ಬಿಳಗಿ ಸೀಮಾ ಒಡೆಯ ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಚಂಡಿಕಾ ಹೋಮ ನೆರವೇರಿತು
ಸೇವಾಕರ್ತರು ಶ್ರೀಯುತ ಸೋಮೇಶ ಭಟ್ ಹಾವಿನಬೀಳು.
ಬಿಳಗಿ ಸೀಮಾ ಒಡೆಯ ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಚಂಡಿಕಾ ಹೋಮ ನೆರವೇರಿತು Read More »
ಸಿದ್ದಾಪುರ; ತಾಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ನಡೆದ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಬಿಡುಗಡೆಯ ಸಮಾರಂಭದ ಸಂದರ್ಭದಲ್ಲಿ ಖ್ಯಾತ ಅರ್ಥಧಾರಿಗಳ ಕೂಡುವಿಕೆಯಲ್ಲಿ ಶನಿವಾರ ನಡೆದ “ರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಲೆ ತುಂಬಿದ ಸಭಾಂಗಣದಲ್ಲಿಯ ಪ್ರೇಕ್ಷಕರನ್ನು ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ರಾಮನಾಗಿ ಖ್ಯಾತ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಶ್ರೀ ರಾಮಚಂದ್ರನ ಮೇರು ವ್ಯಕ್ತಿತ್ವದ ಚಿತ್ರಣವನ್ನು ತಮ್ಮ ಅರ್ಥಗಾರಿಕೆಯಲ್ಲಿ ಸ್ಪಷ್ಟಪಡಿಸಿದರು. ಪ್ರೊ.ಪವನ ಕಿರಣಕೆರೆ ಲಕ್ಷö್ಮಣನಾಗಿ ಸಹೋದರ ಬಾಂಧವ್ಯವನ್ನು ವಿಷದಪಡಿಸಿದರು. ಕಾಲಪುರುಷನಾಗಿ ಪವನ ಕಿರಣಕೆರೆ ರಾಮನ ಅಂತ್ಯದ
ಇಟಗಿಯಲ್ಲಿ ಅರ್ಥಪೂರ್ಣವಾಗಿ ನಡೆದ “ರಾಮನಿರ್ಯಾಣ” ತಾಳಮದ್ದಲೆ. Read More »
ರಾಮೇಶ್ವರ ಸ್ಮರಣ ಸಂಚಿಕೆಯನ್ನು ವಾಸುದೇವ ರಂಗಾ ಭಟ್ಟ ಅನಾವರಣ ಮಾಡಿದರು.ಸಿದ್ದಾಪುರ; ನಾವು ಆರಾಧಿಸಿಕೊಂಡು ಬರುತ್ತಿರುವ ದೇವರ ಅಷ್ಟಬಂಧದAತಹ ಕಾರ್ಯಕ್ರಮಗಳಿಂದ ಭಕ್ತರಲ್ಲಿಯ ಶ್ರದ್ಧಾ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ದೇವರಿಗೆ ನಿಗದಿತ ಅವಧಿಯಲ್ಲಿ ಅಷ್ಟಬಂಧವನ್ನು ನೆರವೇರಿಸುವುದು ನಮ್ಮ ಆಚರಣೆ-ಸಂಪ್ರದಾಯ ಎಂದು ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಮಧೂರು ಹೇಳಿದ್ದಾರೆ. ಅವರು ತಾಲೂಕಿನ ಬಿಳಗಿ ಸೀಮೆಯ ಇಟಗಿ ಶ್ರೀಕ್ಷೇತ್ರದ “ಅಷ್ಟಬಂಧ ಮಹೋತ್ಸವ-೨೦೨೫”ರ ಸ್ಮರಣ ಸಂಚಿಕೆ “ರಾಮೇಶ್ವರ” ವನ್ನು ಶನಿವಾರ ಅನಾವರಣ ಮಾಡಿ ಮಾತನಾಡುತ್ತಿದ್ದರು. ಶ್ರೀರಾಮ ಹಾಗೂ ಈಶ್ವರ
ಇಟಗಿ ಶ್ರೀಕ್ಷೇತ್ರ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಅನಾವರಣ. Read More »
ಬಿಳಗಿ ಸೀಮಾ ಒಡೆಯ ಶ್ರೀರಾಮೇಶ್ವರನ ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮವನ್ನು ದಿನಾಂಕ 23-08-2025 ಶನಿವಾರ ಸಮಯ ಮಧ್ಯಾಹ್ನ 2 ಘಂಟೆಗೆ ಹಮ್ಮಿಕ್ಕೊಂಡಿದ್ದು, ಸರ್ವರಿಗೂ ಸ್ವಾಗತ ಕೋರುವವರು ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ಮತ್ತು ಮೊಕ್ತೇಸರ ಮಂಡಳಿ ಶ್ರಿಕ್ಷೇತ್ರ ಇಟಗಿ.
ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮ. Read More »
|| ಪ್ರಸೀದತು ಶ್ರೀ ರಾಮೇಶ್ವರಃ||ಶ್ರಾವಣ ಅಮವಾಸ್ಯೆ ಹಾಗೂ ಸಂಕಲ್ಪ ಸಿದ್ದಿ ರಥೋತ್ಸವದ ಪ್ರಯುಕ್ತ ಶ್ರೀ ರಾಮೇಶ್ವರ ಗೆಳೆಯರ ಬಳಗದ ಸಂಯೋಜನೆಯಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದ ಕೂಡುವಿಕೆಯಲ್ಲಿ “ಯಕ್ಷಗಾನ ತಾಳಮದ್ದಳೆ”̤“ಶ್ರೀ ರಾಮ ನಿರ್ಯಾಣ” ಎಂಬ ಪೌರಾಣಿಕ ಕಥಾನಕವನ್ನು ಆಡಿತೋರಿಸಲಿದ್ದಾರೆದಿನಾಂಕ 23-08-2025ರ ಮದ್ಯಾಹ್ನ 3 ರಿಂದ ರಾತ್ರಿ 8 ಗಂಟೆಯ ವರೆಗೆಸ್ಥಳ : ಶ್ರೀ ರಾಮೇಶ್ವರ ದೇವಸ್ಥಾನ ಇಟಗಿರಂಗದಲ್ಲಿ ರಂಜಿಸಲಿರುವ ಹೆಮ್ಮೆಯ ಕಲಾವಿದರುಹಿಮ್ಮೇಳ :ಭಾಗವತರು : ಪ್ರಸನ್ನ ಭಟ್ ( ಬಾಳ್ಳಲ್)ಮದ್ದಳೆ : ರಾಘವೇಂದ್ರ ಹೆಗಡೆ (ಯಲ್ಲಾಪುರ)ಚಂಡೆ
ಶ್ರೀಕ್ಷೇತ್ರ ಇಟಗಿಯಲ್ಲಿಈ ವರ್ಷದ ಶ್ರಾವಣಮಾಸದ ಕೊನೆಯ ಸೋಮವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರಸಾದ ಭೋಜನವು ಅತ್ಯಂತ ಯಶಸ್ವಿಯಾಗಿ ನಡೆಯಿತು. ದಿನಾಂಕ: 18/08/2025 ಸೋಮವಾರದಂದು,ಶತರುದ್ರ ಪಾರಾಯಣ ಮತ್ತು ಹವನವು ದೇವಸ್ಥಾನದ ಅರ್ಚಕರು ಮತ್ತು ವೈದಿಕರ ಸಹಯೋಗದಲ್ಲಿ ನೆರವೇರಿತು.ಹಲವಾರು ಭಕ್ತರು ದೇವರ ದರ್ಶನ ಮಾಡಿ ತಮ್ಮ ವಯಕ್ತಿಕ ಸೇವೆಗಳನ್ನು ಮಾಡಿಸಿ ಪ್ರಸಾದ ಭೋಜನ ಸ್ವೀಕರಿಸಿ ಕೃತಾರ್ಥರಾದರು.ಈ ಸಂದರ್ಭದಲ್ಲಿ 800ಕ್ಕೂ ಅಧಿಕ ಭಕ್ತರು ‘ಪರ್ಯಾಪ್ತಿ’ ಪ್ರಸಾದ ಭೋಜನ ಸ್ವೀಕರಿಸಿದರು. ಶ್ರಾವಣ ಕೊನೆಯ ಸೋಮವಾರದ ಪ್ರಸಾದ ಭೋಜನದ ಸೇವಾಕರ್ತರು:
ಇಟಗಿಯಲ್ಲಿ ಶ್ರಾವಣ ಕೊನೆಯ ಸೋಮವಾರ ಆಚರಣೆ Read More »
ಶ್ರಾವಣ ಮಾಸದ ಶುಭ ಕಾಲದಲ್ಲಿ ಜಗದೀಶ್ವರನ ಸೇವೆಯನ್ನು ಮಾಡಿದರೆ ಫಲ ಪ್ರಾಪ್ತಿಯಗುವುದೆಂಬ ಆಶಯದಿಂದ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಶ್ರಾವಣ ಸೋಮವಾರದಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಿದ್ದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀರಾಮೇಶ್ವರ ದೇವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ನಾಲ್ಕು ಸೋಮವಾರಗಳಂದು ಮತ್ತು ಅಮಾವಾಸ್ಯೆಯಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,ಮೊದಲ ಸೋಮವಾರ ಜುಲೈ 28 ರಂದು ಶತರುದ್ರ ಪಾರಾಯಣ, ರುದ್ರ ಹೋಮ, ರುದ್ರಾಭಿಷೇಕ, ಮತ್ತು ಮಹಾಪೂಜೆ ನೆರವೇರಿತು. ಸೀಮೆಯ ಹಲವಾರು ಭಕ್ತರು ಈ ದಿನ ಪಾಲ್ಗೊಂಡು ಸೇವೆಯನ್ನು
