಸತೀಶ ಹೆಗಡೆ ಬೈಲಳ್ಳಿ ಮತ್ತಿತರು ಭಾಗಿಯಾಗಿದ್ದರು.

