ಅಷ್ಟಬಂಧ ಮಹೋತ್ಸವದ ಉಪಸೇವಾ ಸಮೀತಿ ಪ್ರಕಟಣೆ

ದಿನಾಂಕ 05/02/2025 ಬುಧವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ಅಷ್ಟಬಂಧ ಮಹೋತ್ಸವದ ಉಪ ಸಮೀತಿಗಳ ಸದಸ್ಯರ ಹೆಸರುಗಳನ್ನು ಪ್ರಕಟಗೊಳಿಸಲಾಯಿತು.ಅಷ್ಟಬಂಧ ಸಮೀತಿಯ ಅಧ್ಯಕ್ಷರಾಗಿರುವ ಶಶಿಭೂಷಣ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿಮಹತ್ಕಾರ್ಯವಾಗಿರುವ ದಿವ್ಯ ಅಷ್ಟಬಂಧ ಮಹೋತ್ಸವಕ್ಕೆ ಅವಶ್ಯವಿರುವ ಅನೇಕ ಉಪ ಸಮೀತಿಗಳ ಮುಖ್ಯಸ್ಥರು ಮತ್ತು ಸದಸ್ಯರುಗಳ ಹೆಸರುಗಳನ್ನು ಪ್ರಸ್ತಾಪಿಸಿ ಎಲ್ಲ ಸಮೀತಿ ಸದಸ್ಯರಿಗೂ ಆಮಂತ್ರಣ ಪತ್ರಿಕೆ ನೀಡಲಾಯಿತು.ಅಧ್ಯಕ್ಷೀಯ ನುಡಿಯನ್ನು ಆಡಿದ ಡಾ|| ಶಶಿಭೂಷಣ ಹೆಗಡೆ ದೊಡ್ಮನೆಯವರು, ‘ ಇದು ಕೇವಲ ನಮ್ಮ ಸೀಮೆಗಲ್ಲದೇ ತಾಲ್ಲೂಕು,ಜಿಲ್ಲೆಗೂ ಹೆಮ್ಮೆಯ ಕಾರ್ಯಕ್ರಮ.ಈ ಕಾರ್ಯವನ್ನು ಬಹಳ […]

ಅಷ್ಟಬಂಧ ಮಹೋತ್ಸವದ ಉಪಸೇವಾ ಸಮೀತಿ ಪ್ರಕಟಣೆ Read More »

ಶ್ರೀ ಕ್ಷೇತ್ರ ಇಟಗಿಯಲ್ಲಿ ಶತರುದ್ರ ಪಾರಾಯಣ

ಶ್ರೀ ಕ್ಷೇತ್ರ ಇಟಗಿಯಲ್ಲಿ ಅನಾದಿಕಾಲದಿಂದ ನಡೆಸಿಕೊಂಡು ಬರುತ್ತಿರುವ ತ್ರಿದೇವತಾ ಪೂಜೆಯ ಒಂದು ಭಾಗವಾದ, ಪ್ರತಿ ಅಮಾವಾಸ್ಯೆಯಂದು ನಡೆಯುವ ಶತರುದ್ರ ಪಾರಾಯಣ ಸೇವೆಯು ದಿನಾಂಕ:29/01/2025 ಬುಧವಾರ ಸಂಪನ್ನಗೊಂಡಿತು.ಅನೇಕ ವೈದಿಕರ ಸಮ್ಮುಖದಲ್ಲಿ ನಡೆಯುವ ಈ ಶತರುದ್ರ ಪಾರಾಯಣವನ್ನು, ಲೋಕಕಲ್ಯಾಣಾರ್ಥವಾಗಿ ಮಾಡುತ್ತ ಬಂದಿದ್ದು ಈ ದಿನ ಅನ್ನಸಂತರ್ಪಣೆ ನಡೆಯುವುದು ಶ್ರೀ ಕ್ಷೇತ್ರದ ವಿಶೇಷತೆಯನ್ನು ಎತ್ತಿ ಹಿಡಿಯುತ್ತದೆ

ಶ್ರೀ ಕ್ಷೇತ್ರ ಇಟಗಿಯಲ್ಲಿ ಶತರುದ್ರ ಪಾರಾಯಣ Read More »

