ಬಿಳಗಿ ಸೀಮಾ ಒಡೆಯ ಇಷ್ಟಿಕಾಧೀಶ್ವರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ವಿಶ್ವಾವಸುನಾಮ ಸಂವತ್ಸರದ ಶ್ರಾವಣ ಮಾಸವು ಪಾಡ್ಯ ಶುಕ್ರವಾರ ದಿನಾಂಕ 02-07-2025 ರಂದು ಆರಂಭವಾಗುವುದು. ಶ್ರೀದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಮತ್ತು ಪ್ರತಿ ಶ್ರಾವಣ ಸೋಮವಾರ ಶತರುದ್ರ ಪಾರಾಯಣ ಮತ್ತು ಹವನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕ್ಕೊಳ್ಳಲಾಗಿದ್ದು ಭಕ್ತರೆಲ್ಲರೂ ಸಹಕರಿಸ ಬೇಕಾಗಿ ವಿನಂತಿ.
ರುದ್ರ ಪಾರಾಯಣದ ಸೇವಾ ಪಾವತಿ ರೂ 601 ಆಗಿದ್ದು ಮತ್ತು ದಿನಾಂಕ ,16-08-2025 ಶನಿವಾರ ಶ್ರಾವಣ ಬಹುಳ ಅಷ್ಟಮಿಯ ಶ್ರೀಕೃಷ್ಣ ಜನ್ಮಾಷ್ಠಮಿಯಂದು ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ವೃತ ಪೂಜೆ ಇರುತ್ತದೆ (ಸಂಕಲ್ಪ ಸಹಿತ) ಸೇವಾ ಪಾವತಿ ರೂ 501 ಆಗಿರುತ್ತದೆ.
ಈ ಎಲ್ಲ ಪೂಜೆಯಲ್ಲಿ ಭಾಗವಹಿಸುವವರು ದೂರವಾಣಿಯ ಮೂಲಕ ಹೆಸರು ವಿವರಗಳನ್ನು ಕಾರ್ಯಾಲವನ್ನು ಸಂಪರ್ಕಿಸಿ ಮೊದಲೇ ನೊಂದಾಯಿಸಿಕೊಳ್ಳಬೇಕಾಗಿದೆ..

