news

ನೂತನ ಪುಷ್ಪರಥದ ಭೂಸ್ಪರ್ಶ :ಶ್ರೀಕ್ಷೇತ್ರ ಇಟಗಿ

ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೆತ್ರ ಇಟಗಿಯಲ್ಲಿ ನೂತನ ಪುಷ್ಪರಥದ ಭೂ ಸ್ಪರ್ಶ ಕಾರ್ಯಕ್ರಮ ಮತ್ತು ಶತರುದ್ರ ಪಾರಾಯಣ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿತು. ಬಹಳ ಹಿಂದಿನ ಕಾಲದ ಪುಷ್ಪರಥವು ಜೀರ್ಣಾವಸ್ತೆಗೆ ತಲುಪಿದ್ದು,2025 ಎಪ್ರಿಲ್ ನಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ನಂತರದಲ್ಲಿ ನೂತನ ಪುಷ್ಪರಥವನ್ನು ಮಾಡುವ ಸಂಕಲ್ಪವನ್ನು ಆಡಳಿತ ಕಮೀಟಿ ಮಾಡಿತ್ತು.ಅದರಂತಯೇ ವಿಶ್ವಾವಸು ಸಂವತ್ಸರದ ಆರಂಭದಲ್ಲಿ ಮಾಡಿದ್ದ ಸಂಕಲ್ಪದಂತೇ ವಿಶ್ವಾವಸು […]

ನೂತನ ಪುಷ್ಪರಥದ ಭೂಸ್ಪರ್ಶ :ಶ್ರೀಕ್ಷೇತ್ರ ಇಟಗಿ Read More »

ಶ್ರೀದೇವಸ್ಥಾನಕ್ಕೆ ನೂತನ ಪುಷ್ಪರಥ

ಶ್ರೀಕ್ಷೇತ್ರ ಇಟಗಿಗೆ ನೂತನವಾಗಿ ನಿರ್ಮಿತ ಗಜವಾಹನ ಪುಷ್ಪರಥೋತ್ಸವವು ದಿನಾಂಕ 08-02-2026 ರವಿವಾರ ತಡರಾತ್ರಿ ಬಂದಿರುತ್ತದೆ. ಶ್ರೀದೇವಸ್ಥಾನದ ಪುಷ್ಪರಥ(ಸಣ್ಣ ರಥ) ವು ಕಾಲಾನುಕ್ರಮೇಣ ಜೀರ್ಣವಾಗಿರುದರಿಂದ ಹೊಸದಾಗಿ ರಥವನ್ನು ನಿರ್ಮಿಸುವ ಕಾರ್ಯವನ್ನು ಶ್ರೀದೇವಸ್ಥಾನದ ಮೊಕ್ತೇಸರ ಮಂಡಳಿಯು ಭಕ್ತರ ಸಲಹೆಯೊಂದಿಗೆ ಮುಂದಾಗಿತ್ತು. ಸುಮಾರು 30 ಲಕ್ಷದ ವೆಚ್ಚದಲ್ಲಿ ರಥವನ್ನು ನಿರ್ಮಿಸಿದ್ದು, ಪರಮೇಶ್ವರ ಆಚಾರಿ ಕುಂದಾಪುರ ಇವರ ಸಮ್ಮುಖದಲ್ಲಿ ಸುಂದರವಾದ ರಥವು ಶ್ರೀಕ್ಷೇತ್ರ ಇಟಗಿಗೆ ಬಂದಿಳಿದಿರುತ್ತದೆ.

ಶ್ರೀದೇವಸ್ಥಾನಕ್ಕೆ ನೂತನ ಪುಷ್ಪರಥ Read More »

ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ತೇರಿನ ಆಮಂತ್ರಣ

ಬಿಳಗಿನ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಮಹಾರಥೋತ್ಸವವು ಇದೇ ಬರುವ ಫೆಬ್ರವರಿ 27 ರಂದು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತಾ. ಸರ್ವರನ್ನೂ ಈ ಮೂಲಕ ಆಮಂತ್ರಿಸುತ್ತಿದ್ದೇವೆ.

ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ತೇರಿನ ಆಮಂತ್ರಣ Read More »

ಶ್ರೀಕ್ಷೇತ್ರದ ತೇರಿನ ರಾಯಸ ಆಮಂತ್ರಣ

ಬಿಳಸೀಮಾ ಒಡೆಯ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರುಷದಂತೆ ನೆರವೇರುವ ಶ್ರೀ ರಾಮೇಶ್ವರನ ರಥೋತ್ಸವದ ರಾಯಸ ಆಮಂತ್ರಣ.

