ಶ್ರೀಕ್ಷೇತ್ರ ಇಟಗಿಯಲ್ಲಿ
ಈ ವರ್ಷದ ಶ್ರಾವಣಮಾಸದ ಕೊನೆಯ ಸೋಮವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರಸಾದ ಭೋಜನವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ದಿನಾಂಕ: 18/08/2025 ಸೋಮವಾರದಂದು,
ಶತರುದ್ರ ಪಾರಾಯಣ ಮತ್ತು ಹವನವು ದೇವಸ್ಥಾನದ ಅರ್ಚಕರು ಮತ್ತು ವೈದಿಕರ ಸಹಯೋಗದಲ್ಲಿ ನೆರವೇರಿತು.
ಹಲವಾರು ಭಕ್ತರು ದೇವರ ದರ್ಶನ ಮಾಡಿ ತಮ್ಮ ವಯಕ್ತಿಕ ಸೇವೆಗಳನ್ನು ಮಾಡಿಸಿ ಪ್ರಸಾದ ಭೋಜನ ಸ್ವೀಕರಿಸಿ ಕೃತಾರ್ಥರಾದರು.
ಈ ಸಂದರ್ಭದಲ್ಲಿ 800ಕ್ಕೂ ಅಧಿಕ ಭಕ್ತರು ‘ಪರ್ಯಾಪ್ತಿ’ ಪ್ರಸಾದ ಭೋಜನ ಸ್ವೀಕರಿಸಿದರು.
ಶ್ರಾವಣ ಕೊನೆಯ ಸೋಮವಾರದ ಪ್ರಸಾದ ಭೋಜನದ ಸೇವಾಕರ್ತರು:
- ಹರಗಿ ಉಪಾದಿವಂತರು
- ಶ್ರೀ ಸತೀಶ ಹೆಗಡೆ ಹೆಗ್ಗಾರಕೈ
ಪರ್ಯಾಪ್ತಿ ಒಂದು ದಿನದ ಪ್ರಸಾದ ಭೋಜನದ ಸೇವಾಕರ್ತರು: - ಶ್ರೀ ಎಸ್. ವಿ ಹೆಗಡೆ ಮಳಗುಳಿ ಹುಬ್ಬಳ್ಳಿ
- ಶ್ರೀ ನಾರಾಯಣ ಭಂಡಾರಿ ಇಟಗಿ
- ಶ್ರೀ ಶ್ರೀಕಾಂತ ಪೈ ಇಟಗಿ
- ಶ್ರೀ ಶ್ರೀಧರ ಹೆಗಡೆ ಬಪ್ಪನಕೊಡ್ಲು
- ಶ್ರೀ ಪಶುಪತಿ ರಾಜಾರಾಮ ಹೆಗಡೆ ಹೊಸಕೊಪ್ಪ








