ಶ್ರೀಕ್ಷೇತ್ರ ಇಟಗಿಯಲ್ಲಿ ಕುಟುಂಬ ಪ್ರಭೋಧನ ಸಿದ್ದಾಪುರ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಂಯೋಜನೆಯಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ನೆಡೆಯಿತು.

ದಿನಾಂಕ 04-09-2025 ಗುರುವಾರ ಶ್ರೀಕ್ಷೇತ್ರ ಇಟಗಿಯ ಆವಾರದಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ಜರುಗಿತು. ಮುಖ್ಯ ವಕ್ತಾರರಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರು ಶ್ರೀ ಶಾಂತಾರಾಮ ಸಿದ್ಧಿ ಮತ್ತು ಶ್ರೀ ನಾಗರಾಜ ನಾಯ್ಕಡ್ ಸಿದ್ದಾಪುರ, ನಿವೃತ್ತ ದಂಡಾಧಿಕಾರರು ಹಾಗೂ ಶ್ರೀದೇವಸ್ಥಾನದ ಮೊಕ್ತೇಸರರಾದ ಶ್ರೀ ಚಂದ್ರಶೇಖರ ಹೆಗಡೆ ಕೊಡ್ತಗಣಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಪ್ರಮೋದ ಹೆಗಡೆ ಅವರು ಪ್ರಾರ್ಥನೆ ಮಾಡಿದರು. ಶ್ರೀ ವೆಂಕಟ್ರಮಣ ಹೆಗಡೆ ಹೊನ್ನೆಮಡಿಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಶ್ರೀ ಗಜಾನನ ಹೆಗಡೆ ನಿರ್ವಹಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತ ಮಾತೆಗೆ ಪುಷ್ಟರ್ಚನೆ ನೆರವೇರಿಸಲಾಯಿತು.
ಮಾನ್ಯ ಮುಖ್ಯ ವಕ್ತಾರರು ಈ ಕಾರ್ಯಕ್ರಮವು ವೈಜ್ಞಾನಿಕ ಕಾರ್ಯಕ್ರಮವಲ್ಲ, ಇದು ಭಾವನಾತ್ಮಕ ಕಾರ್ಯಕ್ರಮವೆಂದು ಪ್ರಾರಂಭಿಸಿದ ಇವರು ಮಾತೃ ಭೂಮಿಯ ಬಗ್ಗೆ ಇರುವ ರಾಮಾಯಣದ ಉಲ್ಲೇಖದ ಸಾರವಾದ “ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೀಯಸಿ” ಎನ್ನುವ ವಾಕ್ಯಘೋಷದೊಂದಿಗೆ ತಾಯಿ ಮತ್ತು ಮಾತೃ ಭೂಮಿಯ ಭಾವನಾತ್ಮಕ ಸಂಬಂಧವನ್ನು ವಿವರಿಸುತ್ತಾ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಭಾರತವನ್ನು ಮೀರಿಸುವರಿಲ್ಲ. ಕೆಲವೊಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಮೆಗೆಲ್ಲ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆಯೇ? ಹಿಂದಿನ ವಿಚಾರವಾದಿಗಳಿಗೆ ಸ್ವಾತಂತ್ರ್ಯ ನಂತರ ದೇಶದ ವಿಭಜನೆಯು ಒಂದು ಚರ್ಚಿಕ ವಿಷಯವೇ ಸರಿ. ದೇಶವು ಆಸ್ತಿಯೆಂದು ಪರಿಗಣಿಸಿದವರಿಗೆ ಮತ್ತು ದೇಶವನ್ನು ತಾಯಿ ಎಂದು ಪೂಜಿಸುವವರ ನಡುವಿನ ಸಾಮ್ಯತೆಯಲ್ಲಿ ವಿಭಜನೆಯನ್ನು ಆಗಿನ ಸರಕಾರಗಳು ಸಮರ್ಥಿಸಿಕೊಂಡರೂ, ಚಿಂತಕರ ನಿಲುವಿನ ಆಧಾರದಲ್ಲಿ ಅದು ಒಪ್ಪುವ ವಿಷಯವೇ ಅಲ್ಲ ರಾಷ್ಟ್ರದ ಕಲ್ಪನೆಯಲ್ಲಿ ಸಾಂಸ್ಕೃತಿಕ ಭಾರತದ ನಕ್ಷೆಯೇ ಬೇರೆ. ಭಾರತೀಯ ಸಂಸ್ಕೃತಿಯ ಮೂಲ ಕುಟುಂಬ ಪದ್ದತಿಯಲ್ಲಿ ಅಡಕವಾಗಿದೆ, ದೇಶದ ಸಂಸ್ಕೃತಿಯು ಎಷ್ಟೋ ಪರಕೀಯರ ದಾಳಿ, ಆಡಳಿತ ಹೊರತಾಗಿಯೂ ತನ್ನ ಮೂಲ ಚರಿತ್ರೆಯನ್ನು ಹೊಂದಿದೆ, ಏನೆನ್ನು ಅಳಿಸಲು ಆಗದೇ ಹಿಂದೂ ಎನ್ನುವುದು ಜೀವನ ಪದ್ದತಿ. ಧರ್ಮವೆನ್ನುವುದು ಆಚಾರ ಪದ್ದತಿ ಅದು ಎಂದು ಮತೀಯತೆ ಅಲ್ಲ, ಅದರಲ್ಲಿಯೂ ಹಿಂದು ಧರ್ಮ ಸನಾತನ ಧರ್ಮ ಇದು ಪ್ರಕೃತಿ ಎಂದರೆ ಪಂಚಭೂತಗಳಿಗೆ ಅರ್ಪಣೆಯನ್ನು ಹೊಂದಿರುವ ಧರ್ಮ ಎಂದು ಹಿಂದೂ ಆಚಾರ ಮತ್ತು ರೂಢಿ ಸಂಪ್ರದಾಯದ ವಿವರಣೆಯೊಂದಿಗೆ ಭಾರತ ಮಾತೆ ಎನ್ನುವ (ದೇಶ) ವಿಷಯದಲ್ಲಿ ನಾವೆಲ್ಲ ಒಂದು. ಈ ಭಾವನೆ ಮತ್ತು ಕಲ್ಪನೆಗಿಂದ ಮಿಗಿಲಾದ ಶಕ್ತಿ ಬೇರೊಂದಿಲ್ಲ. ನಮ್ಮ ಐಕ್ಯತೆಯ ಶಕ್ತಿಯು ಕೇಂದ್ರವಾಗಬೇಕು, ಭಾರತ ಮಾತೆ ಎನ್ನುವ ಅಭಿಮಾನ ಮುಖ್ಯ, ತಾಯಿ ಎನ್ನುವ ಭಾವನೆ ಬಂದಾಗ ನಾವೆಲ್ಲ ಒಂದೇ ಎಂದು ಮಾತನಾಡುತ್ತಾ ದೇಶದ ಬೆಳವಣಿಗೆಯು ಕುಟುಂಬದ ಸಂಸ್ಕಾರದಲ್ಲಿ ಅಡವಾಗಿದೆ. ಭಾರತ ಮಾತೆ (ದೇಶ) ಎನ್ನುವ ವಿಷಯದಲದಲಿ ಏಕತೆಯಲ್ಲಿ ಸಾಮರಸ್ಯದಿಂದ ಬದುಕುವ ಪದ್ದತಿಯು ಒಳಿತು ಎಂದು ನುಡಿಯುತ್ತಾ, ಹಿಂದೂ ಆಚಾರ ಪದ್ದತಿಯು ಜಾಗೃತವಾಗಬೇಕು ಎಂದು ಹೇಳಿದರು.. ನಿವೃತ್ತ ದಂಡಾಧಿಕಾರಗಳಾದ ಶ್ರೀ ನಾಗರಾಜ ನಾಯ್ಕಡ್ ಸಿದ್ದಾಪುರ ಇವರು ಶಾಂತಿ ಮತ್ತು ಸೌಹಾರ್ಧವಾಗಿ ಬದುಕುವ ಮಾರ್ಗದಲ್ಲಿ ನಾವು ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಮತ್ತು ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಂಜಯ್ಯ ಹೆಗಡೆ ಕೊಡ್ತಗಣಿ ಇವರು ಭಾರತ ಮಾತೆ ಮತ್ತು ಕುಟುಂಬ ಪರಿವಾರದ ಆಚಾರ ಪದ್ದತಿ ಮತ್ತು ಶ್ರೀ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಮತೀಯ ಭಾವನೆಗಳಿಲ್ಲದೇ ಶ್ರೀ ದೇವಸ್ಥಾನದಲ್ಲಿ ಅನುದಿನವೂ ನೆಡೆಯುತ್ತಿರುವ ಪರ್ಯಾಪ್ತಿ ಸಾಮೂಹಿಕ ಪ್ರಸಾದ ಭೋಜನದ ಬಗ್ಗೆ ವಿವರಿಸಿದರು. ನಂತರ ಕಾರ್ಯಕ್ರಮದಲ್ಲಿ ಸಂವಾದವನ್ನು ಏರ್ಪಡಿಸಲಾಗಿತ್ತು. ತಾಲೂಕಿನಾದ್ಯಂತ ಬಂದಿದ್ದ ನೂರಾರು ನಾಗರಿಕರು ಭಾಗವಹಿಸಿದ್ದರು. ಶ್ರೀ ಶಾಂತಾರಾಮ ಸಿದ್ಧಿಯವರು ಇಂದಿನ ಪರ್ಯಾಪ್ತಿ ಭೋಜನದ ಸೇವಾಕರ್ತರಾಗಿದ್ದರು.

Leave a Comment

Your email address will not be published. Required fields are marked *

Scroll to Top