ಅಷ್ಟಬಂಧ ಮಹೋತ್ಸವದ ಉಪಸೇವಾ ಸಮೀತಿ ಪ್ರಕಟಣೆ

ದಿನಾಂಕ 05/02/2025 ಬುಧವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ಅಷ್ಟಬಂಧ ಮಹೋತ್ಸವದ ಉಪ ಸಮೀತಿಗಳ ಸದಸ್ಯರ ಹೆಸರುಗಳನ್ನು ಪ್ರಕಟಗೊಳಿಸಲಾಯಿತು.
ಅಷ್ಟಬಂಧ ಸಮೀತಿಯ ಅಧ್ಯಕ್ಷರಾಗಿರುವ ಶಶಿಭೂಷಣ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ
ಮಹತ್ಕಾರ್ಯವಾಗಿರುವ ದಿವ್ಯ ಅಷ್ಟಬಂಧ ಮಹೋತ್ಸವಕ್ಕೆ ಅವಶ್ಯವಿರುವ ಅನೇಕ ಉಪ ಸಮೀತಿಗಳ ಮುಖ್ಯಸ್ಥರು ಮತ್ತು ಸದಸ್ಯರುಗಳ ಹೆಸರುಗಳನ್ನು ಪ್ರಸ್ತಾಪಿಸಿ ಎಲ್ಲ ಸಮೀತಿ ಸದಸ್ಯರಿಗೂ ಆಮಂತ್ರಣ ಪತ್ರಿಕೆ ನೀಡಲಾಯಿತು.
ಅಧ್ಯಕ್ಷೀಯ ನುಡಿಯನ್ನು ಆಡಿದ ಡಾ|| ಶಶಿಭೂಷಣ ಹೆಗಡೆ ದೊಡ್ಮನೆಯವರು, ‘ ಇದು ಕೇವಲ ನಮ್ಮ ಸೀಮೆಗಲ್ಲದೇ ತಾಲ್ಲೂಕು,ಜಿಲ್ಲೆಗೂ ಹೆಮ್ಮೆಯ ಕಾರ್ಯಕ್ರಮ.ಈ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ಮಾಡುವ ಅತೀ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ.ಹಾಗಾಗಿ ಇಷ್ಟು ದಿನ‌ ನಮಗೆ ನಿರ್ದಿಷ್ಟ ಜವಾಬ್ದಾರಿ ಅನ್ನೋದು ಇರ್ಲಿಲ್ಲ ಆದರೆ ಈಗ ತಮ್ಮದೇ ಆದ ವಿಶೇಷ ಜವಾಬ್ದಾರಿ ತಮಗೆಲ್ಲರಿಗೂ ಬಂದಿದೆ. ಅಷ್ಟಬಂಧಕ್ಕೆ ನನ್ನ ಕೆಲಸ ಅಂತ ಕೂತ್ಕೊಳ್ಬೇಡಿ ಇವತ್ತಿನಿಂದಲೇ ನಿಮಗೆ ನೀಡಿದ ಜವಾಬ್ದಾರಿಯ ಪೂರ್ವ ತಯಾರಿ ಮಾಡಿಕೊಳ್ಳಿ. ಒಟ್ಟಾರೆಯಾಗಿ ಈ ಕಾರ್ಯಕ್ರಮ ಅಭೂತಪೂರ್ವವಾಗಿ ನಡೆಯಬೇಕು’ ಎನ್ನುವಂತೇ ಎಲ್ಲರಲ್ಲೂ ವಿನಂತಿಸಿದರು.