ಇಟಗಿಯಲ್ಲಿ ನಡೆದ ತುಲಾಭಾರ ಸೇವೆ

ರಾಧಾಕೃಷ್ಣ ಸುಬ್ರಾಯ ಹೆಗಡೆ ಹರಗಿ ಇವರು ತಮ್ಮ ಸಕುಟುಂದೊಂದಿಗೆ ಇಟಗಿಯಲ್ಲಿ ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ, ತಮ್ಮ ಎಲ್ಲ ಮನಸಂಕಲ್ಪಗಳ ಸಿದ್ಧೀಗೋಸ್ಕರ ಮತ್ತು ಪುಣ್ಯ ಪ್ರಾಪ್ತಿಗಾಗಿ ತುಲಭಾರ ಸೇವೆ ಮತ್ತು ಶತರುದ್ರ ಹವನ ಸೇವೆಯನ್ನು ತಾಂತ್ರಿಕರಾದ ಅನಂತ ಭಟ್ಟರು ಮತ್ತು ವೇ.ಮೂ ಮಂಜುನಾಥ ಭಟ್ಟರ ನೇತೃತ್ವದಲ್ಲಿ ಮತ್ತು ವೈದಿಕರ‌ ಸಹಯೋಗದಲ್ಲಿ ನೆರವೇರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

ಇಟಗಿಯಲ್ಲಿ ನಡೆದ ತುಲಾಭಾರ ಸೇವೆ Read More »

ಇಟಗಿ ಕ್ಷೇತ್ರದಲ್ಲಿ ನಡೆದ ಕಾಳಸರ್ಪಶಾಂತಿ

ನವೀನ್ ಬೆಂಗಳೂರು ಎಂಬುವವರು ತಮ್ಮ ಸಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ,ತಮಗೆ ಕಾಡುತ್ತಿರುವ ಕಾಳಸರ್ಪದೋಷ ಮತ್ತು ಜಾತಕದಲ್ಲಿ ಇರುವಂತಹ ಸರ್ವ ದೋಷಗಳು ನಿವಾರಣೆಯಾಗಬೇಕೆಂದು ಸಂಕಲ್ಪಿಸಿ, ನವಗ್ರಹ ಶಾಂತಿ,ದುರ್ಗಾಹೋಮ,ಭಾಗ್ಯ ಹೋಮ,ಮತ್ತು ಕಾಳ‌ಸರ್ಪಶಾಂತಿಯಂತಹ ವಿಶೇಷ ಕಾರ್ಯಕ್ರಮಗಳನ್ನು ದೇವಸ್ಥಾನದ ತಾಂತ್ರಿಕರಾದ ಅನಂತ‌ ಭಟ್ಟರವರ ನೇತೃತ್ವದಲ್ಲಿ ಮತ್ತು ವೈದಿಕರ ಸಹಯೋಗದಲ್ಲಿ ನಡೆಸಿ ದೋಷಮುಕ್ತ ಮಾಡುವಂತೆ ರಾಮೇಶ್ವರನಲ್ಲಿ ತುಂಬು ಮನಸ್ಸಿನಿಂದ ಪ್ರಾರ್ಥಿಸಿದರು.

ಇಟಗಿ ಕ್ಷೇತ್ರದಲ್ಲಿ ನಡೆದ ಕಾಳಸರ್ಪಶಾಂತಿ Read More »

ಶ್ರೀ ಕ್ಷೇತ್ರದಲ್ಲಿ ದುರ್ಗಾಹವನ

ದಿನಾಂಕ:13/01/2025 ಸೋಮವಾರ,ಶ್ರೀ ಕ್ಷೇತ್ರದಲ್ಲಿ ತ್ರಿದೇವತಾ ಪೂಜೆಯ ಅಂಗವಾದ ದುರ್ಗಾಹವನ ಸೇವೆಯು ಪುಷ್ಯ ಮಾಸದ ಹುಣ್ಣಿಮೆಯಂದು ಮಾತೆ ಪಾರ್ವತಿ ದೇವಿಯ ಸನ್ನಿಧಾನದಲ್ಲಿ ಸಮರ್ಪಣೆ ಆಯಿತು.ಶ್ರೀ ಕ್ಷೇತ್ರ ಇಟಗಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುವ ತ್ರಿದೇವತಾ ಪೂಜೆಯು ವಿಶೇಷ ಪೂಜೆಗಳಲ್ಲಿ ಒಂದಾಗಿದೆ.

