ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಯೋಗ ದಿನಾಚರಣೆ

ಆರೋಗ್ಯ ಭಾರತಿ ಕರ್ನಾಟಕ (ಉತ್ತರ ಪ್ರಾಂತ) ಮತ್ತು ರಾಮೇಶ್ವರ ವಿದ್ಯೋದಯ‌ ಪ್ರೌಢ ‌ಶಾಲೆ ಇಟಗಿಯ‌ ಸಹಯೋಗದಲ್ಲಿ ಶ್ರೀದೇವಸ್ಥಾನದ ಸಭಾಭವನದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಸಾಮೂಹಿಕ ಯೋಗದ ನಂತರ ವೇದಿಕೆಯಲ್ಲಿ‌ ಸಮಾರೋಪ ಸಮಾರಂಭವು ಆರೋಗ್ಯ ಭಾರತಿ ಕರ್ನಾಟಕ ಉತ್ತರ ಪ್ರಾಂತ್ಯದ ಸಿದ್ದಾಪುರ ಶಾಖೆಯ ಕಾರ್ಯದರ್ಶಿಗಳು ಶ್ರಿ ಮಾಬ್ಲೇಶ್ವರ ಭಟ್ಟರು‌(ಯಕ್ಷಗಾನ ಕಲಾವಿದರು) ಮತ್ತು ಅಧ್ಯಕ್ಷರಾಗಿ ರಾ.ವಿ. ಪ್ರೌಢ ಶಾಲೆಯ ಮುಖ್ಯಾದ್ಯಾಪಕರು ಡಿ.ಜಿ.ಪೂಜಾರ ಮತ್ತು ಮುಖ್ಯ ವಕ್ತಾರರಾಗಿ ಯೋಗದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಲು‌ ಶ್ರೀ ವೆಂಕಟ್ರಮಣ ಹೆಗಡೆ ಹೊನ್ನೆಮಡಿಕೆ ಮತ್ತು ಸಹ ಶಿಕ್ಷಕರು ಮತ್ತು ಪಾಠಶಾಲಾ ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳ ಸಮ್ಮುಖದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಗಿಡಕ್ಕೆ ನೀರು ಹಾಕುವುದರ ಮೂಲಕ ಪ್ರಾರಂಭಿಸಲಾಯಿತು. ಕೆಲವು ದಿ‌ನಗಳಿಂದ‌ ಯೋಗ ಗುರುಗಳಾಗಿ ಶ್ರೀ ವಿನಾಯಕ‌ ಹೆಗಡೆ ಹೊನ್ನೆಮಡಿಕೆ ಇವರು ಯೋಗಾಭ್ಯಾಸವನ್ನು ನೀಡಿರುತ್ತಾರೆ. ಶ್ರೀಕ್ಷೇತ್ರವು ವಿಶ್ವಯೋಗ ದಿನಕ್ಕೆ ಸಾಕ್ಷಿಯಾಯಿತು. ನಂತರ ಪ್ರೌಢ ಶಾಲೆಯ ಶಿಕ್ಷಕಿ ಮೇಧಾ ಅಶೋಕ ಭಟ್ ಅವರ ಹುಟ್ಟು ಹಬ್ಬದ ಪ್ರಯುಕ್ತ “ಪರ್ಯಾಪ್ತಿ ಪ್ರಸಾದ ಬೋಜನ” ದ ಪ್ರಾಯೋಜಕರಾಗಿದ್ದರು. ವಿಶ್ವಯೋಗದಿನದ ಪ್ರಯುಕ್ತ ನೆರೆದಿರುವ ಎಲ್ಲರೂ ಪರ್ಯಾಪ್ತಿ ಪ್ರಸಾದ ಭೊಜನವನ್ನು‌ ಸವಿದು ಕೃತಾರ್ಥರಾದರು.

Leave a Comment

Your email address will not be published. Required fields are marked *

Scroll to Top