ಶ್ರೀಕ್ಷೇತ್ರ ಇಟಗಿಯಲ್ಲಿ ‘ಶ್ರಾವಣ ಸಂಭ್ರಮ

ಶ್ರಾವಣ ಮಾಸದ ಶುಭ ಕಾಲದಲ್ಲಿ ಜಗದೀಶ್ವರನ ಸೇವೆಯನ್ನು ಮಾಡಿದರೆ ಫಲ ಪ್ರಾಪ್ತಿಯಗುವುದೆಂಬ ಆಶಯದಿಂದ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಶ್ರಾವಣ ಸೋಮವಾರದಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಿದ್ದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀರಾಮೇಶ್ವರ ದೇವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ನಾಲ್ಕು ಸೋಮವಾರಗಳಂದು ಮತ್ತು ಅಮಾವಾಸ್ಯೆಯಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,
ಮೊದಲ ಸೋಮವಾರ ಜುಲೈ 28 ರಂದು ಶತರುದ್ರ ಪಾರಾಯಣ, ರುದ್ರ ಹೋಮ, ರುದ್ರಾಭಿಷೇಕ, ಮತ್ತು ಮಹಾಪೂಜೆ ನೆರವೇರಿತು.

ಸೀಮೆಯ ಹಲವಾರು ಭಕ್ತರು ಈ ದಿನ ಪಾಲ್ಗೊಂಡು ಸೇವೆಯನ್ನು ನೀಡಿ ‘ಪರ್ಯಾಪ್ತಿ’ ಪ್ರಸಾದ ಭೋಜನ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

“ಈಶ್ವರನ ಆರಾಧನೆಯಲ್ಲಿ ಬಹಳ ವಿಶೇಷವಾದ ಧಾರ್ಮಿಕ ಆಚರಣೆಗಳನ್ನು ನಡೆಸುಕೊಂಡು ಬಂದ ನಮ್ಮ ಕ್ಷೇತ್ರದಲ್ಲಿ ಶ್ರಾವಣ ಮಾಸದಲ್ಲಿಯೂ ಶ್ರೀ ರಾಮೇಶ್ವರನ ವಿಶೇಷ ಆರಾಧನೆ ಪ್ರತಿ ಸೋಮವಾರದಂದು ನಡೆದುಕೊಂಡು ಬರುತ್ತಿದೆ.ಸೀಮೆಯ ಎಲ್ಲ ಭಕ್ತರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ನಮ್ಮೊಟ್ಟಿಗೆ ಸಹಕಾರ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು” ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಹೆಗಡೆ ಕೊಡ್ತಗಣಿ ವಿನಂತಿಸಿದರು.

Leave a Comment

Your email address will not be published. Required fields are marked *

Scroll to Top