news

ಇಟಗಿ ಕ್ಷೇತ್ರ ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರ : ಕಾಗೇರಿ

ತ್ರಿಕಾಲ ಬಲಿ ಉತ್ಸವ ನಡೆಯುವ ಶ್ರೀ ಕ್ಷೇತ್ರ ಇಟಗಿಯು ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರವಾಗಿದೆ. ಇಲ್ಲಿನ ಇತಿಹಾಸ ಮತ್ತು ಧಾರ್ಮಿಕ ಆಚರಣೆಗಳು ಬಹಳ ಮಹತ್ವದ್ದಾಗಿದೆ, ಎಂದು ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿದರು.ಶ್ರೀಯುತರು ಎಪ್ರಿಲ್ 5 ರಂದು ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮೆಯ ಶ್ರೀಕ್ಷೇತ್ರ ಇಟಗಿಯಲ್ಲಿ ನಡೆಯುತ್ತಿರುವ ದಿವ್ಯಾಷ್ಟಬಂಧ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ರಾಮೇಶ್ವರ ಮತ್ತು ಅಮ್ಮನವರ ದರ್ಶನ ಮಾಡಿಕೊಂಡು,ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರೀ ದೇವಸ್ಥಾನದ ಪಾತ್ರ ಎನ್ನುವ ಶಿಲಾಫಲಕದ ಅನಾವರಣ ಮಾಡಿದರು. ಭಾರತದ […]

ಇಟಗಿ ಕ್ಷೇತ್ರ ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರ : ಕಾಗೇರಿ Read More »

ಇಟಗಿ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಸಂಪನ್ನ

ಸಿದ್ದಾಪುರ: ಪುರಾಣ ಪ್ರಸಿದ್ದ ಇಟಗಿ ಶ್ರೀ ಮಹತೋಬಾರ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯ ಭಕ್ತಿ ಭಾವದಿಂದ ಸಂಪನ್ನ ಗೊಂಡಿದೆ‌.ಅಷ್ಟಬಂಧದ ಸಾನಿಧ್ಯ ವಹಿಸಿದ್ದ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನುಗ್ರಹ ಸಂದೇಶ ನೀಡಿ, ದೇವಸ್ಥಾನಗಳು ಸಾಕಷ್ಟಿವೆ.ಆದರೆ ಶಾಸ್ತ್ರೀಯವಾದ ದೇವಾಲಯಗಳು ವಿರಳ. ಇಟಗಿಯ ಶ್ರೀ ರಾಮೇಶ್ವರ ದೇವಾಲಯ ವಾಸ್ತುಶಾಸ್ತ್ರ, ಆಗಮೋಕ್ತವಾದ ಎಲ್ಲಾ ವ್ಯವಸ್ಥೆಗಳನ್ನು ಇಟ್ಟುಕೊಂಡ ಒಂದು ದೇವತಾ ಸನ್ನಿಧಿ. ಬಿಳಗಿ ಸೀಮೆಯ ದೇವಾಲಯ ಇದು. ಚೈತನ್ಯದ ಕಳೆ ತುಂಬಿರುವ ಪವಿತ್ರ ತಾಣ ಎಂದರು.ಅದ್ಯಾವದೋ ಕಾರಣಕ್ಕೆ ಕಳೆದ ಸುಮಾರು

ಇಟಗಿ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಸಂಪನ್ನ Read More »

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು

ಶ್ರೀಕ್ಷೇತ್ರ ಇಟಗಿಯ ಅಷ್ಟಬಂಧೋತ್ಸವದ ಪ್ರಯುಕ್ತ ಪ್ರತಿ ನಿತ್ಯವೂ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ,ಅಷ್ಟಬಂಧ ಕಮೀಟಿಯ ಸದಸ್ಯರು ಮತ್ತು ಅತಿಥಿಗಳು ದೀಪ ಬೆಳಗಿಸುವ ಮೂಲಕ ನಡೆಸಿಕೊಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು Read More »

ಶ್ರೀ ಕ್ಷೇತ್ರದಲ್ಲಿ ಶಿವ ಪಂಚಾಕ್ಷರಿ ಜಪಹೋಮ ಸಂಪನ್ನ.

