ದಿನಾಂಕ:15/03/2025 ಶನಿವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಶ್ರೀ ರಾಮೇಶ್ವರ ದೇವರ ಅಷ್ಟಬಂಧ ಮಹೋತ್ಸವದ ಪೂರ್ವಭಾವಿ ಸಭೆಯನ್ನು ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ|ಶಶಿಭೂಷಣ ಹೆಗಡೆ ಅವರು,’ ದಿವ್ಯ ಅಷ್ಟಬಂಧ ಮಹೋತ್ಸವ ಸಮೀಪಿಸುತ್ತಿದೆ.ಅದಕ್ಕೆ ಅವಶ್ಯವಾದ ಆರ್ಥಿಕ ಕ್ರೋಢಿಕರಣಕ್ಕೆ ಕೆಲವೇ ದಿನಗಳು ಮಾತ್ರ ನಮಗೆ ಅವಕಾಶವಿದೆ ಹಾಗಾಗಿ ಈ ವಿಷಯಕ್ಕೆ ಹೆಚ್ವಿನ ಮಹತ್ವ ನೀಡಬೇಕು.ಅಷ್ಟಬಂಧ ಮಹೋತ್ಸವದಲ್ಲಿ ನಮ್ಮ ಕುಲಗುರುಗಳು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಭಾಗಿಯಾಗುವುದು ನಮ್ಮ ಪುಣ್ಯ. ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಯಾರಾದರೂ ಆರ್ಥಿಕ ಸಹಾಯ ನೀಡುವವರಿದ್ದರೆ ಅಂತವರನ್ನು ಪ್ರೇರೇಪಿಸಿ ಅವರಿಂದ ಸಹಾಯನ್ನು ಪಡೆಯುವುದು ನಮ್ಮ ಕರ್ತವ್ಯ’ ಎಂದರು.
ಈ ಕಾರ್ಯಕ್ಕೆ ಸರ್ವ ಭಕ್ತರೂ ಕಾರ್ಯಕ್ರಮಕ್ಕೆ ಬೇಕಾಗುವ ಸುವಸ್ತುಗಳನ್ನು ಸೇವಾರೂಪದಲ್ಲಿ ನೀಡಿ ಸಹಕರಿಸಬೇಕು ಮತ್ತು ಎಲ್ಲಾ ಕಾರ್ಯಕರ್ತರೂ ಸಕ್ರೀಯವಾಗಿ ಪಾಲ್ಗೊಂಡು ಯಾವುದೇ ಕುಂದು ಕೊರತೆ ಬಾರದಂತೆ ಕಾರ್ಯನಿರ್ವಹಿಸಬೇಕು.ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಾಣಲು ತಾವೆಲ್ಲರೂ ಪೂರ್ಣಪ್ರಮಾಣದ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.’
ಶಂಖನಾದದೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ನಾರಾಯಣಮೂರ್ತಿ ಹೆಗಡೆ ಎಲ್ಲರಿಗೂ ಸ್ವಾಗತ ಕೋರಿದರು.ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಹೆಗಡೆ ಪ್ರಾಸ್ತಾವಿಕ ನುಡಿಯನ್ನಾಡಿದರು.
ದೇವಸ್ಥಾನದ ಅರ್ಚಕರಾದ ಅನಂತ ಭಟ್ಟರವರು ಅಷ್ಟಬಂಧ ಮಹೋತ್ಸವದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ರೂಪುರೇಷೆಗಳನ್ನು ಪ್ರಸ್ತುತ ಪಡಿಸಿದರು.
ಗಜಾನನ ಹೆಗಡೆ ಕೊಡ್ತಗಣಿ ಕಾರ್ಯಕ್ರಮ ನಿರೂಪಿಸಿದರು.
ಭಾಗವಹಿಸಿದ ಉಪ ಸಮೀತಿಗಳ ಕಾರ್ಯಕರ್ತರು ಸಮಗ್ರವಾಗಿ ಚರ್ಚೆಯನ್ನು ನಡೆಸಿ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ,ಕೋಶಾಧ್ಯಕ್ಷರಾದ ಜಿ.ಎಸ್.ಹೆಗಡೆ ಬೆಳ್ಳೆಮಡಿಕೆ
ಎನ್.ವಿ.ಹೆಗಡೆ ಮುತ್ತಿಗೆ,ಇಟಗಿ ಪಂಚಾಯತ ಉಪಾಧ್ಯಕ್ಷರಾದ ರಾಮಚಂದ್ರ ನಾಯ್ಕ,ಬಿಳಗಿ ಸೀಮೆಯ ಎಲ್ಲ ಮಾಗಣೆ ಪ್ರಮುಖರು,ಉಪಸಮೀತಿಯ ಮುಖ್ಯಸ್ಥರು ಮತ್ತು ಅನೇಕ ಸದಸ್ಯರು ಭಾಗವಹಿಸಿದ್ದರು.








