ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ, ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿ,
ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀ ಇಷ್ಟಿಕಾಧೀಶ್ವರನಿಗೆ ಪ್ರತಿ ಅಮವಾಸ್ಯೆಯಂದು ನೆಡೆಯುವ ಸಂಕಲ್ಪ ಸಿದ್ಧಿ ರಥೋತ್ಸವ ಹಾಗೂ ತತ್ವಾಧಿವಾಸ ಹೋಮ, ಶತರುದ್ರ ಹೋಮ ಮತ್ತು ಮಹಾಬಲಿ ಪ್ರಧಾನ ಈ ಎಲ್ಲಾ ಕಾರ್ಯಾಕ್ರಮಗಳು ಸಂಪನ್ನಗೊಂಡವು.
ಜ್ಯೇಷ್ಠ ಮಾಸದ ಅಮವಾಸ್ಯೆಯಂದು ದಿನಾಂಕ 25-06-2025 ಬುಧವಾರ ವಾದ ಇಂದು ಶ್ರೀದೇವರಿಗೆ ಸಮರ್ಪಿಸಲಾಯಿತು.
ಬಿಳಗಿಯ ಭಜನಾ ತಂಡವು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನ ಸೇವೆಯಲ್ಲಿ, ಹೊಸದೊಂದು ಮೆರಗನ್ನು ಮೂಡಿಸಿತು.
ಅನುದಿನವೂ ನೆಡೆಯುವ “ಪರ್ಯಾಪ್ತಿ” ಪ್ರಸಾದ ಭೋಜನವನ್ನು ಭಕ್ತರೆಲ್ಲರೂ ಸವಿದು ಕೃತಾರ್ಥರಾದರು.
ಭದ್ರಂ ಶಿವಂ ಮಂಗಳಂ🚩