ಶ್ರೀಕ್ಷೇತ್ರದ ತೇರಿನ ರಾಯಸ ಆಮಂತ್ರಣ Read More »

ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪ್ರಯುಕ್ತ ಆದಿವಾಸ ಹೋಮ, ಶತರುದ್ರ ಹವನ,ಕಲಶಾಭಿಷೇಕ,ಮಹಾಬಲಿ ಹಾಗೂ ಸಂಕಲ್ಪ ಸಿದ್ಧಿ ರಥೋತ್ಸವ

ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಮಾರ್ಗಶಿರ ಅಮವಾಸ್ಯೆ (19-12-2025 ಶುಕ್ರವಾರ) ದೇವಸ್ಥಾನದ ತ್ರಿದೇವತಾ ಭಜಕರ ಮತ್ತು ಸೀಮಾ ಹಾಗೂ ಸಮಸ್ತ ಭಕ್ತರ ಶ್ರೇಯೋಭಿವೃದ್ಧಿಯನ್ನು ನೆನದು ಪ್ರತಿ ಅಮವಾಸ್ಯೆಯಂದು ನೆಡೆಯಲ್ಪಡುವ ಸಂಕಲ್ಪ ಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನ, ಆದಿವಾಸ ಹೋಮ, ಶತರುದ್ರ ಹವನ,ಕಲಾಭಿಷೇಕಗಳಾದಿಗಳಿಂದ ದೇವರಲ್ಲಿ ನೆರವೇರಿಸಲಾಯಿತು. ಹಲವಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೀಕ್ತವಾಗಿ ನೆರವೇರಿತು, ನಂತರ ಭಕ್ತಾದಿಗಳು ಪರ್ಯಾಪ್ತಿ ಅನ್ನ ಪ್ರಸಾದ ಭೋಜನವನ್ನು ಸ್ವೀಕರಿಸಿ ಕೃತಾರ್ಥರಾದರು.

ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪ್ರಯುಕ್ತ ಆದಿವಾಸ ಹೋಮ, ಶತರುದ್ರ ಹವನ,ಕಲಶಾಭಿಷೇಕ,ಮಹಾಬಲಿ ಹಾಗೂ ಸಂಕಲ್ಪ ಸಿದ್ಧಿ ರಥೋತ್ಸವ Read More »

ಶ್ರೀಕ್ಷೇತ್ರ ಇಟಗಿಯಲ್ಲಿ “ಶರನ್ನವರಾತ್ರಿ ಉತ್ಸವ”

|| ಶ್ರೀ ರಾಮೇಶ್ವರ ಪ್ರಸನ್ನ: || ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿ ತಾ॥ ಸಿದ್ದಾಪುರ (ಉ. ಕ.)  ಶ್ರೀ ವಿಶ್ವಾವಸು ನಾಮ ಸಂ|ದ ಆಶ್ವಯುಜ ಶುಕ್ಲ ಪ್ರತಿಪದೆ ದಿನಾಂಕ 22-09-2025 ಸೋಮವಾರದಂದು ಪ್ರತಿ ವರ್ಷದಂತೆ “ಶರನ್ನವರಾತ್ರಿ ಉತ್ಸವ ‘ವು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಪ್ರಾರಂಭವಾಗಲಿದ್ದು ದಿನಾಂಕ 02-10-2025 ಗುರುವಾರ ವಿಜಯದಶಮೀ ಪರ್ಯಂತ ಶ್ರದ್ಧಾಭಕ್ತಿಪೂರ್ವಕ ವಿಜೃಂಭಣೆಯಿಂದ ನಡೆಯಲಿದೆ.       * ಶರತ್ಕಾಲೇ ಮಹಾಪೂಜಾ ಕ್ರೀಯತೆ

ಶ್ರೀಕ್ಷೇತ್ರ ಇಟಗಿಯಲ್ಲಿ “ಶರನ್ನವರಾತ್ರಿ ಉತ್ಸವ” Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಕುಟುಂಬ ಪ್ರಭೋಧನ ಸಿದ್ದಾಪುರ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಂಯೋಜನೆಯಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ನೆಡೆಯಿತು.

ದಿನಾಂಕ 04-09-2025 ಗುರುವಾರ ಶ್ರೀಕ್ಷೇತ್ರ ಇಟಗಿಯ ಆವಾರದಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ಜರುಗಿತು. ಮುಖ್ಯ ವಕ್ತಾರರಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರು ಶ್ರೀ ಶಾಂತಾರಾಮ ಸಿದ್ಧಿ ಮತ್ತು ಶ್ರೀ ನಾಗರಾಜ ನಾಯ್ಕಡ್ ಸಿದ್ದಾಪುರ, ನಿವೃತ್ತ ದಂಡಾಧಿಕಾರರು ಹಾಗೂ ಶ್ರೀದೇವಸ್ಥಾನದ ಮೊಕ್ತೇಸರರಾದ ಶ್ರೀ ಚಂದ್ರಶೇಖರ ಹೆಗಡೆ ಕೊಡ್ತಗಣಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಪ್ರಮೋದ ಹೆಗಡೆ ಅವರು ಪ್ರಾರ್ಥನೆ ಮಾಡಿದರು. ಶ್ರೀ ವೆಂಕಟ್ರಮಣ ಹೆಗಡೆ ಹೊನ್ನೆಮಡಿಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಶ್ರೀ ಗಜಾನನ ಹೆಗಡೆ ನಿರ್ವಹಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ

