ಹಾಸನದ ಶ್ರೀ ಶ್ರೀ ರಾಮಾವದೂತರು ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ಅನುಗ್ರಹಿಸಿದರು.
ಇಟಗಿಯ ಭಕ್ತರು ಶ್ರೀಗಳಿಗೆ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ನೇರವೇರಿಸಿದರು.ನಂತರದಲ್ಲಿ ಆಶೀರ್ವಚನ ನೀಡಿದ ಶ್ರೀಗಳವರು ʼಪ್ರಸಿದ್ಧ ಇಟಗಿ ಕ್ಷೇತ್ರದ ವಾಸ್ತು ಶಿಲ್ಪ ವಿನ್ಯಾಸವನ್ನು ಹೊಗಳಿದರು.ರಾಮೇಶ್ವರನಿಗೆ ಭಕ್ತಿಯಿಂದ ಮಾಡುವ ಎಲ್ಲಾ ಕೆಲಸಕ್ಕೂ ಖಂಡಿತ ಫಲ ಇದ್ದೇ ಇದೆ.ಎಲ್ಲವನ್ನೂ ಕೂಡಲೇ ಅಪೇಕ್ಷಿಸದೇ ಸೇವೆ ಮಾಡುತ್ತಾ ಕಾದರೇ ಖಂಡಿತ ಅವನ ಅನುಗ್ರಹ ಆಗೇ ಆಗುತ್ತದೆʼ ಎಂದರು.ಅವದೂತರ ದರ್ಶನಕ್ಕೆ ಕ್ಷೇತ್ರದ ಭಜಕರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು.




