ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ, ಶ್ರೀಕ್ಷೇತ್ರ ಇಟಗಿ
ಇಟಗಿ, 24 ಆಗಸ್ಟ್ 2026:
ಶ್ರಾವಣ ಮಾಸದ ಪವಿತ್ರ ಎರಡನೇ ಸೋಮವಾರದ ಅಂಗವಾಗಿ ಶ್ರೀಕ್ಷೇತ್ರ ಇಟಗಿಯ ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ವಿಶೇಷ ಸೇವಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಶ್ರಾವಣ ಮಾಸದ ಪಾವಿತ್ರ್ಯಕ್ಕೆ ವಿಶೇಷ ಮಹತ್ವವಿರುವ ಹಿನ್ನೆಲೆಯಲ್ಲಿ, ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಹಾಗೂ ಸೇವಾ ಕಾರ್ಯಕ್ರಮಗಳು ನಡೆದವು. ವಿವಿಧ ಗ್ರಾಮಗಳು, ನಗರಗಳು ಆಗಮಿಸಿದ ಭಕ್ತರು ತಮ್ಮ ಕುಟುಂಬದ ಪರವಾಗಿ ವಿವಿಧ ಸೇವೆಗಳನ್ನು ಸಲ್ಲಿಸಿ ಶ್ರೀರಾಮೇಶ್ವರ ದೇವರ ಕೃಪೆಗೆ ಪಾತ್ರರಾದರು.
ಶ್ರಾವಣ ಪ್ರಸಾದ ಭೋಜನ ಸೇವೆ: ಶ್ರಾವಣ ಎರಡನೇ ಸೋಮವಾರದಂದು ಭಕ್ತರಿಗೆ ಪ್ರಸಾದ ಭೋಜನ ಸೇವೆಯನ್ನು ಶ್ರೀ ಉಮೇಶ ಸುಬ್ರಾಯ ಹೆಗಡೆ, ಕೊಡ್ತಗಣಿ – ಕ್ಷೇಮಾ ಡಿಸ್ಟ್ರಿಬ್ಯೂಟರ್ಸ್, ಸಿದ್ದಾಪುರ, ಶ್ರೀಮತಿ ಅಮೃತಾ ರಾಮಕೃಷ್ಣ ಜೋಷಿ, ಗೋಕರ್ಣ – U.S.A. ಹಾಗೂ ಶ್ರೀ ಕನ್ನಪ್ಪ ದ್ಯಾವಾ ಗೌಡ, ಹರ್ಗಿ ಜಡ್ಡಿ ಅವರು ಭಕ್ತಿಪೂರ್ವಕವಾಗಿ ಸಲ್ಲಿಸಿದರು.
ಸೇವಾಕರ್ತರ ಸಹಕಾರದಿಂದ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ಅಚ್ಚುಕಟ್ಟಾಗಿ ನೆರವೇರಿತು. ಭಕ್ತರು ಪ್ರಸಾದ ಸ್ವೀಕರಿಸಿ ದೇವರ ದರ್ಶನ ಪಡೆದು ಪುನೀತರಾದರು.
ಸರ್ವಾಲಂಕಾರ ಸೇವೆ: ಶ್ರಾವಣ ಎರಡನೇ ಸೋಮವಾರದ ವಿಶೇಷ ಸಂದರ್ಭದಲ್ಲಿ ಶ್ರೀ ಉಮೇಶ ಸುಬ್ರಾಯ ಹೆಗಡೆ, ಕೊಡ್ತಗಣಿ – ಕ್ಷೇಮಾ ಡಿಸ್ಟ್ರಿಬ್ಯೂಟರ್ಸ್, ಸಿದ್ದಾಪುರ ಅವರು ಸರ್ವಾಲಂಕಾರ ಸೇವೆಯನ್ನು ಸಲ್ಲಿಸಿದರು.


ಶ್ರೀರಾಮೇಶ್ವರ ದೇವರ ಸೇವಾ ಕಾರ್ಯಗಳಲ್ಲಿ ಭಕ್ತಿಯಿಂದ ಭಾಗವಹಿಸಿ, ಪ್ರಸಾದ ಭೋಜನ, ಸರ್ವಾಲಂಕಾರ ಹಾಗೂ ಶತರುದ್ರ ಹವನ ಸೇವೆಗಳಿಗೆ ಸಹಕಾರ ನೀಡಿದ ಎಲ್ಲಾ ಸೇವಾಕರ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು.
ಭಕ್ತರ ಸಹಕಾರ ಮತ್ತು ಸೇವಾ ಮನೋಭಾವದಿಂದ ಶ್ರೀಕ್ಷೇತ್ರ ಇಟಗಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ ನಿರಂತರವಾಗಿ ಮುಂದುವರಿಯುತ್ತಿದೆ.
ಶ್ರೀರಾಮೇಶ್ವರ ದೇವರ ಅನುಗ್ರಹವು ಎಲ್ಲಾ ಭಕ್ತರ ಮೇಲಿರಲಿ.
ಶ್ರಾವಣ ಮಾಸದ ಧಾರ್ಮಿಕ ಸೇವೆಗಳಿಗೆ ಭಕ್ತರ ಸಹಕಾರವನ್ನು ಸದಾ ಸ್ವಾಗತಿಸಲಾಗುತ್ತದೆ.
ಓಂ ನಮಃ ಶಿವಾಯ 🙏
ಶ್ರೀರಾಮೇಶ್ವರಾಯ ನಮಃ 🙏
