ದಿನಾಂಕ:29/12/2024 ಭಾನುವಾರ
ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕ ಮಂಡಳಿಯ ಎಲ್ಲ ಸದಸ್ಯರು ಶ್ರೀ ಕ್ಷೇತ್ರದ ಶ್ರೀ ರಾಮೇಶ್ವರನ ಸನ್ನಿಧಿಯಲಯಲ್ಲಿ ಪೂರ್ವ ಸಂಕಲ್ಪದಂತೆ ಶತರುದ್ರ ಹವನವನ್ನು ಮತ್ತು ಅನ್ನಸಂತರ್ಪಣೆ ನೇರವೇರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ಇಟಗಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ತಮ್ಮ ತಂಡವು ಗೆದ್ದರೆ ಶತರುದ್ರ ಹವನವನ್ನು ಸಲ್ಲಿಸುತ್ತೇವೆ ಎಂದು ಸಂಕಲ್ಪಿಸಿಕೊಂಡಿದ್ದರು.
ಅದರಂತೇಯೇ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಈ ತಂಡವು ಆಯ್ಕೆಯಾಗಿದ್ದು ಸಂತಸದಿಂದ ಶ್ರೀ ರಾಮೇಶ್ವನ ಪದತಲದಲ್ಲಿ ಸೇವೆಯನ್ನು ಸಮರ್ಪಿಸಿ ಇನ್ನಷ್ಟು ಇದೇ ರೀತಿಯ ಸೇವೆಗಳನ್ನು ಮಾಡುವ ಶಕ್ತಿ ಕೊಡು ಎಂದು ಒಮ್ಮನಸ್ಸಿನಿಂದ ಪ್ರಾರ್ಥಿಸಿದರು

