ಬಿಳಗಿ ಸೀಮಾಧ್ಯಕ್ಷನಾಗಿರುವ ಶ್ರೀ ರಾಮೇಶ್ವರನ ಪುಣ್ಯ ಕ್ಷೇತ್ರವಾದ ಇಟಗಿಯಲ್ಲಿ ಮಹಾಶಿವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗಿನಿಂದಲೇ, ಶೃದ್ಧಾ ಭಕ್ತಿ ಪೂರ್ವಕ ಪೂಜಾ ವಿನಿಯೋಗಗಳು ಜರುಗಿದವು. ಸಾಮೂಹಿಕ ಶತರುದ್ರ ಪಾರಾಯಣ,ಪಂಚಾಮೃತ ಅಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ,ತಿಲಾರ್ಚನೆ ಮಹಾ ಅಭಿಷೇಕ, ಮಹಾಮಂಗಳಾರತಿ,ಸಂಜೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು.,, ಎಲ್ಲ ಭಕ್ತರೂ,,ಮಹಾಶಿವರಾತ್ರಿಯ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,ಸೇವಾ ಭಾಜನರಾಗಿ,ಶ್ರೀ ರಾಮೇಶ್ವರನ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.