ಶ್ರೀಕ್ಷೇತ್ರ ಇಟಗಿಯಲ್ಲಿ ಕುಟುಂಬ ಪ್ರಭೋಧನ ಸಿದ್ದಾಪುರ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಂಯೋಜನೆಯಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ನೆಡೆಯಿತು. Read More »

ಶ್ರೀಕ್ಷೇತ್ರ ಇಟಗಿಯ ಸಭಾಭವನದಲ್ಲಿ ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ನೆರವೇರಿತು.

ಶ್ರೀಕ್ಷೇತ್ರ ಇಟಗಿಯಲ್ಲಿ 02-09-2025 ಮಂಗಳವಾರ ನೆಡೆದ ಈ ಸಭೆಯು ಶ್ರೀದೇವಸ್ಥಾನದ ಆವಾರವಾದ ಸಭಾಭವನದಲ್ಲಿ ನೆರವೇರಿತು. ಸುಮಾರು 350 ಸದಸ್ಯರಿಗಿಂತಲೂ ಮಿಗಿಲಾಗಿ ಖಾತಾದಾರರು ಸೇರಿದ್ದರು. ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘವು ಅಂದಿನ ದಿನದ ಪರ್ಯಾಪ್ತಿ ಪ್ರಸಾದ ಭೋಜನದ ಸೇವಾಕರ್ತರಾಗಿದ್ದರು.

ಶ್ರೀಕ್ಷೇತ್ರ ಇಟಗಿಯ ಸಭಾಭವನದಲ್ಲಿ ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ನೆರವೇರಿತು. Read More »

ಬಿಳಗಿ ಸೀಮಾ ಒಡೆಯ ಶ್ರೀ ರಾಮೇಶ್ವರ ದೇವಸ್ಥಾನ ‌ಶ್ರೀಕ್ಷೇತ್ರ ಇಟಗಿಯಲ್ಲಿ ಚಂಡಿಕಾ ಹೋಮ ನೆರವೇರಿತು

ಸೇವಾಕರ್ತರು ಶ್ರೀಯುತ ಸೋಮೇಶ ಭಟ್ ಹಾವಿನಬೀಳು.

ಬಿಳಗಿ ಸೀಮಾ ಒಡೆಯ ಶ್ರೀ ರಾಮೇಶ್ವರ ದೇವಸ್ಥಾನ ‌ಶ್ರೀಕ್ಷೇತ್ರ ಇಟಗಿಯಲ್ಲಿ ಚಂಡಿಕಾ ಹೋಮ ನೆರವೇರಿತು Read More »

ಇಟಗಿಯಲ್ಲಿ ಅರ್ಥಪೂರ್ಣವಾಗಿ ನಡೆದ “ರಾಮನಿರ್ಯಾಣ” ತಾಳಮದ್ದಲೆ.

ಸಿದ್ದಾಪುರ; ತಾಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ನಡೆದ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಬಿಡುಗಡೆಯ ಸಮಾರಂಭದ ಸಂದರ್ಭದಲ್ಲಿ ಖ್ಯಾತ ಅರ್ಥಧಾರಿಗಳ ಕೂಡುವಿಕೆಯಲ್ಲಿ ಶನಿವಾರ ನಡೆದ “ರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಲೆ ತುಂಬಿದ ಸಭಾಂಗಣದಲ್ಲಿಯ ಪ್ರೇಕ್ಷಕರನ್ನು ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ರಾಮನಾಗಿ ಖ್ಯಾತ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಶ್ರೀ ರಾಮಚಂದ್ರನ ಮೇರು ವ್ಯಕ್ತಿತ್ವದ ಚಿತ್ರಣವನ್ನು ತಮ್ಮ ಅರ್ಥಗಾರಿಕೆಯಲ್ಲಿ ಸ್ಪಷ್ಟಪಡಿಸಿದರು. ಪ್ರೊ.ಪವನ ಕಿರಣಕೆರೆ ಲಕ್ಷö್ಮಣನಾಗಿ ಸಹೋದರ ಬಾಂಧವ್ಯವನ್ನು ವಿಷದಪಡಿಸಿದರು. ಕಾಲಪುರುಷನಾಗಿ ಪವನ ಕಿರಣಕೆರೆ ರಾಮನ ಅಂತ್ಯದ

ಇಟಗಿಯಲ್ಲಿ ಅರ್ಥಪೂರ್ಣವಾಗಿ ನಡೆದ “ರಾಮನಿರ್ಯಾಣ” ತಾಳಮದ್ದಲೆ. Read More »

Scroll to Top