ಶ್ರೀ ಕ್ಷೇತ್ರ ಇಟಗಿಯಲ್ಲಿ ಜರುಗಲಿರುವ ದಿವ್ಯಾಷ್ಟಬಂಧ ಮಹೋತ್ಸವದ ಪೂರ್ವದಲ್ಲಿ ಶ್ರೀ ದೇವಸ್ಥಾನದ ಅರ್ಚಕರು ಮತ್ತು ಭಕ್ತರೆಲ್ಲರೂ ಸೇರಿ ಮಾಡಿದ್ದ ಶಿವ ಪಂಚಾಕ್ಷರಿ ಜಪವು ಹೋಮದೊಂದಿಗೆ ಸಂಪನ್ನಗೊಂಡಿತು.ದಿನಾಂಕ:28/03/2025 ಶನಿವಾರ ಬೆಳಿಗ್ಗೆ 11 ಗಂಟೆಗೆ ,ಜಪದಲ್ಲಿ ಪಾಲ್ಗೊಂಡ ಎಲ್ಲ ಭಕ್ತರ ಸಮ್ಮುಖದಲ್ಲಿ ಶಿವಪಂಚಾಕ್ಷರಿ ಜಪಹೋಮವು ರಾಮೇಶ್ವರನ ಪದತಲಗಳಿಗೆ ಅರ್ಪಣೆ ಆಯಿತು.

ಶ್ರೀ ಕ್ಷೇತ್ರದಲ್ಲಿ ಶಿವ ಪಂಚಾಕ್ಷರಿ ಜಪಹೋಮ ಸಂಪನ್ನ. Read More »

ಶ್ರೀ ದೇವಸ್ಥಾನದದಲ್ಲಿ ಅಮವಾಸ್ಯೇ ಶತರುದ್ರ ಪಾರಾಯಣ

ದಿನಾಂಕ:29/03/2025 ಶನಿವಾರದಂದು ಶ್ರೀ ಕ್ಷೇತ್ರ ಇಟಗಿಯಲ್ಲಿ ತ್ರಿದೇವತಾ ಪೂಜೆಯಲ್ಲಿ ಒಂದಾದ ಅಮವಾಸ್ಯೆಯ ಶತರುದ್ರ ಪಾರಾಯಣ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಸಂಪನ್ನಗೊಂಡಿತು.

ಶ್ರೀ ದೇವಸ್ಥಾನದದಲ್ಲಿ ಅಮವಾಸ್ಯೇ ಶತರುದ್ರ ಪಾರಾಯಣ Read More »

ಇಟಗಿಯ ಅಷ್ಟಬಂಧವನ್ನು ಅಭೂತಪೂರ್ವವಾಗಿ ನಡೆಸಲು ಬಿಳಗಿ ಸೀಮೆ ಸಜ್ಜಾಗಬೇಕು:ಡಾ||ಶಶಿಭೂಷಣ್ ಹೆಗಡೆ

ದಿನಾಂಕ:15/03/2025 ಶನಿವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಶ್ರೀ ರಾಮೇಶ್ವರ ದೇವರ ಅಷ್ಟಬಂಧ ಮಹೋತ್ಸವದ ಪೂರ್ವಭಾವಿ ಸಭೆಯನ್ನು ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ|ಶಶಿಭೂಷಣ ಹೆಗಡೆ ಅವರು,’ ದಿವ್ಯ ಅಷ್ಟಬಂಧ ಮಹೋತ್ಸವ ಸಮೀಪಿಸುತ್ತಿದೆ.ಅದಕ್ಕೆ ಅವಶ್ಯವಾದ ಆರ್ಥಿಕ ಕ್ರೋಢಿಕರಣಕ್ಕೆ ಕೆಲವೇ ದಿನಗಳು ಮಾತ್ರ ನಮಗೆ ಅವಕಾಶವಿದೆ ಹಾಗಾಗಿ ಈ ವಿಷಯಕ್ಕೆ ಹೆಚ್ವಿನ ಮಹತ್ವ ನೀಡಬೇಕು.ಅಷ್ಟಬಂಧ ಮಹೋತ್ಸವದಲ್ಲಿ ನಮ್ಮ ಕುಲಗುರುಗಳು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಭಾಗಿಯಾಗುವುದು ನಮ್ಮ ಪುಣ್ಯ. ಇಂತಹ