ಶ್ರೀ ಕ್ಷೇತ್ರದಲ್ಲಿ ದುರ್ಗಾಹವನ Read More »

ವಿವಾಹರ್ಥವಾಗಿ ಪುರುಷಸೂಕ್ತಹೋಮ

ದಿನಾಂಕ:05/01/2025 ಭಾನುವಾರ ಅನ್ವಿತಾ ಶ್ರೀಕಾಂತ ಬೆಂಗಳೂರು ಅವರ ಕುಟುಂಬದವರು ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ಶೀಘ್ರವಾಗಿ ವಿವಾಹ ಭಾಗ್ಯ ಪ್ರಾಪ್ತಿಯಾಗಲೆಂದು ಶ್ರೀ ವಿಠ್ಠಲ ದೇವರಲ್ಲಿ ಪ್ರಾರ್ಥಿಸಿ ಪುರುಷಸೂಕ್ತ ಹೋಮ ಸೇವೆಯನ್ನು ಸಲ್ಲಿಸಿದರು.ಯಜಮಾನ ಕುಟುಂಬದವರು, ಶ್ರೀ ಕ್ಷೇತ್ರ ಇಟಗಿಯ ಸುಂದರ ಪರಿಸರ ನೋಡಿ ‘ಮತ್ತೆ ಮತ್ತೆ ಬರುವ ಆಸೆ ಮನಸ್ಸಿನಲ್ಲಿ ಮೂಡುತ್ತಿದೆ ‘ ಎಂದು ಭಾವನಾತ್ಮಕವಾಗಿ ತಮ್ಮ ಸಂತೋಷ ವ್ಯಕ್ತಪಡಿಸಿದರು

ವಿವಾಹರ್ಥವಾಗಿ ಪುರುಷಸೂಕ್ತಹೋಮ Read More »

ಸಂಕಲ್ಪ ಸಿದ್ಧಿಗೆ ನೇರವೇರಿದ ಶತರುದ್ರ ಹೋಮ

ದಿನಾಂಕ:31/12/2024 ಮಂಗಳವಾರದಂದು ಇಟಗಿ ಕ್ಷೇತ್ರದ ಯಾವತ್ತೂ ಆರಾಧಕರು ಆದಂತಹ ಜಯಪ್ರಕಾಶ ಎನ್ ಹೆಗಡೆ ಹರಗಿ (ಹಿರಿಯ ನ್ಯಾಯವಾದಿಗಳು) ತಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕೌಟುಂಬಿಕ ಸಮಸ್ಯೆಗಳ ನಿವಾರಣೆ ಮತ್ತು ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೋಸ್ಕರವಾಗಿ ಪೂರ್ವದಲ್ಲೇ ಸಂಕಲ್ಪಿಸಿದಂತೆ ಶ್ರೀ ದೇವರ ಸನ್ನಿಧಿಯಲ್ಲಿ ಶತರುದ್ರ ಹವನ ಸೇವೆ ಮಾಡಿಸಿ,ಹಲವು ಭಕ್ತರಿಗೆ ಅನ್ನಸಂತರ್ಪಣೆಯನ್ನು ಮಾಡುವುದರ ಮೂಲಕ ಶ್ರೀ ದೇವರ ರಕ್ಷೆಗೆ ಪಾತ್ರರಾದರು

ಸಂಕಲ್ಪ ಸಿದ್ಧಿಗೆ ನೇರವೇರಿದ ಶತರುದ್ರ ಹೋಮ Read More »

ಶ್ರೀ ದೇವಸ್ಥಾನದದಲ್ಲಿ ಅಮವಾಸ್ಯೇ ಶತರುದ್ರ ಪಾರಾಯಣ

ದಿನಾಂಕ:30/12/2024 ಸೋಮವಾರದಂದು ಶ್ರೀ ಕ್ಷೇತ್ರ ಇಟಗಿಯಲ್ಲಿ ತ್ರಿದೇವತಾ ಪೂಜೆಯಲ್ಲಿ ಒಂದಾದ ಅಮವಾಸ್ಯೆಯ ಶತರುದ್ರ ಪಾರಾಯಣ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಸಂಪನ್ನಗೊಂಡಿತು. ಈ ಅಮಾವಾಸ್ಯೆಯು ಶ್ರೀ ರಾಮೇಶ್ವರನಿಗೆ ಪ್ರಿಯವಾದ ಸೋಮವಾರವೇ ಬಂದಿರುವುದರಿಂದ ವಿಶೇಷ ದಿನ ಶ್ರೀ ರಾಮೇಶ್ವರನ ದರ್ಶನ ಪಡೆದು ಪ್ರಸಾದ ಸ್ವೀಕರಿಸಲು ಅನೇಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.

