Uncategorized

ಶ್ರೀ ಕ್ಷೇತ್ರ ಇಟಗಿಯ ʼಅಧಿಕೃತ ಅಂಚೆ ಲಕೋಟೆʼ ಬಿಡುಗಡೆ

ಪುರಾಣ ಪ್ರಸಿದ್ಧ ಕ್ಷೇತ್ರವಾದ ಇಟಗಿ ರಾಮೇಶ್ವರ ದೇವಸ್ಥಾನದ ಅಧೀಕೃತ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ದಿನಾಂಕ:25/02/2025 ಮಹಾಶಿವರಾತ್ರಿಯಂದು ನಡೆಯಿತು. ಮಹಾ ಶಿವರಾತ್ರಿ ನಿಮಿತ್ತ ಶಿರಸಿ ಅಂಚೆ ವಿಭಾಗವು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಹಯೋಗದೊಂದಿಗೆ, ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಚಿತ್ರವಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ. ಶಿವರಾತ್ರಿಯ ಶುಭ ದಿನದಂದು ಸಾಯಂಕಾಲ 3ಕ್ಕೆ ಇಟಗಿ ಶಾಖಾ ಅಂಚೆ ಕಚೇರಿಯ ಆವರಣದಲ್ಲಿ ಈ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆಗೊಂಡಿದೆ.

ಶ್ರೀ ಕ್ಷೇತ್ರ ಇಟಗಿಯ ʼಅಧಿಕೃತ ಅಂಚೆ ಲಕೋಟೆʼ ಬಿಡುಗಡೆ Read More »

ವಿವಾಹರ್ಥವಾಗಿ ಪುರುಷಸೂಕ್ತಹೋಮ

ದಿನಾಂಕ:05/01/2025 ಭಾನುವಾರ ಅನ್ವಿತಾ ಶ್ರೀಕಾಂತ ಬೆಂಗಳೂರು ಅವರ ಕುಟುಂಬದವರು ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ಶೀಘ್ರವಾಗಿ ವಿವಾಹ ಭಾಗ್ಯ ಪ್ರಾಪ್ತಿಯಾಗಲೆಂದು ಶ್ರೀ ವಿಠ್ಠಲ ದೇವರಲ್ಲಿ ಪ್ರಾರ್ಥಿಸಿ ಪುರುಷಸೂಕ್ತ ಹೋಮ ಸೇವೆಯನ್ನು ಸಲ್ಲಿಸಿದರು.ಯಜಮಾನ ಕುಟುಂಬದವರು, ಶ್ರೀ ಕ್ಷೇತ್ರ ಇಟಗಿಯ ಸುಂದರ ಪರಿಸರ ನೋಡಿ ‘ಮತ್ತೆ ಮತ್ತೆ ಬರುವ ಆಸೆ ಮನಸ್ಸಿನಲ್ಲಿ ಮೂಡುತ್ತಿದೆ ‘ ಎಂದು ಭಾವನಾತ್ಮಕವಾಗಿ ತಮ್ಮ ಸಂತೋಷ ವ್ಯಕ್ತಪಡಿಸಿದರು

ವಿವಾಹರ್ಥವಾಗಿ ಪುರುಷಸೂಕ್ತಹೋಮ Read More »

ಶ್ರೀ ಕ್ಷೇತ್ರದಲ್ಲಿ ನಡೆದ ತುಲಾಭಾರ, ಶತರುದ್ರ ಹೋಮ ಸೇವೆ

ದಿನಾಂಕ:13/12/2024 ಶುಕ್ರವಾರ,ರಾಘವೆಂದ್ರ ಶರ್ಮ ತಾಳಗುಪ್ಪ ಇವರು ತಮ್ಮ ಸಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ,ತಾವು ಈ ಹಿಂದೆಯೇ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿಯೇ ಮಾಡಿಸಸುತ್ತೇವೆ ಎಂಬುದಾಗಿ ಸಂಕಲ್ಪ ಮಾಡಿದ ತಮ್ಮ ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೋಸ್ಕರವಾಗಿಶ್ರೀ ದೇವರಿಗೆ ತುಲಾಭಾರ ಸೇವೆ ಮತ್ತು ಶತರುದ್ರ ಹವನವನದ ಸೇವೆಯನ್ನು ಮಾಡಿ ಶ್ರೀ ದೇವರ ಸಂಪೂರ್ಣ ರಕ್ಷೆಯನ್ನು ಪಡೆದರು

ಶ್ರೀ ಕ್ಷೇತ್ರದಲ್ಲಿ ನಡೆದ ತುಲಾಭಾರ, ಶತರುದ್ರ ಹೋಮ ಸೇವೆ Read More »

Scroll to Top