ತುಲಾಭಾರ ಸೇವೆ

ದಿನಾಂಕ 21 ನವೆಂಬರ್,
ಶ್ರೀ ಕ್ಷೇತ್ರದಲ್ಲಿ ಅಶ್ವತ್ಥ ಗಣಪತಿ ಭಟ್ ಕಲ್ಮನೆ, ಇವರು ಸಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ ತಮ್ಮ ಉದ್ಯೋಗದ ಸಮೃದ್ಧಿಗೋಸ್ಕರ ಪ್ರಾರ್ಥಿಸಿಕೊಂಡಿದ್ದ ಅಕ್ಕಿ ಮತ್ತು ಕಾಯಿಯ ತುಲಾಭಾರ ಸೇವೆಯನ್ನು ಸಮರ್ಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ಶ್ರೀ ದೇವಸ್ಥಾನದ ತಾಂತ್ರಿಕರಾದಂತಹ,
ವೇ. ಮೂ. ಲಕ್ಷ್ಮೀನಾರಾಯಣ ಭಟ್ಟರು ಮತ್ತು ವೇ. ಮೂ. ಅನಂತ ಭಟ್ಟರ ಮಾರ್ಗದರ್ಶನದಲ್ಲಿ ಈ ಸೇವೆಯು ಶ್ರೀ ದೇವರ ಪದತಲಕ್ಕೆ ಅರ್ಪಣೆ ಆಯಿತು.

Leave a Comment

Your email address will not be published. Required fields are marked *

Scroll to Top