ಇಟಗಿಯ ಅಷ್ಟಬಂಧವನ್ನು ಅಭೂತಪೂರ್ವವಾಗಿ ನಡೆಸಲು ಬಿಳಗಿ ಸೀಮೆ ಸಜ್ಜಾಗಬೇಕು:ಡಾ||ಶಶಿಭೂಷಣ್ ಹೆಗಡೆ

ದಿನಾಂಕ:15/03/2025 ಶನಿವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಶ್ರೀ ರಾಮೇಶ್ವರ ದೇವರ ಅಷ್ಟಬಂಧ ಮಹೋತ್ಸವದ ಪೂರ್ವಭಾವಿ ಸಭೆಯನ್ನು ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ|ಶಶಿಭೂಷಣ ಹೆಗಡೆ ಅವರು,’ ದಿವ್ಯ ಅಷ್ಟಬಂಧ ಮಹೋತ್ಸವ ಸಮೀಪಿಸುತ್ತಿದೆ.ಅದಕ್ಕೆ ಅವಶ್ಯವಾದ ಆರ್ಥಿಕ ಕ್ರೋಢಿಕರಣಕ್ಕೆ ಕೆಲವೇ ದಿನಗಳು ಮಾತ್ರ ನಮಗೆ ಅವಕಾಶವಿದೆ ಹಾಗಾಗಿ ಈ ವಿಷಯಕ್ಕೆ ಹೆಚ್ವಿನ ಮಹತ್ವ ನೀಡಬೇಕು.ಅಷ್ಟಬಂಧ ಮಹೋತ್ಸವದಲ್ಲಿ ನಮ್ಮ ಕುಲಗುರುಗಳು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಭಾಗಿಯಾಗುವುದು ನಮ್ಮ ಪುಣ್ಯ. ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಯಾರಾದರೂ ಆರ್ಥಿಕ ಸಹಾಯ ನೀಡುವವರಿದ್ದರೆ ಅಂತವರನ್ನು ಪ್ರೇರೇಪಿಸಿ ಅವರಿಂದ ಸಹಾಯನ್ನು ಪಡೆಯುವುದು ನಮ್ಮ ಕರ್ತವ್ಯ’ ಎಂದರು.
ಈ ಕಾರ್ಯಕ್ಕೆ ಸರ್ವ ಭಕ್ತರೂ ಕಾರ್ಯಕ್ರಮಕ್ಕೆ ಬೇಕಾಗುವ ಸುವಸ್ತುಗಳನ್ನು ಸೇವಾರೂಪದಲ್ಲಿ ನೀಡಿ ಸಹಕರಿಸಬೇಕು ಮತ್ತು ಎಲ್ಲಾ ಕಾರ್ಯಕರ್ತರೂ ಸಕ್ರೀಯವಾಗಿ ಪಾಲ್ಗೊಂಡು ಯಾವುದೇ ಕುಂದು ಕೊರತೆ ಬಾರದಂತೆ ಕಾರ್ಯನಿರ್ವಹಿಸಬೇಕು.ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಾಣಲು ತಾವೆಲ್ಲರೂ ಪೂರ್ಣಪ್ರಮಾಣದ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.’

ಶಂಖನಾದದೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ನಾರಾಯಣಮೂರ್ತಿ ಹೆಗಡೆ ಎಲ್ಲರಿಗೂ ಸ್ವಾಗತ ಕೋರಿದರು.ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಹೆಗಡೆ ಪ್ರಾಸ್ತಾವಿಕ ನುಡಿಯನ್ನಾಡಿದರು.
ದೇವಸ್ಥಾನದ ಅರ್ಚಕರಾದ ಅನಂತ ಭಟ್ಟರವರು ಅಷ್ಟಬಂಧ ಮಹೋತ್ಸವದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ರೂಪುರೇಷೆಗಳನ್ನು ಪ್ರಸ್ತುತ ಪಡಿಸಿದರು.
ಗಜಾನನ ಹೆಗಡೆ ಕೊಡ್ತಗಣಿ ಕಾರ್ಯಕ್ರಮ‌ ನಿರೂಪಿಸಿದರು.
ಭಾಗವಹಿಸಿದ ಉಪ ಸಮೀತಿಗಳ ಕಾರ್ಯಕರ್ತರು ಸಮಗ್ರವಾಗಿ ಚರ್ಚೆಯನ್ನು ನಡೆಸಿ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ,ಕೋಶಾಧ್ಯಕ್ಷರಾದ ಜಿ.ಎಸ್.ಹೆಗಡೆ ಬೆಳ್ಳೆಮಡಿಕೆ
ಎನ್.ವಿ.ಹೆಗಡೆ ಮುತ್ತಿಗೆ,ಇಟಗಿ ಪಂಚಾಯತ ಉಪಾಧ್ಯಕ್ಷರಾದ ರಾಮಚಂದ್ರ ನಾಯ್ಕ,ಬಿಳಗಿ ಸೀಮೆಯ ಎಲ್ಲ ಮಾಗಣೆ ಪ್ರಮುಖರು,ಉಪಸಮೀತಿಯ ಮುಖ್ಯಸ್ಥರು ಮತ್ತು ಅನೇಕ ಸದಸ್ಯರು ಭಾಗವಹಿಸಿದ್ದರು.

ಇಟಗಿಯಲ್ಲಿ ರಥೋತ್ಸವ ಪ್ರಾರಂಭ

ವಿಶ್ವಾವಸು ಸಂವತ್ಸರದ ವಾರ್ಷಿಕ ಮಹಾರಥೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ದಿನ ಫೆಬ್ರವರಿ 20 ಶುಕ್ರವಾರ, ಪ್ರಾರ್ಥನೆ, ಗಣಪತಿ ಪೂಜೆ,…

Read More

ಶ್ರೀದೇವಸ್ಥಾನಕ್ಕೆ ನೂತನ ಪುಷ್ಪರಥ

ಶ್ರೀಕ್ಷೇತ್ರ ಇಟಗಿಗೆ ನೂತನವಾಗಿ ನಿರ್ಮಿತ ಗಜವಾಹನ ಪುಷ್ಪರಥೋತ್ಸವವು ದಿನಾಂಕ 08-02-2026 ರವಿವಾರ ತಡರಾತ್ರಿ ಬಂದಿರುತ್ತದೆ. ಶ್ರೀದೇವಸ್ಥಾನದ ಪುಷ್ಪರಥ(ಸಣ್ಣ ರಥ) ವು…

Read More

ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ತೇರಿನ ಆಮಂತ್ರಣ

ಬಿಳಗಿನ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಮಹಾರಥೋತ್ಸವವು ಇದೇ ಬರುವ…

Read More

ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪ್ರಯುಕ್ತ ಆದಿವಾಸ ಹೋಮ, ಶತರುದ್ರ ಹವನ,ಕಲಶಾಭಿಷೇಕ,ಮಹಾಬಲಿ ಹಾಗೂ ಸಂಕಲ್ಪ ಸಿದ್ಧಿ ರಥೋತ್ಸವ

ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಮಾರ್ಗಶಿರ ಅಮವಾಸ್ಯೆ…

Read More

Leave a Comment

Your email address will not be published. Required fields are marked *

Scroll to Top