ನೂತನ ಪುಷ್ಪರಥದ ಭೂಸ್ಪರ್ಶ :ಶ್ರೀಕ್ಷೇತ್ರ ಇಟಗಿ

ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೆತ್ರ ಇಟಗಿಯಲ್ಲಿ ನೂತನ ಪುಷ್ಪರಥದ ಭೂ ಸ್ಪರ್ಶ ಕಾರ್ಯಕ್ರಮ ಮತ್ತು ಶತರುದ್ರ ಪಾರಾಯಣ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿತು.

ಬಹಳ ಹಿಂದಿನ ಕಾಲದ ಪುಷ್ಪರಥವು ಜೀರ್ಣಾವಸ್ತೆಗೆ ತಲುಪಿದ್ದು,2025 ಎಪ್ರಿಲ್ ನಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ನಂತರದಲ್ಲಿ ನೂತನ ಪುಷ್ಪರಥವನ್ನು ಮಾಡುವ ಸಂಕಲ್ಪವನ್ನು ಆಡಳಿತ ಕಮೀಟಿ ಮಾಡಿತ್ತು.ಅದರಂತಯೇ ವಿಶ್ವಾವಸು ಸಂವತ್ಸರದ ಆರಂಭದಲ್ಲಿ ಮಾಡಿದ್ದ ಸಂಕಲ್ಪದಂತೇ ವಿಶ್ವಾವಸು ಸಂವತ್ಸರ ಮುಗಿಯುವ ಒಳಗಾಗಿ ನೂತನ ಪುಷ್ಪರಥವು ತಯಾರಾಗಿ ಕ್ಷೇತ್ರಕ್ಕೆ ಬಂದಿದ್ದು,ಅದನ್ನು ರಾಮೇಶ್ವರನಿಗೆ ಸಮರ್ಪಿಸುವ ಸಲುವಾಗಿ ಫೆಬ್ರವರಿ 14&15 ರಂದು ವಿವಿಧ ಧಾರ್ಮಿಕ‌ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ರಥದ ನಿರ್ಮಾಣಕ್ಕೆ ಕಾರಣೀಕರ್ತರಾದ ಬಿಳಗಿ ಸೀಮೆಯ ಸಮಸ್ತ ಭಕ್ತವೃಂದಕ್ಕೆ ಆಡಳಿತ ಕಮಿಟಿ ಕೃತಜ್ನತೆಯನ್ನು ಸಲ್ಲಿಸಿತು.ಈ ವಿಶೇಷ ಘಳಿಗೆಯನ್ನಯ ಹಲವಾರು ಭಕ್ತರು ಕಣ್ತುಂಬಿಕೊಂಡರು.

ಇದೇ ಬರುವ ಫೆಬ್ರವರಿ 26 ರಂದು ಪುಷ್ಪರಥೋತ್ಸವ ಹಾಗೂ 27 ರಂದು ಮಹಾರಥೋತ್ಸವ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

Leave a Comment

Your email address will not be published. Required fields are marked *

Scroll to Top