ಇಟಗಿ : ಶ್ರೀ ಕ್ಷೇತ್ರ ಇಟಗಿಯ ದಿವ್ಯಾಷ್ಟಬಂಧ, ಬ್ರಹ್ಮಕಲಶ
ಭಾಗವಾಗಿ ಶುಕ್ರವಾರ ಮಹಾಸ್ಯಂದನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಶ್ರೀಸಂಸ್ಥಾನ-ಗೋಕರ್ಣ, ಶ್ರೀರಾಮಚಂದ್ರಾಪುರಮಠ ದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹಾಗೂ ಹಾಸನದ ಶ್ರೀ ಸಮರ್ಥ ರಾಮಾವಧೂತರು ಮಧ್ಯಾಹ್ನ ಎರಡರ ಹೊತ್ತಿಗೆ ರಥದಲ್ಲಿ ಉತ್ಸವ ಮೂರ್ತಿಗೆ ಮಂಗಳಾರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಸರ್ವವಾದ್ಯಗಳ ಅಬ್ಬರ, ಭಕ್ತರ ಹರ್ಶೋದ್ಗಾರದಲ್ಲಿ ರಥ ಬೀದಿಯಲ್ಲಿ ಸಾಲಂಕೃತ ರಥವನ್ನುಬೆಳೆದರು. ಭಕ್ತರು ಬಾಳೆಹಣ್ಣು, ಮಂಡಕ್ಕಿ ಚೆಲ್ಲಿ ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಅಷ್ಟಬಂಧ ಸಮಿತಿ ಗೌರವಾಧ್ಯಕ್ಷ ಶಶಿ ಭೂಷಣ ಹೆಗಡೆ, ದೇವಳ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಹೆಗಡೆ, ಅಷ್ಟಬಂಧ ವೈದಿಕ ಕರ್ಮಾಂಗದ ನೇತೃತ್ವ ವಹಿಸಿದ ಅನಂತ ಭಟ್, ಕಟ್ಟೆ ಶಂಕರ ಭಟ್ ಸಹಿತ ಹಲವರು ಉಪದ್ಥಿತರಿದ್ದರು. ಇಟಗಿ ಅಷ್ಟಬಂಧ ನಿಮಿತ್ತ ಈ ಬಾರಿ ಎರಡನೆ ಸಲ ರಾಮೇಶ್ವರನ ಮಹಾ ರಥೋತ್ಸವ ಜರುಗಿತು.

