ಇಟಗಿಯ ಅಷ್ಟಬಂಧವನ್ನು ಅಭೂತಪೂರ್ವವಾಗಿ ನಡೆಸಲು ಬಿಳಗಿ ಸೀಮೆ ಸಜ್ಜಾಗಬೇಕು:ಡಾ||ಶಶಿಭೂಷಣ್ ಹೆಗಡೆ

ದಿನಾಂಕ:15/03/2025 ಶನಿವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಶ್ರೀ ರಾಮೇಶ್ವರ ದೇವರ ಅಷ್ಟಬಂಧ ಮಹೋತ್ಸವದ ಪೂರ್ವಭಾವಿ ಸಭೆಯನ್ನು ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ|ಶಶಿಭೂಷಣ ಹೆಗಡೆ ಅವರು,’ ದಿವ್ಯ ಅಷ್ಟಬಂಧ ಮಹೋತ್ಸವ ಸಮೀಪಿಸುತ್ತಿದೆ.ಅದಕ್ಕೆ ಅವಶ್ಯವಾದ ಆರ್ಥಿಕ ಕ್ರೋಢಿಕರಣಕ್ಕೆ ಕೆಲವೇ ದಿನಗಳು ಮಾತ್ರ ನಮಗೆ ಅವಕಾಶವಿದೆ ಹಾಗಾಗಿ ಈ ವಿಷಯಕ್ಕೆ ಹೆಚ್ವಿನ ಮಹತ್ವ ನೀಡಬೇಕು.ಅಷ್ಟಬಂಧ ಮಹೋತ್ಸವದಲ್ಲಿ ನಮ್ಮ ಕುಲಗುರುಗಳು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಭಾಗಿಯಾಗುವುದು ನಮ್ಮ ಪುಣ್ಯ. ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಯಾರಾದರೂ ಆರ್ಥಿಕ ಸಹಾಯ ನೀಡುವವರಿದ್ದರೆ ಅಂತವರನ್ನು ಪ್ರೇರೇಪಿಸಿ ಅವರಿಂದ ಸಹಾಯನ್ನು ಪಡೆಯುವುದು ನಮ್ಮ ಕರ್ತವ್ಯ’ ಎಂದರು.
ಈ ಕಾರ್ಯಕ್ಕೆ ಸರ್ವ ಭಕ್ತರೂ ಕಾರ್ಯಕ್ರಮಕ್ಕೆ ಬೇಕಾಗುವ ಸುವಸ್ತುಗಳನ್ನು ಸೇವಾರೂಪದಲ್ಲಿ ನೀಡಿ ಸಹಕರಿಸಬೇಕು ಮತ್ತು ಎಲ್ಲಾ ಕಾರ್ಯಕರ್ತರೂ ಸಕ್ರೀಯವಾಗಿ ಪಾಲ್ಗೊಂಡು ಯಾವುದೇ ಕುಂದು ಕೊರತೆ ಬಾರದಂತೆ ಕಾರ್ಯನಿರ್ವಹಿಸಬೇಕು.ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಾಣಲು ತಾವೆಲ್ಲರೂ ಪೂರ್ಣಪ್ರಮಾಣದ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.’

ಶಂಖನಾದದೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ನಾರಾಯಣಮೂರ್ತಿ ಹೆಗಡೆ ಎಲ್ಲರಿಗೂ ಸ್ವಾಗತ ಕೋರಿದರು.ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಹೆಗಡೆ ಪ್ರಾಸ್ತಾವಿಕ ನುಡಿಯನ್ನಾಡಿದರು.
ದೇವಸ್ಥಾನದ ಅರ್ಚಕರಾದ ಅನಂತ ಭಟ್ಟರವರು ಅಷ್ಟಬಂಧ ಮಹೋತ್ಸವದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ರೂಪುರೇಷೆಗಳನ್ನು ಪ್ರಸ್ತುತ ಪಡಿಸಿದರು.
ಗಜಾನನ ಹೆಗಡೆ ಕೊಡ್ತಗಣಿ ಕಾರ್ಯಕ್ರಮ‌ ನಿರೂಪಿಸಿದರು.
ಭಾಗವಹಿಸಿದ ಉಪ ಸಮೀತಿಗಳ ಕಾರ್ಯಕರ್ತರು ಸಮಗ್ರವಾಗಿ ಚರ್ಚೆಯನ್ನು ನಡೆಸಿ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ,ಕೋಶಾಧ್ಯಕ್ಷರಾದ ಜಿ.ಎಸ್.ಹೆಗಡೆ ಬೆಳ್ಳೆಮಡಿಕೆ
ಎನ್.ವಿ.ಹೆಗಡೆ ಮುತ್ತಿಗೆ,ಇಟಗಿ ಪಂಚಾಯತ ಉಪಾಧ್ಯಕ್ಷರಾದ ರಾಮಚಂದ್ರ ನಾಯ್ಕ,ಬಿಳಗಿ ಸೀಮೆಯ ಎಲ್ಲ ಮಾಗಣೆ ಪ್ರಮುಖರು,ಉಪಸಮೀತಿಯ ಮುಖ್ಯಸ್ಥರು ಮತ್ತು ಅನೇಕ ಸದಸ್ಯರು ಭಾಗವಹಿಸಿದ್ದರು.

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ

ಶ್ರೀಕ್ಷೇತ್ರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ವಿಠ್ಠಲ ಸನ್ನಿಧಾನದಲ್ಲಿ ಶ್ರೀದೇವರಿಗೆ ಸತ್ಯನಾರಾಯಣ ಪೂಜೆ, ತುಳಸಿ ಅರ್ಚನೆ ಮತ್ತು ಸಾಯಂಕಾಲ…

Read More

ಶಿವಭಕ್ತಿಯಿಂದ ಕಂಗೊಳಿಸಿದ ಶ್ರೀಕ್ಷೇತ್ರ ಇಟಗಿ

ಶ್ರಾವಣ ಮಾಸದ ಮೂರನೇ ಸೋಮವಾರವಾದ ಇಂದುಶ್ರೀ ದೇವರಲ್ಲಿ ಶತರುದ್ರ ಪಾರಾಯಣ,ಹವನ, ಮಹಾಪೂಜಾ ಹಾಗೂ ಬಲಿ ಉತ್ಸವವು ವಿಜೃಂಭಣೆಯಿಂದ, ಶ್ರದ್ಧಾ,ಭಕ್ತಿ ಪೂರ್ವಕವಾಗಿ…

Read More

Leave a Comment

Your email address will not be published. Required fields are marked *

Scroll to Top