ದಾವಣಗೆರೆಯಲ್ಲಿ ನಡೆದ ʼಇಟಗಿಯ ಇತಿವೃತ್ತʼ ಪುಸ್ತಕದ ಪರಿಚಯ ಕಾರ್ಯಕ್ರಮ

ಐತಿಹಾಸಿಕ ಮತ್ತು ಪುರಾಣ ಕ್ಷೇತ್ರವಾದ ಇಟಗಿಯ ಇತಿಹಾಸವನ್ನು ಮತ್ತು ಇಲ್ಲಿನ ವಾಸ್ತುಶಿಲ್ಪಗಳ ಕುರಿತಾದ ಮಾಹಿತಿಯನ್ನು ಒದಗಿಸುವ ‘ಇಟಗಿಯ ಇತಿವೃತ್ತ’ ಪುಸ್ತಕವನ್ನು ದಿನಾಂಕ: 07/02/2025 ಶುಕ್ರವಾರ , ರಾಷ್ಟ್ರೋತ್ಥಾನ ಶಾಲೆ ದಾವಣಗೆರೆಯಲ್ಲಿ ಪರಿಚಯಿಸಲಾಯಿತು.

“ಲೇಖಕ ಅತ್ತಿಮುರುಡು ವಿಶ್ವೇಶ್ವರ ಅವರು ಬರೆದ ಶ್ರೀ ಕ್ಷೇತ್ರ ಇಟಗಿಯ ಇತಿಹಾಸ ಪುಸ್ತಕ ‘ಇಟಗಿಯ ಇತಿವೃತ್ತ’ ಪುಸ್ತಕವು ಐತಿಹಾಸಿಕ ಮತ್ತು ಪೌರಾಣಿಕ ಕುರುಹುವಿನ‌ ಜೊತೆಗೆ ಪ್ರಾಚೀನ ಕಾಲದ ವಾಸ್ತುಶಿಲ್ಪದ ಜ್ಞಾನವನ್ನು ನೀಡುತ್ತದೆ” ಎಂದು ಭೋದಕ ದತ್ತಾತ್ರೇಯ ಭಟ್ ಮಾತನಾಡಿದರು.

“ಇಂದಿನ ಕಾಲದವರು ಪುರಾಣಗಳನ್ನು ಓದಿ ತಿಳಿದಿಕೊಳ್ಳುವುದು ಅತೀ ಅವಶ್ಯಕವಾಗಿದೆ.ಮತ್ತು ನಮ್ಮ ಸುತ್ತಮುತ್ತಲಿನಲ್ಲಿರುವ ಕ್ಷೇತ್ರದ ಬಗ್ಗೆ ಅಧ್ಯಯನ ಮಾಡುವುದು ಮತ್ತು ಆ ಕ್ಷೇತ್ರದ ಇತಿಹಾಸವನ್ನು ತಿಳಿದುಕೊಳ್ಳುವುದೂ ಅವಶ್ಯವಾಗಿದೆ. ಹಾಗಾಗಿ ʼಇಟಗಿಯ ಇತಿವೃತ್ತʼ ಪುಸ್ತಕವು ಪ್ರಕೃತಿಯ ಮಡಿಲಲ್ಲಿ ನೆಲೆನಿಂತ ಸ್ವಯಂಭೂ ರಾಮೇಶ್ವರನ ಕುರಿತಾದ ಇತಿಹಾಸವನ್ನು ತಿಳಿದುಕೊಳ್ಳಲು ಯೋಗ್ಯವಾಗಿದೆ” ಎಂದರು.
ಹಾಗೆಯೇ ಕ್ಷ-ಕಿರಣ ತಜ್ಞರಾದ ಡಾ.ಎಸ್.ಆರ್. ಹೆಗಡೆ ಮಾತನಾಡಿ,
“ಎಪ್ರಿಲ್ ಮೊದಲ ವಾರದಲ್ಲಿ ಇಟಗಿಯಲ್ಲಿ ನಡೆಯಲಿರುವ ಅಷ್ಟಬಂಧ ಮಹೋತ್ಸವವು ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಕಾರ್ಯವಾಗಿರುವುದರಿಂದ, ಇದಕ್ಕೆ ನಾವೆಲ್ಲರೂ ಕೈ ಜೋಡಿಸಿ ಆರ್ಥಿಕ ಸಹಾಯ ನೀಡಬೇಕು “ಎಂದರು

Leave a Comment

Your email address will not be published. Required fields are marked *

Scroll to Top