ಹಾಗೆಯೇ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಾಮಚಂದ್ರಾಪುರಮಠದ ವಿ.ವಿ. ಮುಖ್ಯಸ್ಥರಾದ ಆರ್ ಎಸ್ ಹೆಗಡೆ ಹರಗಿಯವರು ‘ಹಂಚಿಕೆ ಆದ ಜವಾಬ್ದಾರಿಯನ್ನು ನಾವೆಲ್ಲರೂ ಭಕ್ತಿಯಿಂದ ಅಚ್ಚುಕಟ್ಟಾಗಿ ಮಾಡಲೇಬೇಕು ಮತ್ತು ನಮ್ಮ ಕೆಲಸದೊಂದಿಗೆ ಇತರ ಕೆಲಸಕ್ಕೂ ಸಹಾಯವನ್ನು ಮಾಡುತ್ತ ಯಾವುದೇ ಕೆಲಸ ಕಾರ್ಯಗಳು ನಿಲ್ಲದಂತೇ ,ಎಲ್ಲವೂ ಸುಸೂತ್ರವಾಗಿ ಸಾಗುವಂತೇ ಮತ್ತು ಯಾವುದೇ ಗೊಂದಲಕ್ಕು ಅನುವು ಮಾಡಿಕೊಡದಂತೆ ಕೆಲಸ ನಿರ್ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ‘ ಎಂದರು.

ಹಾಗೆಯೇ ಬಂದ ಎಲ್ಲ ಸದಸ್ಯರುಗಳಿಗೆ ಭಕ್ತರಿಗೆ ಅನಿಸಿಕೆ ತಿಳಿಸಲು ಮುಕ್ತ ಅವಕಾಶ ಕಲ್ಪಿಸಲಾಯಿತು ಆ ಸಂದರ್ಭದಲ್ಲಿ ಬಂದಂತಹ ಆರೋಗ್ಯ ಸಮಸ್ಯೆಗಳ ಕುರಿತಾದ ಚರ್ಚೆಯಲ್ಲಿ ಡಾ|| ಶಶಿಭೂಷಣ ಹೆಗಡೆಯವರು ಆ ವ್ಯವಸ್ಥೆಯನ್ನು ಧನ್ವಂತರಿ ಕಾಲೇಜು ವತಿಯಿಂದ ಮಾಡಲಾಗುವುದು ಎಂದರು.

ನಂತರದಲ್ಲಿ ಬಂದಂತಹ ಎಲ್ಲ ಸವಾಲುಗಳನ್ನ ಒಗ್ಗಟ್ಟಾಗಿ ನಿಂತು ಬಗೆಹರಿಸಿ ಅಷ್ಟಬಂಧವನ್ನ ಯಶಸ್ವಿಯಾಗಲು ನಾವೆಲ್ಲರೂ ಸಹಕರಿಸುತ್ತೇವೆ ಎಂದು ಸೇರಿದ ಎಲ್ಲರೂ ಭರವಸೆ ನೀಡಿದರು.

ಈ ಸಂದರ್ಭದಲ್ಲಿ
ಸಿದ್ದಾಪುರ ಮಂಡಲದ ಅಧ್ಯಕ್ಷರಾದ ಮಹೇಶ್ ಚಟ್ನಳ್ಳಿಯವರು,ಇಟಗಿ ಪಂಚಾಯತ ಸದಸ್ಯರು,ವೈದಿಕ ವಿಭಾಗದ ಪ್ರಮುಖರಾದ ರಾಮಚಂದ್ರ ಭಟ್ಟ ಕಲ್ಲಾಳರವರು,ಶ್ರೀ ದೇವಸ್ಥಾನದ ಅರ್ಚಕರು ಕಾರ್ಯಕಾರಿ ಸಮೀತಿಯ ಎಲ್ಲ ಸದಸ್ಯರು,,ಆಶಾ ಕಾರ್ಯಕರ್ತೆಯರು ಮತ್ತು ಅನೇಕ ಭಕ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಸಮೀತಿಯ ಸಂಚಾಲಕರಾದ ಗಜಾನನ ಹೆಗಡೆ ಕೊಡ್ತಗಣಿ ನಿರ್ವಹಿಸಿದರು,ಗೌರವ ಕಾರ್ಯದರ್ಶಿಗಳಾದ ನಾರಾಯಣಮೂರ್ತಿ ಹೆಗಡೆ ಹರಗಿ ಆಭಾರ ಮನ್ನಣೆ ಮಾಡಿದರು.

Leave a Comment

Your email address will not be published. Required fields are marked *

Scroll to Top