ಪುರಾಣ ಪ್ರಸಿದ್ಧ ಕ್ಷೇತ್ರವಾದ ಇಟಗಿ ರಾಮೇಶ್ವರ ದೇವಸ್ಥಾನದ ಅಧೀಕೃತ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ದಿನಾಂಕ:25/02/2025 ಮಹಾಶಿವರಾತ್ರಿಯಂದು ನಡೆಯಿತು.
ಮಹಾ ಶಿವರಾತ್ರಿ ನಿಮಿತ್ತ ಶಿರಸಿ ಅಂಚೆ ವಿಭಾಗವು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಹಯೋಗದೊಂದಿಗೆ, ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಚಿತ್ರವಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.
ಶಿವರಾತ್ರಿಯ ಶುಭ ದಿನದಂದು ಸಾಯಂಕಾಲ 3ಕ್ಕೆ ಇಟಗಿ ಶಾಖಾ ಅಂಚೆ ಕಚೇರಿಯ ಆವರಣದಲ್ಲಿ ಈ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆಗೊಂಡಿದೆ.









