ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸದ ಆಮಂತ್ರಣ

ಬಿಳಗಿ ಸೀಮಾ ಆರಾಧ್ಯ ದೈವ ಮಹತೋಬಾರ ಶ್ರೀರಾಮೇಶ್ವರ , ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ನೆರವೇರುವ ಸಕಲ ಪೂಜಾ ವಿನಿಯೋಗಗಳು ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಲಿದ್ದು. ಪ್ರಿಯ ಭಕ್ತಾದಿಗಳಿಗೆ ಈ ಮೂಲಕ ಶ್ರೀದೇವಸ್ಥಾನವು ಆಮಂತ್ರಿಸುತ್ತದೆ.

ಪರಾಭವನಾಮ ಸಂ| ಶ್ರಾವಣ ಮಾಸವು ಪಾಡ್ಯ 13-08-2026 ರಿಂದ ಆರಂಭವಾಗುವುದು, ಈ ಶ್ರಾವಣ ಮಾಸದಲ್ಲಿ 4 ಸೋಮವಾರಗಳಿದ್ದು, ಪ್ರತಿ ಸೋಮವಾರದಂದು ಶತರುದ್ರ ಪಾರಾಯಣ ಮತ್ತು ಹವನವು ನೆರವೇರಲಿದ್ದು, ಮಾಸದುದ್ದಕ್ಕೂ ಅರ್ಚನೆ ಮತ್ತು ಅಬಿಷೇಕಾದಿಗಳಿಗೆ ಅವಕಾಶವಿರುತ್ತದೆ.

ಶ್ರೀದೇವಸ್ಥಾನದ ವಿಶೇಷ ದಿನಗಳು: ಶ್ರೀದೇವಸ್ಥಾನದಲ್ಲಿ 26-08-2026 ಬುಧವಾರ ಶಿವಪವಿತ್ರಾರೋಪಣ , 28-08-2026 ಶುಕ್ರವಾರ ಹುಣ್ಣಿಮೆ ದುರ್ಗಾಹವನ,ಉಪಕರ್ಮ , 31-08-2026 ಸೋಮವಾರ ಸಂಕಷ್ಠಿ ಗಣಹವನ, 04-09-2026 ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಠಮಿ (ಶ್ರೀವಿಷ್ಣು ದೇವಸ್ಥಾನ) ಸಾಮೂಹಿಕ ಸತ್ಯನಾರಾಯಣ ಪೂಜೆ ಇರುತ್ತದೆ ಈ ಎಲ್ಲಾ ದೇವತಾ ಕಾರ್ಯಕ್ರಮಗಳಿಗೆ ಕುಟುಂಬ ಸಹಿತ ಪಾಲ್ಗೊಂಡು ಶ್ರೀದೇವರ ಮುಡಿಗಂಧ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.

Leave a Comment

Your email address will not be published. Required fields are marked *

Scroll to Top