ಇಟಗಿಯ ಅಷ್ಟಬಂಧವನ್ನು ಅಭೂತಪೂರ್ವವಾಗಿ ನಡೆಸಲು ಬಿಳಗಿ ಸೀಮೆ ಸಜ್ಜಾಗಬೇಕು:ಡಾ||ಶಶಿಭೂಷಣ್ ಹೆಗಡೆ Read More »

ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆದ ವಾರ್ಷಿಕ ಮಹಾರಥೋತ್ಸವ

ಸಿದ್ದಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಇಟಗಿಯಲ್ಲಿವಾರ್ಷಿಕ ಮಹಾರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.ಬೆಳಿಗ್ಗೆ ಮಹಾಬಲಿ, ರಥಾರೋಹಣ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.4000 ಕ್ಕೂ ಅಧಿಕ ಜನರು ಮಹಾ ಅನ್ನಸಂತರ್ಪಣೆಯ ಪ್ರಸಾದ ಭೋಜನ ಸ್ವೀಕರಿಸದರು.ವಿಶೇಷವಾಗಿ ಈ ವರ್ಷ ಮಾಡಿದ ಏಣಿಯ ವ್ಯವಸ್ಥೆಯಿಂದ,ಆಗಮಿಸಿದ ಎಲ್ಲ ಭಕ್ತರೂ ರಥದ ಮೇಲೆ ಕುಳಿತ ಶ್ರೀ ರಾಮೇಶ್ವರನ ದರ್ಶನ ಮಾಡಿಕೊಂಡು ಪ್ರಸಾದ ಸ್ವೀಕರಿಸಿದರು. ರಥೋತ್ಸವದ ಫೋಟೊಗಳನ್ನು ಗೂಗಲ್‌ ಡ್ರೈವ್‌ ನಲ್ಲಿ ನೋಡಬಹುದು.->

ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆದ ವಾರ್ಷಿಕ ಮಹಾರಥೋತ್ಸವ Read More »

ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆದ ಮಹಾಶಿವರಾತ್ರಿ ಉತ್ಸವ

ಬಿಳಗಿ ಸೀಮಾಧ್ಯಕ್ಷನಾಗಿರುವ ಶ್ರೀ ರಾಮೇಶ್ವರನ ಪುಣ್ಯ ಕ್ಷೇತ್ರವಾದ ಇಟಗಿಯಲ್ಲಿ ಮಹಾಶಿವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗಿನಿಂದಲೇ, ಶೃದ್ಧಾ ಭಕ್ತಿ ಪೂರ್ವಕ ಪೂಜಾ ವಿನಿಯೋಗಗಳು ಜರುಗಿದವು. ಸಾಮೂಹಿಕ ಶತರುದ್ರ ಪಾರಾಯಣ,ಪಂಚಾಮೃತ ಅಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ,ತಿಲಾರ್ಚನೆ ಮಹಾ ಅಭಿಷೇಕ, ಮಹಾಮಂಗಳಾರತಿ,ಸಂಜೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು.,, ಎಲ್ಲ ಭಕ್ತರೂ,,ಮಹಾಶಿವರಾತ್ರಿಯ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,ಸೇವಾ ಭಾಜನರಾಗಿ,ಶ್ರೀ ರಾಮೇಶ್ವರನ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆದ ಮಹಾಶಿವರಾತ್ರಿ ಉತ್ಸವ Read More »

ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿದ ಶ್ರೀ ರಾಮಾವದೂತರು

ಹಾಸನದ ಶ್ರೀ ಶ್ರೀ ರಾಮಾವದೂತರು ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ಅನುಗ್ರಹಿಸಿದರು. ಇಟಗಿಯ ಭಕ್ತರು ಶ್ರೀಗಳಿಗೆ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ನೇರವೇರಿಸಿದರು.ನಂತರದಲ್ಲಿ ಆಶೀರ್ವಚನ ನೀಡಿದ ಶ್ರೀಗಳವರು ʼಪ್ರಸಿದ್ಧ ಇಟಗಿ ಕ್ಷೇತ್ರದ ವಾಸ್ತು ಶಿಲ್ಪ ವಿನ್ಯಾಸವನ್ನು ಹೊಗಳಿದರು.ರಾಮೇಶ್ವರನಿಗೆ ಭಕ್ತಿಯಿಂದ ಮಾಡುವ ಎಲ್ಲಾ ಕೆಲಸಕ್ಕೂ ಖಂಡಿತ ಫಲ ಇದ್ದೇ ಇದೆ.ಎಲ್ಲವನ್ನೂ ಕೂಡಲೇ ಅಪೇಕ್ಷಿಸದೇ ಸೇವೆ ಮಾಡುತ್ತಾ ಕಾದರೇ ಖಂಡಿತ ಅವನ ಅನುಗ್ರಹ ಆಗೇ ಆಗುತ್ತದೆʼ ಎಂದರು.ಅವದೂತರ ದರ್ಶನಕ್ಕೆ ಕ್ಷೇತ್ರದ ಭಜಕರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪ್ರಸಾದ ಭೋಜನ

ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿದ ಶ್ರೀ ರಾಮಾವದೂತರು Read More »

ಇತಗಿಯಲ್ಲಿ ಮಹಾಶಿವರಾತ್ರಿ ಉತ್ಸವ

ಶ್ರೀ ರಾಮೇಶ್ವರ ದೇವರ ಪ್ರೀಯ ಭಕ್ತರೇ,ದಿನಾಂಕ:26-2-2025 ಬುಧವಾರ ” “ಮಹಾಶಿವರಾತ್ರಿ”.ಪುರಾಣ ಪ್ರಸಿದ್ಧಿಯ ಆಗಮೋಕ್ತ ಪುಣ್ಯತಮ ಶ್ರೀ ಕ್ಷೇತ್ರ ಇಟಗಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದಿನಾಂಕ 26/02/2025 ಬುದಹವಾರ ಬೆಳಿಗ್ಗಿನಿಂದಲೇ, ಶೃದ್ಧಾ ಭಕ್ತಿ ಪೂರ್ವಕ ಪೂಜಾ ವಿನಿಯೋಗಗಳು ಜರುಗಲಿವೆ. ಸಾಮೂಹಿಕ ಶತರುದ್ರ ಪಾರಾಯಣ,ಪಂಚಾಮೃತ ಅಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ,ತಿಲಾರ್ಚನೆ ಮಹಾ ಅಭಿಷೇಕ, ಮಹಾಮಂಗಳಾರತಿ,ಸಂಜೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಏರ್ಪಾಡಾಗಿದೆ,, ನಾವೆಲ್ಲಾ ಭಕ್ತರೂ,,ಮಹಾಶಿವರಾತ್ರಿಯ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,ಸೇವಾ ಭಾಜನರಾಗಿ,ಶ್ರೀ ರಾಮೇಶ್ವರನ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗೋಣ.🔱🚩ಹರ ಹರ ಮಹಾದೇವ🚩🔱 ಸೂಚನೆ:

ಇತಗಿಯಲ್ಲಿ ಮಹಾಶಿವರಾತ್ರಿ ಉತ್ಸವ Read More »

Scroll to Top