ಶ್ರೀ ದೇವಸ್ಥಾನದದಲ್ಲಿ ಅಮವಾಸ್ಯೇ ಶತರುದ್ರ ಪಾರಾಯಣ Read More »

ಇಟಗಿ ಸೊಸೈಟಿ ವತಿಯಿಂದ ಶತರುದ್ರ ಹೋಮ

ದಿನಾಂಕ:29/12/2024 ಭಾನುವಾರಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕ ಮಂಡಳಿಯ ಎಲ್ಲ‌ ಸದಸ್ಯರು ಶ್ರೀ ಕ್ಷೇತ್ರದ ಶ್ರೀ ರಾಮೇಶ್ವರನ ಸನ್ನಿಧಿಯಲಯಲ್ಲಿ ಪೂರ್ವ ಸಂಕಲ್ಪದಂತೆ ಶತರುದ್ರ ಹವನವನ್ನು ಮತ್ತು ಅನ್ನಸಂತರ್ಪಣೆ ನೇರವೇರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಇಟಗಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ತಮ್ಮ‌ ತಂಡವು ಗೆದ್ದರೆ ಶತರುದ್ರ ಹವನವನ್ನು ಸಲ್ಲಿಸುತ್ತೇವೆ ಎಂದು ಸಂಕಲ್ಪಿಸಿಕೊಂಡಿದ್ದರು.ಅದರಂತೇಯೇ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಈ ತಂಡವು ಆಯ್ಕೆಯಾಗಿದ್ದು ಸಂತಸದಿಂದ ಶ್ರೀ ರಾಮೇಶ್ವನ ಪದತಲದಲ್ಲಿ ಸೇವೆಯನ್ನು ಸಮರ್ಪಿಸಿ ಇನ್ನಷ್ಟು

ಇಟಗಿ ಸೊಸೈಟಿ ವತಿಯಿಂದ ಶತರುದ್ರ ಹೋಮ Read More »

ಇಟಗಿಯಲ್ಲಿ ಸ್ಟಾರ್ ಸುವರ್ಣ ಸಂಕಲ್ಪದ ಶ್ರೀ ಗೋಪಾಲಕೃಷ್ಣ ಶರ್ಮರು

ದಿನಾಂಕ:20-21 ಡಿಸೆಂಬರ್ ಶುಕ್ರವಾರ ಮತ್ತು ಶನಿವಾರ,ಪ್ರಸಿದ್ಧ ಸ್ಟಾರ್ ಸುವರ್ಣ ಸಂಕಲ್ಪ‌ ಕಾರ್ಯಕ್ರಮದ ವಿದ್ವಾನ್ ಗೋಪಾಲಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಎರಡೂ ದಿನಗಳ ಕಾಲ ಶ್ರೀ ಕ್ಷೇತ್ರ ಇಟಗಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ತಮ್ಮ ಕುಟುಂಬದಲ್ಲಿರುವ ಕೆಲವು ದೋಷ ನಿವಾರಣೆಗೋಸ್ಕರವಾಗಿ ಮತ್ತು ಕುಟುಂಬದಲ್ಲಿನ‌ ಉತ್ತರೋತ್ತರ ಅಭಿವೃದ್ಧಿಗಾಗಿ ,ದೂರದ ರಬಕವಿಯ ಸದಾಶಿವ ನಾಯ್ಕರವರು ತಮ್ಮ ಸ್ನೇಹಿತರೊಂದಿಗೆ ಆಗಮಿಸಿ ಶಕ್ತಿ ಕೇಂದ್ರವಾದ ಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಶತರುದ್ರಹವನ,ಜಪ,ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಸಿದರು. ಶ್ರೀ ರಾಮೇಶ್ವರ ಮತ್ತು ಮಾತೆ

ಇಟಗಿಯಲ್ಲಿ ಸ್ಟಾರ್ ಸುವರ್ಣ ಸಂಕಲ್ಪದ ಶ್ರೀ ಗೋಪಾಲಕೃಷ್ಣ ಶರ್ಮರು Read More »

Scroll to Top