ಶ್ರೀಕ್ಷೇತ್ರ ಇಟಗಿಯಲ್ಲಿ ‘ಶ್ರಾವಣ ಸಂಭ್ರಮ Read More »
ಸಿದ್ದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಆಚರಣೆಯನ್ನು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಈಶ್ವರನಿಗೆ ಶ್ರೇಷ್ಠವಾದ ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ, ಜಪ, ವೃತಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದೇ ರೀತಿಯಾಗಿ ಪುರಾಣ ಪ್ರಸಿದ್ಧ ಕ್ಷೇತ್ರ ಇಟಗಿಯಲ್ಲಿಪ್ರತಿ ಸೋಮವಾರ ಮತ್ತು ಅಮಾವಾಸ್ಯೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ವಿಶ್ವಾವಸು ಸಂವತ್ಸರದ ಶ್ರಾವಣ ಮಾಸದಲ್ಲಿ ನಾಲ್ಕು ಸೋಮವಾರಗಳಿದ್ದು,28/07/2025 ಸೋಮವಾರ04/08/2025 ಸೋಮವಾರ11/08/2025 ಸೋಮವಾರ18/08/2025 ಸೋಮವಾರ
ಶ್ರೀಕ್ಷೇತ್ರ ಇಟಗಿಯಲ್ಲಿ ‘ಶಿವ ಶ್ರಾವಣ-ಶುಭ ಶ್ರಾವಣ’ Read More »
ಬಿಳಗಿ ಸೀಮಾ ಒಡೆಯ ಇಷ್ಟಿಕಾಧೀಶ್ವರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ವಿಶ್ವಾವಸುನಾಮ ಸಂವತ್ಸರದ ಶ್ರಾವಣ ಮಾಸವು ಪಾಡ್ಯ ಶುಕ್ರವಾರ ದಿನಾಂಕ 02-07-2025 ರಂದು ಆರಂಭವಾಗುವುದು. ಶ್ರೀದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಮತ್ತು ಪ್ರತಿ ಶ್ರಾವಣ ಸೋಮವಾರ ಶತರುದ್ರ ಪಾರಾಯಣ ಮತ್ತು ಹವನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕ್ಕೊಳ್ಳಲಾಗಿದ್ದು ಭಕ್ತರೆಲ್ಲರೂ ಸಹಕರಿಸ ಬೇಕಾಗಿ ವಿನಂತಿ.ರುದ್ರ ಪಾರಾಯಣದ ಸೇವಾ ಪಾವತಿ ರೂ
ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರಾವಣದ ಸಂಭ್ರಮ Read More »
ಹೆಸರಾಂತ ಭಾಗವತರು ರಾಘವೇಂದ್ರ ಆಚಾರಿ ಜನ್ಸಾಲೆ ಅವರ ರಾಗದಲ್ಲಿ “ಭೀಷ್ಮಾರ್ಜುನ” ಯಕ್ಷಗಾನ ತಾಳಮದ್ದಲೆ ನೆರವೇರಿತು. ದಿನಾಂಕ 26-06-2025 ಗುರುವಾರದಂದು ನೆಡೆದ ಈ ಕಾರ್ಯವನ್ನು ಕಲಾ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು.
ಶ್ರೀಕ್ಷೇತ್ರದಲ್ಲಿ ತಾಳಮದ್ದಲೆ. Read More »