ಸಿದ್ದಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಇಟಗಿಯಲ್ಲಿ
ವಾರ್ಷಿಕ ಮಹಾರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಮಹಾಬಲಿ, ರಥಾರೋಹಣ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
4000 ಕ್ಕೂ ಅಧಿಕ ಜನರು ಮಹಾ ಅನ್ನಸಂತರ್ಪಣೆಯ ಪ್ರಸಾದ ಭೋಜನ ಸ್ವೀಕರಿಸದರು.
ವಿಶೇಷವಾಗಿ ಈ ವರ್ಷ ಮಾಡಿದ ಏಣಿಯ ವ್ಯವಸ್ಥೆಯಿಂದ,ಆಗಮಿಸಿದ ಎಲ್ಲ ಭಕ್ತರೂ ರಥದ ಮೇಲೆ ಕುಳಿತ ಶ್ರೀ ರಾಮೇಶ್ವರನ ದರ್ಶನ ಮಾಡಿಕೊಂಡು ಪ್ರಸಾದ ಸ್ವೀಕರಿಸಿದರು.







