ಶ್ರೀಕ್ಷೇತ್ರದಲ್ಲಿ “ದಿವ್ಯಾಷ್ಟಬಂಧ ವರ್ಧಂತಿ ಉತ್ಸವ”

ಪ್ರೀಯ ಭಕ್ತರೇ,

    ಶ್ರೀದೇವರಿಗೆ ದಿವ್ಯಾಷ್ಟಬಂಧ ಮಹೋತ್ಸವ ನೆರವೇರಿಸಿ ಒಂದು ವರ್ಷ ಪೂರ್ಣಗೊಂಡಿರುವ ಪ್ರಯುಕ್ತ ಈ ಐತಿಹಾಸಿಕ ಮಹೋತ್ಸವದ ಸವಿ ನೆನಪಿಗಾಗಿ ಈ ಚೈತ್ರಮಾಸದ ಶುದ್ಧ ಸಪ್ತಮಿಯ ದಿನ (ದಿ 25-03-2026 ಬುಧವಾರ) "ದಿವ್ಯಾಷ್ಟಬಂಧ ವರ್ಧಂತಿ ಉತ್ಸವ"ವನ್ನು ಇಟ್ಟುಕೊಳ್ಳಲಾಗಿದೆ. ಈ ದಿನ "ಅಯುತ ಬಿಲ್ವಾರ್ಚನೆ" (ಹನ್ನೊಂದುಸಾವಿರ ಸಂಖ್ಯೆ), ಸಂಕಲ್ಪಸಿದ್ಧಿ ರಥೋತ್ಸವ, ಸರ್ವಾಲಂಕಾರ ಪೂಜೆ, ಸಾಮೂಹಿಕ ರುದ್ರಪಠಣ ಸೇವೆ, ಸಂಜೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಭಕ್ತರೆಲ್ಲರ ಸಹಕಾರದೊಂದಿಗೆ ನೆರವೇರಲಿದೆ.

ವಿ.ಸೂ:

  1. ಬಿಲ್ವಪತ್ರೆ ತಮ್ಮ ಊರಿನಲ್ಲಿ ಮತ್ತು ತಮಗೆ ತಿಳಿದಲ್ಲಿ ಲಭ್ಯವಿದ್ದಲ್ಲಿ, ನಮಗೆ ತಿಳಿಸಬೇಕೆಂದು ವಿನಂತಿ.
  2. ಆಸಕ್ತ ಭಕ್ತರು ರುದ್ರಪಠಣದಲ್ಲಿ ಭಾಗವಹಿಸಬಹುದು.
    ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭವಾಗುವುದು.ತಾವು ಈ ಸೇವೆಯಲ್ಲಿ ಭಾಗವಹಿಸುವರಾದಲ್ಲಿ ಮುಂಚಿತವಾಗಿ ದೂರವಾಣಿ ಮೂಲಕ ತಿಳಿಸಿದರೆ ಒಳ್ಳೆಯದು.
    ದೂರವಾಣಿ ಸಂಖ್ಯೆ
  • ಹರೀಶ ಹೆಗಡೆ ಕೊಡ್ತಗಣಿ – 9480525109
  • ಶ್ರೀಕಾಂತ ಹೆಗಡೆ ಹೊನ್ನೆಮಡಕೆ – 9482555116
    ಈ ಮೇಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸೇವಾಭಾಜನರಾಗಿ ಶ್ರೀದೇವರ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗೋಣ. ಮೊಕ್ತೇಸರ ಮಂಡಳಿ ಶ್ರೀಕ್ಷೇತ್ರ ಇಟಗಿ

Leave a Comment

Your email address will not be published. Required fields are marked *

Scroll to Top