ಐ.ಏ.ಎಸ್ ಪದವಿಧರರಿಗೆ ಸನ್ಮಾನ
ಶ್ರೀ ಕ್ಷೇತ್ರ ಇಟಗಿಯಲ್ಲಿ,IAS ಪರೀಕ್ಷೆಯಲ್ಲಿ ದೇಶದಲ್ಲೇ 288ನೇ ರಾಂಕ್ ಪಡೆದು ತೇರ್ಗಡೆ ಹೊಂದಿದ ವಿಕಾಸ್ ಅವರಿಗೆ ಮೊಕ್ತೇಸರ ಮಂಡಳಿಯವರಿಂದ ಗೌರವ…
ಸೀಮೆಯ ಜನರು ಬೆವರು ಕೇಳಿದರೆ ರಕ್ತ ನೀಡಿದ್ದಾರೆ- ಡಾ.ಶಶಿಭೂಷಣ್ ಹೆಗಡೆ
ದಿನಾಂಕ:27/04/2025 ಭಾನುವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ದಿವ್ಯಾಷ್ಟಬಂಧ ಮಹೋತ್ಸವದ ಅಭಿವಂದನಾ ಸಭೆಯನ್ನು ಏರ್ಪಡಿಸಲಾಗಿತ್ತು. ಶಂಖನಾದದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ನಾರಾಯಣಮೂರ್ತಿ ಹೆಗಡೆ ಹರಗಿ…
ಶ್ರೀ ಕ್ಷೇತ್ರ ಇಟಗಿಯಲ್ಲಿ ದಿವ್ಯಾಷ್ಟಬಂಧ ಮಹಾಸ್ಯಂದನೋತ್ಸವ
ಇಟಗಿ : ಶ್ರೀ ಕ್ಷೇತ್ರ ಇಟಗಿಯ ದಿವ್ಯಾಷ್ಟಬಂಧ, ಬ್ರಹ್ಮಕಲಶಭಾಗವಾಗಿ ಶುಕ್ರವಾರ ಮಹಾಸ್ಯಂದನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.ಶ್ರೀಸಂಸ್ಥಾನ-ಗೋಕರ್ಣ, ಶ್ರೀರಾಮಚಂದ್ರಾಪುರಮಠ…
ಶ್ರೀ ಕ್ಷೇತ್ರ ಇಟಗಿಯಲ್ಲಿ ನಿತ್ಯ ಪ್ರಸಾದ ಭೋಜನ,”ಪರ್ಯಾಪ್ತಿ”
ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ನಿತ್ಯ ಪ್ರಸಾದ ಭೋಜನವನ್ನು ಉಣಬಡಿಸುವ ಸದುದ್ಧೇಶದಿಂದಖಾಯಂ ಪ್ರಸಾದ ಭೋಜನ ವ್ಯವಸ್ಥೆಯನ್ನು ಇಂದಿನಿಂದ ಶ್ರೀರಾಮೇಶ್ವರ ದೇವಸ್ಥಾನ ಇಟಗಿಯಲ್ಲಿ…
ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರೀನಿವಾಸ ಹೆಬ್ಬಾರ್
ಶಿರಸಿಯ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾರ್ ಅವರು ಶ್ರೀಕ್ಷೇತ್ರ ಇಟಗಿಯ ಅಷ್ಟಬಂಧ ಮಹೋತ್ಸವಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ…
ಇಟಗಿ ಕ್ಷೇತ್ರ ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರ : ಕಾಗೇರಿ
ತ್ರಿಕಾಲ ಬಲಿ ಉತ್ಸವ ನಡೆಯುವ ಶ್ರೀ ಕ್ಷೇತ್ರ ಇಟಗಿಯು ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರವಾಗಿದೆ. ಇಲ್ಲಿನ ಇತಿಹಾಸ ಮತ್ತು ಧಾರ್ಮಿಕ…